ಮಡಿಕೇರಿ, ಅ. ೧೩: ಕೊಡಗು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ದಸರಾ ಹಬ್ಬ ಹಾಗೂ ಆಯುಧ ಪೂಜೆ ಹಾಗೂ ತಲಕಾವೇರಿಯಲ್ಲಿ ತೀರ್ಥೋದ್ಭವದ ಪ್ರಯುಕ್ತ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಈ ಕೆಳಕಂಡ ಸ್ಥಳ ಮತ್ತು ದಿನಾಂಕಗಳAದು ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೊಟೇಲ್ ಮತ್ತು ಕ್ಲಬ್ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಅದರಂತೆ ದಿನಾಂಕ ೨೦ ರಂದು ಬೆಳಗ್ಗೆ ೬ ಗಂಟೆಯಿAದ ಮಧ್ಯ ರಾತ್ರಿ ೧೨ ಗಂಟೆಯವರೆಗೆ ಸುಂಟಿಕೊಪ್ಪ, ೭ನೇ ಹೊಸಕೋಟೆ, ಕಂಬಿಬಾಣೆ ಮತ್ತು ಕೊಡಗರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ,
ದಿನಾಂಕ ೨೧ ರ ಬೆಳಿಗ್ಗೆ ೬ ಗಂಟೆಯಿAದ ದಿನಾಂಕ ೨೨ ರ ಸಂಜೆ ೬ ಗಂಟೆಯವರೆಗೆ ಮಡಿಕೇರಿ ನಗರ ಠಾಣಾ ಸರಹದ್ದಿನ ಸುತ್ತಮುತ್ತ ೫ ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಸುಂಟಿಕೊಪ್ಪ, ಕುಶಾಲನಗರ ಹಾಗೂ ಬೆಟ್ಟಗೇರಿ, ಮುರ್ನಾಡು ನಗರ ವ್ಯಾಪ್ತಿಯವರೆಗೆ, ದಿನಾಂಕ ೨೧ ರ ಬೆಳಿಗ್ಗೆ ೬ ಗಂಟೆಯಿAದ ದಿನಾಂಕ ೨೨ರ ಬೆಳಿಗ್ಗೆ ೧೦ ಗಂಟೆಯವರೆಗೆ ಗೋಣಿಕೊಪ್ಪ ನಗರ ಹಾಗೂ ಅದರ ಸುತ್ತಮುತ್ತಲಿನ ೧೦ ಕಿ.ಮೀ ವ್ಯಾಪ್ತಿಯಲ್ಲಿ ಹಾಗೂ ಪೊನ್ನಂಪೇಟೆ ತಾಲೂಕಿನಾದ್ಯಂತ ಮತ್ತು ವೀರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅಮ್ಮತ್ತಿ, ಬಿಟ್ಟಂಗಾಲ, ಸಿದ್ಧಾಪುರ ಠಾಣಾ ವ್ಯಾಪ್ತಿ, ಪಾಲಿಬೆಟ್ಟ ವ್ಯಾಪ್ತಿಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ತಲಕಾವೇರಿಯಲ್ಲಿ ತಾ. ೧೭ ರ ರಾತ್ರಿ ೭.೫೦ ಗಂಟೆಗೆ ಕಾವೇರಿ ತೀರ್ಥೋದ್ಭವ ನಡೆಯಲಿದ್ದು, ಸಾರ್ವಜನಿಕ ಹಿತಾಸಕ್ತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ತಾ. ೧೭ ರಂದು ಬೆಳಿಗ್ಗೆ ೬ ಗಂಟೆಯಿAದ ಅದೇ ದಿನ ಮಧ್ಯರಾತ್ರಿ ೧೨ ಗಂಟೆಯವರೆಗೆ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೊಟೇಲ್ ಮತ್ತು ಕ್ಲಬ್ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.