ಮಡಿಕೇರಿ, ಅ. ೧೨: ಪರಿಶಿಷ್ಟ ಪಂಗಡಕ್ಕೆ ಒಳಪಡುವ ಫಲಾನುಭವಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಲಭ್ಯವಾದ ಕೃಷಿ ಭೂಮಿಯನ್ನು ಇತರರಿಗೆ ಪರಾಭಾರೆ ಮಾಡುವುದು ಕಾನೂನು ಬಾಹಿರವಾಗಿದೆ ಮತ್ತು ಘೋರ ಅಪರಾಧವೆಂದು ಪರಿಗಣಿಸಲಾಗುವುದು ಎಂದು ನಾಗರಹೊಳೆಯ “ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ”ಯ ಪ್ರಧಾನ ಕಾರ್ಯದರ್ಶಿ ಶಿವು ಹೇಳಿದರು.

ಅವರೆಗುಂದ ಗ್ರಾಮದ ಸಮುದಾಯ ಭವನದಲ್ಲಿ ಇತೀಚೆಗೆ ನಡೆದ ಬುಡಕಟ್ಟು ಕೃಷಿಕರ ವಿಶೇಷ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೇನುಕುರುಬ ಜನಾಂಗಕ್ಕೆ ಮಾತ್ರ ಲಭ್ಯವಿರುವ ವಿವಿಧ ಅರಣ್ಯದ ಹಕ್ಕುಗಳ ಕುರಿತು ಅವರು ಮಾಹಿತಿ ನೀಡಿದರು. ಜೇನುಕುರುಬ ಜನಾಂಗ ಕಾಡಿನೊಂದಿಗೆ ಹೊಂದಿಕೊAಡಿರುವ ಅವಿನಾಭಾವ ಸಂಬAಧಗಳನ್ನು ಉಳಿಸಿ ಪೋಷಿಸುವ ಜವಾಬ್ದಾರಿ ಮತ್ತು ಕರ್ತವ್ಯ ಸರ್ಕಾರದ ಮತ್ತು ಪಸ್ತುತ ಜನಾಂಗದ ಮೇಲಿದೆ ಎಂದು ಅಭಿಪ್ರಾಪಟ್ಟರು. ಇದೇ ಕಾರಣಕ್ಕಾಗಿ ಅಕ್ರಮವಾಗಿ ಹೊಂದಿಕೊಳ್ಳಲು ಪ್ರಯತ್ನಿಸಿ ಒತ್ತುವರಿಯಾದ ಭೂಮಿಯನ್ನು ಆರೋಪಿಗಳಿಂದ ಮುಕ್ತಗೊಳಿಸಿ ನೈಜ ಫಲಾನುಭವಿಗೆ ನೀಡುವಂತೆ ಒತ್ತಾಯಿಸಿ ಕ್ರಿಯಾ ಸಮಿತಿಯನ್ನು ರಚಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಸಿದ್ದಾಪುರ ಸಮೀಪದ ಅವರೆಗುಂದ ಗ್ರಾಮದ ಜೇನುಕುರುಬರ ಹೊನ್ನ ಎಂಬವರಿಗೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ದೊರಕಿದ ಕೃಷಿ ಭೂಮಿಯನ್ನು ಇತರರು ಬಳಸಿಕೊಳ್ಳುತಿರುವ ಕುರಿತು ಅಕ್ಟೋಬರ್ ಎರಡರಂದು ಪತ್ರಿಕೆಯಲ್ಲಿ ಪಕಟಿಸಲಾಗಿತ್ತು. ಜೇನುಕುರುಬ ಜನಾಂಗಕ್ಕೆ ಸೇರಿದ ಭೂಮಿಯನ್ನು ಅಕ್ರಮವಾಗಿ ಹೊಂದಿಕೊAಡು ವಶಪಡಿಸುವ ಯತ್ನವನ್ನು ತಡೆಯುವ ಉದ್ದೇಶದಿಂದ ಕೆಲವು ದಿನಗಳ ಹಿಂದೆ ಸಮಾಜ ಕಲ್ಯಣ ಇಲಾಖೆಯ ಅಧಿಕಾರಿಗಳಿಗೆ , ಗಿರಿಜನರ ಸಮಗ್ರ ಅಭಿವೃದ್ಧಿ ಅಧಿಕಾರಿಗಳಿಗೆ, ಸಿದ್ದಾಪುರ ಪೊಲೀಸ್ ಠಾಣೆಗೆ ಮತ್ತು ಗ್ರಾಮ ಪಂಚಾಯ್ತಿಗೆ ದೂರು ಸಲ್ಲಿಸಲಾಗಿತ್ತು.

