ಮಡಿಕೇರಿ, ಅ. ೧೩: ಐತಿಹಾಸಿಕ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿಜಯದಶಮಿಯ ರಾತ್ರಿಯ ಭವ್ಯ ದಶಮಂಟಪಗಳ ಶೋಭಾಯಾತ್ರೆಗೆ ಸಂಬAಧಿಸಿದAತೆ ದಶಮಂಟಪ ಸಮಿತಿಯು ಮಾರ್ಗಸೂಚಿ ಮತ್ತು ನಿಯಮಾವಳಿಗಳನ್ನು ಪ್ರಕಟಿಸಿದೆ.
ಶೋಭಾಯಾತ್ರೆಯನ್ನು ಅತ್ಯಂತ ಶಿಸ್ತುಬದ್ಧವಾಗಿ, ಸಮಯಕ್ಕೆ ಸರಿಯಾಗಿ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಎಲ್ಲಾ ಮಂಟಪ ಸಮಿತಿಗಳು ಪಾಲಿಸಬೇಕಾದ ೨೫ ಕಡ್ಡಾಯ ಷರತ್ತುಗಳು ಮತ್ತು ವಿಶೇಷ ಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಮಂಟಪ ಪ್ರದರ್ಶನಕ್ಕೆ ಗರಿಷ್ಠ ೨೨ ನಿಮಿಷಗಳ ಕಾಲಾವಕಾಶ ಮಾತ್ರ ನಿಗದಿ, ಕೇವಲ ೨ ಟ್ರಾö್ಯಕ್ಟರ್ಗಳನ್ನು (೬+೬ ಚಕ್ರಗಳುಳ್ಳ ಟಯರ್) ಮಾತ್ರ ಬಳಸಲು ಅವಕಾಶ.ಲೇಸರ್ ಲೈಟ್, ಪ್ಲಾಸ್ಟಿಕ್ ಪೇಪರ್ ಬ್ಲಾಸ್ಟ್, ಸೀಮೆಎಣ್ಣೆ, ಪೆಟ್ರೋಲ್ ಹಾಗೂ ಅಪಾಯಕಾರಿ ಸಿಡಿಮದ್ದುಗಳಿಗೆ ಸಂಪೂರ್ಣ ನಿಷೇಧ. ಸಮಯ ಮೀರಿದರೆ ೫ ಅಂಕ ಕಡಿತ; ತಡವಾದರೆ ಕೊನೆಯಲ್ಲಿ ಪ್ರದರ್ಶನ ಹಾಗೂ ಸಮಯ ಪಾಲನೆ ಅಂಕ ಶೂನ್ಯ.
ಪಾಶ್ಚಾತ್ಯ ಹಾಡುಗಳಿಗೆ ಕಡಿವಾಣ, ಭಕ್ತಿ ಸಂಗೀತಕ್ಕೆ ಮೊದಲ ಪ್ರಾಶಸ್ತö್ಯ, ಧ್ವನಿವರ್ಧಕಕ್ಕೆ ಯಾವುದೇ ಕ್ರೇನ್ ಬಳಸುವಂತಿಲ್ಲ, ಗರಿಷ್ಠ ೧೨ ಬಾಕ್ಸ್ಗಳಿಗೆ ಮಾತ್ರ ಮಿತಿ. ಎಲ್ಲಾ ಮಂಟಪ ಸಮಿತಿಗಳು ಕಡ್ಡಾಯವಾಗಿ ೨ ಟ್ರಾö್ಯಕ್ಟರ್ಗಳನ್ನು ಮಾತ್ರ (೬+೬ ಚಕ್ರಗಳುಳ್ಳ ಟಯರ್ಗಳು) ಬಳಸಬೇಕು. ಟ್ರಾö್ಯಕ್ಟರ್ ಹೊರತುಪಡಿಸಿ ಇನ್ಯಾವುದೇ ವಾಹನಗಳಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸುವಂತಿಲ್ಲ.
ಕಲಾಕೃತಿಗಳ ಚಲನವಲನಕ್ಕೆ ಬಳಸುವ ಕ್ರೇನ್ಗಳನ್ನು ಸಹ ಟ್ರಾö್ಯಕ್ಟರ್ನಲ್ಲೇ ಅಳವಡಿಸತಕ್ಕದ್ದು. ಕಲಾಕೃತಿಗಳನ್ನು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ನಿಲ್ಲಿಸಿ ಪ್ರದರ್ಶನ ಮಾಡುವಂತಿಲ್ಲ; ಎಲ್ಲವೂ ೨ ಟ್ರ್ಯಾಕ್ಟರ್ಗಳಲ್ಲೇ ಜೋಡಣೆಗೊಂಡಿರಬೇಕು. ಮಂಟಪದಲ್ಲಿರುವ ಮುಖ್ಯ ದೇವತಾ ವಿಗ್ರಹಗಳು ಸಂಪೂರ್ಣ ಆಕೃತಿಯನ್ನು ಹೊಂದಿರಬೇಕು ಹಾಗೂ ಯಾವುದೇ ವಿಕೃತಿಗಳನ್ನು ಹೊಂದಿರಬಾರದು. ಪ್ರತಿ ಮಂಟಪವು ತಮ್ಮ ದೇವಸ್ಥಾನದ ಆವರಣದಲ್ಲೇ ಮಂಟಪ ಸಿದ್ಧತೆ ನಡೆಸಿ ಶೋಭಾಯಾತ್ರೆಗೆ ಆಗಮಿಸಬೇಕು. ತೀರ್ಪುಗಾರಿಕೆ ನಡೆಯುವ ಸ್ಥಳದಲ್ಲಿ ಯಾವುದೇ ಸಿದ್ಧತೆ ನಡೆಸುವಂತಿಲ್ಲ.
