ವೀರಾಜಪೇಟೆ, ಅ. ೧೨: ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೀರಾಜಪೇಟೆ ಸಮೀಪದ ಕುಕ್ಲೂರು ಗ್ರಾಮದವರಾದ ಶರಣ್ಯರಾವ್ ಎಚ್ ಅವರು ಮೇಜರ್ ಆಗಿ ಬಡ್ತಿ ಪಡೆದಿದ್ದಾರೆ.

ಸಮೀಪದ ಕುಕ್ಲೂರು ಗ್ರಾಮದವರಾದ ಶರಣ್ಯ ರಾವ್ ಎಚ್ ಅವರು ರಾಜಸ್ಥಾನದ ಜೈಸಲ್ಮೇರ್‌ನ ಆಮರ‍್ಡ್ ವರ್ಕ್ ಶಾಪ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೨೧ ನವೆಂಬರ್ ನಲ್ಲಿ ಚೆನ್ನೆöÊನ ಆಫಿರ‍್ಸ್ ಟ್ರೆöÊನಿಂಗ್ ಅಕಾಡೆಮಿಯಲ್ಲಿ ಭಾರತೀಯ ಸೇನೆಯ ಇಎಂಇ ಕಾರ್ಪ್ಸ್ ಕಮಿಷನ್ ಹೊಂದಿದ್ದರು.

ಮೇ. ಶರಣ್ಯ ರಾವ್ ಎಚ್ ಅವರು ಸಮೀಪದ ಕುಕ್ಲೂರು ಗ್ರಾಮದ ಹರೀಶ್ ರಾವ್ ಎಸ್ ಹಾಗೂ ಶಿಕ್ಷಕಿ ಮೈಥಿಲಿ ರಾವ್ ಎಚ್ ಅವರ ಪುತ್ರಿ.

ಶರಣ್ಯರಾವ್ ಎಚ್ ಅವರು ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಕಾವೇರಿ ಕಾಲೇಜಿನಲ್ಲಿ ಪಿ.ಯು, ಇಂಜಿನಿಯರಿAಗ್ ಪದವಿಯನ್ನು ಪೊನ್ನಂಪೇಟೆಯ ಸಿಐಟಿ ವಿದ್ಯಾಸಂಸ್ಥೆಯಲ್ಲಿ ಪಡೆದು ಬಳಿಕ ಮೂಡುಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಎಂ.ಎಸ್.ಡಬ್ಲೂö್ಯ ಪದವಿ ಪಡೆದುಕೊಂಡಿದ್ದಾರೆ.