ಗ್ರಾಮದಲ್ಲಿ ನಡೆದ ಸಭೆಯಲ್ಲಿ “ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ”ಯ ಅಧ್ಯಕ್ಷ ತಿಮ್ಮ ಮಾತನಾಡಿ, ಭೂಮಿ ಒತ್ತುವರಿದಾರರ ನಿರಂತರ ಬೆದರಿಕೆಯಿಂದ ಪ್ರಕರಣವು ತಡವಾಗಿ ಬಹಿರಂಗಗೊAಡಿದೆ. ಆದರೂ ನ್ಯಾಯ ದೊರಕುವವರೆಗೂ ಜಿಲ್ಲೆಯ ಎಲ್ಲಾ ಬುಡಕಟ್ಟು ಸಮುದಾಯದ ಸಂಘಟನೆಗಳೂ ಹೊನ್ನನವರ ಭೂಮಿಯನ್ನು ನೈಜ ಫಲಾನುಭವಿಗಳಿಗೆ ಲಭ್ಯವಾಗುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಿಕೊಳ್ಳಲಿದೆ ಎಂದು ಹೇಳಿದರು. ದಿಡ್ಡಳ್ಳಿ ಹಾಡಿಯ ಜೆ.ಕೆ. ಮುತ್ತಮ್ಮ ಮಾತನಾಡಿ, ಅರಣ್ಯವಾಸಿಗಳನ್ನು ಅರಣ್ಯದಿಂದ ಹೊರದಬ್ಬುವ ಸ್ಥಳೀಯ ವ್ಯಕ್ತಿಯೊಬ್ಬರ ಕ್ರಮ ಮತ್ತು ಆತನ ಭೂಮಿ ಕಬಳಿಸುವ ಯತ್ನವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಜೇನುಕುರುಬರ ಬಳಿ ಅರಣ್ಯ ದಾಖಲೆಗಳನ್ನು ಕೇಳುವುದು ಸರಿಯಲ್ಲ, ಕಾಡಿನ ಮಕ್ಕಳ ಹಕ್ಕನ್ನು ಸರ್ಕಾರ ಮತ್ತಷ್ಟು ದೃಢಗೊಳಿಸಬೇಕಿದೆ ಎಂದರು.