ಬೆಳಕಿನ ವ್ಯವಸ್ಥೆಗೆ ಮತ್ತು ಧ್ವನಿವರ್ಧಕಕ್ಕೆ ಯಾವುದೇ ಕಟ್ಟಡಗಳನ್ನು ಬಳಸಿಕೊಳ್ಳುವಂತಿಲ್ಲ. ಧ್ವನಿವರ್ಧಕಕ್ಕೆ ೧ ವಾಹನ ಹಾಗೂ ಲೈಟಿಂಗ್ ವ್ಯವಸ್ಥೆಗೆ ೧ ಲಘು ವಾಹನ ಬಳಸಲು ಅವಕಾಶವಿದೆ. ಧ್ವನಿವರ್ಧಕಗಳಿಗೆ ಯಾವುದೇ ರೀತಿಯ ಕ್ರೇನ್ ಬಳಸುವಂತಿಲ್ಲ. ಕಡ್ಡಾಯವಾಗಿ ಗರಿಷ್ಠ ೧೨ ಬಾಕ್ಸ್ಗಳಿಂದ ಕೂಡಿದ ಧ್ವನಿವರ್ಧಕವನ್ನು ಮಾತ್ರ ಬಳಸಬೇಕು.
ಪೊಲೀಸ್ ಇಲಾಖೆಯ ನಿಯಮದಂತೆ ಧ್ವನಿ ಮಿತಿ ಅನುಸರಿಸಬೇಕು. ಚಿತ್ರಗೀತೆ ಹಾಗೂ ಪಾಶ್ಚಾತ್ಯ ಸಂಗೀತವನ್ನು ಹೊರತುಪಡಿಸಿ, ಭಕ್ತಿ ಸಂಗೀತಕ್ಕೆ ಪ್ರಾಶಸ್ತö್ಯ ನೀಡಬೇಕು. ಒಂದು ಮಂಟಪ ಪ್ರದರ್ಶನ ನೀಡುತ್ತಿರುವಾಗ ಅದರ ಮುಂಭಾಗ ಹಾಗೂ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಹಿಂಭಾಗದಲ್ಲಿರುವ ಮಂಟಪಗಳು ತಮ್ಮ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು.
ತೀರ್ಪುಗಾರರ ಅವಗಾಹನೆಗಾಗಿ ಪ್ರತಿ ಮಂಟಪ ಸಮಿತಿಯವರು ಆಯಾ ಮಂಟಪದ ಕಥಾಸಾರಾಂಶವನ್ನು ೪ ದಿನ ಮುಂಚಿತವಾಗಿ ದಶಮಂಟಪ ಸಮಿತಿ ಅಧ್ಯಕ್ಷರಿಗೆ ಸಲ್ಲಿಸಬೇಕು. ದಶಮಂಟಪಗಳು ಆಯ್ಕೆ ಮಾಡಿದ ತಜ್ಞರಲ್ಲಿ ೪ ಜನರನ್ನು ಅಂತಿಮ ತೀರ್ಪುಗಾರರನ್ನಾಗಿ ನೇಮಿಸಲಾಗುತ್ತದೆ. ತೀರ್ಪುಗಾರರು ಬಂದಾಗ ವೀಕ್ಷಣೆಗೆ ಸಮಿತಿ ಪದಾಧಿಕಾರಿಗಳು ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕು.
ಶೋಭಾಯಾತ್ರೆಯ ವೇಳೆ ತಾಂತ್ರಿಕ ದೋಷ ಕಂಡುಬAದರೆ ಹಿಂಬದಿಯ ಮಂಟಪಗಳಿಗೆ ಮುನ್ನಡೆಯಲು ಜಾಗ ಬಿಟ್ಟು ಶೋಭಾಯಾತ್ರೆ ಸರಾಗವಾಗಿ ಸಾಗಲು ಸಹಕರಿಸಬೇಕು. ಐತಿಹಾಸಿಕ ಮಡಿಕೇರಿ ದಸರಾ ಶೋಭಾಯಾತ್ರೆಯು ಶಿಸ್ತುಬದ್ಧವಾಗಿ ಮತ್ತು ಭಕ್ತಿಪೂರ್ವಕವಾಗಿ ಯಶಸ್ವಿಯಾಗಲು ಎಲ್ಲಾ ಮಂಟಪ ಸಮಿತಿಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ನಿಯಮಾವಳಿಗಳಿಗೆ ಬದ್ಧರಾಗಿ ಸಹಕರಿಸುವಂತೆ ದಶಮಂಟಪ ಸಮಿತಿ ವಿನಂತಿಸಿದೆ.