ಮಡಿಕೇರಿ, ಅ. ೧೨: ಮಡಿಕೇರಿ ಗಾಳಿಬೀಡಿನಲ್ಲಿರುವ ಪಿ.ಎಂ.ಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ೯ ಮತ್ತು ೧೧ನೇ ತರಗತಿಯಲ್ಲಿ ಖಾಲಿಯಿರುವ ಸ್ಥಾನಗಳಿಗೆ ಪ್ರವೇಶ ಪಡೆಯಲು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ತಾ. ೧೫ ರವರೆಗೆ ವಿಸ್ತರಿಸಲಾಗಿದೆ.
ಆಸಕ್ತರು ಇದರ ಲಾಭವನ್ನು ಪಡೆದುಕೊಳ್ಳು ವಂತೆ ಕೋರಿದೆ. ೯ನೇ ತರಗತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊಡಗಿನವರೇ ಆಗಿದ್ದು ಪೋಷಕರೂ ಕೂಡ ಕೊಡಗಿನವರೇ ಆಗಿರಬೇಕು.
ಆಧಾರ ಕಾರ್ಡ್ನಲ್ಲಿ ಕೊಡಗಿನ ವಾಸಸ್ಥಳದ ವಿಳಾಸವೇ ಇರಬೇಕು. ೧೧ನೇ ತರಗತಿಗೆ ರಾಜ್ಯದ ಯಾವ ಜಿಲ್ಲೆಯವ ರಾದರೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ವೆಬ್ಸೈಟ್ hಣಣಠಿs://ಟಿಚಿvoಜಚಿಥಿಚಿ.gov.iಟಿ ನ್ನು ಸಂಪರ್ಕಿಸಬಹುದು ಎಂದು ನವೋದಯ ವಿದ್ಯಾಲಯದ ಪ್ರಾಂಶುಪಾಲ ಡಾ. ಸಜೀವ ಕೆ. ವಾವಚನ್ ತಿಳಿಸಿದ್ದಾರೆ.