ಆಶಾ ಕಾರ್ಯಕರ್ತೆ ರೀನಾ ಕುಮಾರಿ ಮಾತನಾಡಿ ಗ್ರಾಮಕ್ಕೆ ತೆರಳುವ ರಸ್ತೆಯ ದುಸ್ಥಿತಿಯ ಕಾರಣ ಅಂಗನವಾಡಿಗೆ ತೆರಳಲು ಆಟೋ ಚಾಲಕರು ಮತ್ತು ಸರಕು ಸಾಗಾಣಿಕೆಯ ವಾಹನಗಳು ಹಿಂಜರಿಯುತ್ತಿವೆ. ಇದು ಪುಟ್ಟ ಮಕ್ಕಳ ಮತ್ತು ಗರ್ಭಿಣಿಯರ ಆರೋಗ್ಯ ಮತ್ತು ಶಾಲೆಯ ಹಾಜರಾತಿಯನ್ನೂ ಬಾಧಿಸುತ್ತಿದೆ ಎಂದು ಆರೋಪಿಸಿದರು. ಸಿದ್ದಾಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸತೀಶ್ ಮಾತನಾಡಿ, ಗ್ರಾಮಸ್ಥರ ಬೇಡಿಕೆಗಳಾದ ಬೀದಿ ದೀಪ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರದಲ್ಲಿಯೇ ಪರಿಹರಿಸಲು ಪ್ರಯತ್ನಿಸಲಾಗುವುದು ಅಲ್ಲದೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಕೈಗೊಳ್ಳಬಹುದಾದ ಅನೇಕ ಕಾಮಗಾರಿಗಳು ಮತ್ತು ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಸೋಲಿಗರ ಸಂಘದ ಮುಖಂಡರಾದ ಮೋಹನ್ ,ಕಾರ್ಮಿಕ ಸಂಘಟನೆಯ ಮುಖಂಡರಾದ ಹೆಚ್.ಬಿ.ರಮೇಶ್ ಮಾತನಾಡಿ ಶೋಷಿತ ಜನರ ಪರ ತಮ್ಮ ಸಂಘಟನೆಯ ಬೆಂಬಲ ಸದಾಕಾಲ ಇರುವುದಾಗಿಯೂ ತಿಳಿಸಿದರು. ಗ್ರಾಮ ಪಂಚಾಯ್ತಿಯ ಮಾಜಿ ಸದಸ್ಯೆ ಹಾಗೂ ಅವರೆಗುಂದ ಗ್ರಾಮದ ನಿವಾಸಿ ಗುಲಾಬಿ ಮಾತನಾಡಿ, ಜೇನುಕುರುಬರ ಭೂಮಿ ಕಬಳಿಸಿದ ವಿಚಾರ ಗಂಭೀರ ಆರೋಪವಾಗಿದ್ದು, ಗ್ರಾಮ ಸಮಿತಿಯ ಅರಿವಿಗೆ ಬಾರದೆ ಅರಣ್ಯ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡುವುದೂ ಕೂಡ ಅಪರಾಧವಾಗಲಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಭೂಮಿ ಒತ್ತುವರಿ ಮಾಡಿರುವ ಆರೋಪ ಎದುರಿಸುತ್ತಿರುವ ಚಿದಾನಂದ ಮಾತನಾಡಿ “ಅವರ ಭೂಮಿಯನ್ನು ನಾವು ಸುಮಾರು ವರ್ಷಗಳಿಂದ ಬಳಸಿಕೊಳ್ಳುತಿದ್ದು ಇದಕ್ಕೆ ನೈಜ ಫಲಾನುಭವಿಗಳು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು. ಆದರೆ ಅರಣ್ಯವಾಸಿಗಳು ಚಿದಾನಂದನವರ ಹೇಳಿಕೆಯನ್ನು ವಿರೋಧಿಸಿದರು. ಯಾವುದೇ ಕಾರಣಕ್ಕೂ ಅರಣ್ಯ ಭೂಮಿಯನ್ನು ಅಕ್ರಮವಾಗಿ ಬಳಸಿಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ತಿಳಿಸಿದರು.

ಅಂಚೆತಿಟ್ಟು ಹಾಡಿಯ ಬುಡಕಟ್ಟು ಸಂಘದ ಚಂದ, ಅವರೆಗುಂದ ಹಾಡಿಯ ಸರೋಜ, ಬೊಮಡ್ಲು ಹಾಡಿಯ ಅಧ್ಯಕ್ಷ ಸೋಮಯ್ಯ, ಸೋಮವಾರಪೇಟೆ ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಕಾಳಿಂಗ, ಗ್ರಾಮ ಪಂಚಾಯ್ತಿ ಸಿಬ್ಬಂದಿಗಳಾದ ಈಶ್ವರ, ಗಗನ್ ಉಪಸ್ಥಿತರಿದ್ದರು. ಅವರೆಗುಂದ ಹಾಡಿಯಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆಯನ್ನು ಬುಡಕಟ್ಟು ಕೃಷಿಕರ ಸಂಘದ ಅವರೆಗುಂದ ಹಾಡಿಯ ಅಧ್ಯಕ್ಷರಾದ ಎಂ.ಸಿ. ವಾಸು ವಹಿಸಿದರು. ವರದಿಯನ್ನು ಬುಡಕಟ್ಟು ಕೃಷಿಕರ ಸಂಘದ ಸಂಪತ್ ಕುಮಾರ್ ವಾಚಿಸಿದರು. ಎಂ.ವಿ.ರಿಶಿಕಾ ಪ್ರಾರ್ಧಿಸಿ ರೇಖಾ ಸಂಪತ್ ಕುಮಾರ್ ಸ್ವಾಗತಿಸಿ, ಬಳಿಕ ವಂದಿಸಿದರು.

-ಗುರುದರ್ಶನ್ ವಿ.ಎಸ್.