ನವದೆಹಲಿ, ಅ. ೧೨: ಕಾಂಗ್ರೆಸ್ ಮತ್ತು 'ಇಂಡಿಯಾ' ಮೈತ್ರಿಕೂಟದ ನಾಯಕರು ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಇಂದು ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಪರವಾಗಿ ವಕೀಲರು ಈ ಅರ್ಜಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಕೆ ಮಾಡಿದ್ದಾರೆ. ಅದಕ್ಕೂ ಮುನ್ನ ನವದೆಹಲಿಯ ಪ್ರಮುಖ ಬೀದಿಗಳಲ್ಲಿ ಇಂಡಿಯಾ ಮೈತ್ರಿ ಕೂಟದ ಕಾರ್ಯಕರ್ತರು ಮತ್ತು ಪ್ರಮುಖರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರ (ಸಿಜೆಐ) ನೇರ ಭೇಟಿಗೆ ಅವಕಾಶ ಸಿಗದಿದ್ದರೂ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ನಾಯಕರು ದೆಹಲಿಯಲ್ಲಿ ಸುಪ್ರೀಂಕೋರ್ಟ್ನತ್ತ ಪಥಚಲನಗೈದರು. ಕರ್ನಾಟಕದÀ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ರಾಜ್ಯ ನಾಯಕರು ಮತ್ತು ಸಚಿವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪಿಐಎಲ್ ಅರ್ಜಿಯಲ್ಲಿನ ಮುಖ್ಯ ಬೇಡಿಕೆಗಳು ಹೀಗಿವೆ: ಎಸ್‌ಐಆರ್ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಈ "ಮತ ಕಳ್ಳತನ" ಪ್ರಕ್ರಿಯೆಯನ್ನು ತಡೆಯಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಅಥವಾ ಅವರನ್ನು ಹುದ್ದೆಯಿಂದ ತೆಗೆದುಹಾಕಲು ಕೋರ್ಟ್ ಮಧ್ಯಪ್ರವೇಶಿಸಬೇಕು .

ಸಿಜೆಐ ಭೇಟಿ ನಿರಾಕರಣೆ

ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಈ ಕುರಿತು ಮನವಿ ಪತ್ರವನ್ನು ನೇರವಾಗಿ ಸಲ್ಲಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಭೇಟಿಗೆ ಸಮಯ ಕೋರಿದ್ದರು. ಆದರೆ, ಈ ವಿಷಯವು ಈಗಾಗಲೇ ನ್ಯಾಯಾಲಯದ ವ್ಯಾಪ್ತಿಯಲ್ಲಿ ಇರುವುದರಿಂದ ಆಡಳಿತಾತ್ಮಕವಾಗಿ ಭೇಟಿ ಮಾಡಲು ಸಿಜೆಐ ನಿರಾಕರಿಸಿದರು. "ಏನಿದ್ದರೂ ನ್ಯಾಯಾಂಗದ ಮೂಲಕವೇ ಅರ್ಜಿ ಸಲ್ಲಿಸಿ ಬನ್ನಿ, ಸುಪ್ರೀಂ ಕೋರ್ಟ್ ಬಾಗಿಲು ಎಲ್ಲರಿಗೂ ಮುಕ್ತವಾಗಿದೆ" ಎಂದು ಸಿಜೆಐ ಸ್ಪಷ್ಟಪಡಿಸಿದ್ದರು.

ಬಳಿಕ ಅರ್ಜಿ ಸಲ್ಲಿಕೆಗೆ ಅನುಮತಿ ನೀಡಲಾಯಿತು. ಮೆರವಣಿಗೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆವರಣದೊಳಗೆ ಇರುವ ಫೈಲಿಂಗ್ ಕೌಂಟರ್‌ಗೆ ತೆರಳಿ ಅಧಿಕೃತವಾಗಿ ಅರ್ಜಿ ಸಲ್ಲಿಸಲು ೧೦ ರಿಂದ ೧೫ ಜನರ ನಿಯೋಗಕ್ಕೆ ನ್ಯಾಯಾಲಯವು ಅನುಮತಿ ನೀಡಿತು.

ಈ ಪ್ರಕರಣಕ್ಕೆ ಸಂಬAಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶೀಘ್ರದಲ್ಲೇ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ರಿಟ್ ಪಿಟಿಷನ್‌ನಲ್ಲಿ ೧೧ ಮಂದಿ ವಿರೋಧ ಪಕ್ಷದ ನಾಯಕರನ್ನು ಅರ್ಜಿದಾರರಾಗಿ ಹೆಸರಿಸಿದೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಪ್ರಮುಖ ಸೌಗತ ರಾಯ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್ ಜೆಡಿ ಪ್ರಮುಖ ತೇಜಸ್ವಿ ಪ್ರಸಾದ್ ಯಾದವ್, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ಸಿಪಿಐ(ಎಂ) ನಾಯಕ ಎಂಎ ಬೇಬಿ, ಸಿಪಿಐ ಪ್ರಮುಖ ಡಿ ರಾಜಾ, ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕಿ ಮಹುವಾ ಮಾಝಿ, ಎನ್ಸಿಪಿ-ಎಸ್ಸಿಪಿ ನಾಯಕಿ ಸುಪ್ರಿಯಾ ಸುಳೆ ಮತ್ತು ಐಯುಎಂಎಲ್ ನಾಯಕ ಇಟಿ ಮೊಹಮ್ಮದ್ ಬಶೀರ್ ಇವರುಗಳೂ ಅರ್ಜಿಗೆ ಸಹಿ ಹಾಕಿದ್ದಾರೆ.

ರಾಹುಲ್ ಗಾಂಧಿಯವರ ಅರ್ಜಿಯನ್ನು ಅಧಿಕೃತವಾಗಿ ಸುಪ್ರೀಂ ಕೋರ್ಟ್ನ ವೆಬ್‌ಸೈಟ್‌ನಲ್ಲಿ ನೋಂದಾಯಿಸಲಾಗಿದೆ. ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮಾತನಾಡಿ, ಅರ್ಜಿಯು ಎಸ್‌ಐಆರ್ ಪ್ರಕ್ರಿಯೆಯ ವಿವಿಧ ಅಂಶಗಳು ಹಾಗೂ ಶಾಂತಿಯುತ ಪ್ರತಿಭಟನೆಗಳ ಮೇಲಿನ ನಿರ್ಬಂಧಗಳನ್ನು ಒಳಗೊಂಡಿದೆ ಎಂದು ಹೇಳಿದರು. ಈ ಅರ್ಜಿಯಲ್ಲಿ ಚುನಾವಣಾ ಆಯೋಗವನ್ನು ನಾಲ್ಕು ಪ್ರತಿವಾದಿಗಳಲ್ಲಿ ಒಂದನ್ನಾಗಿ ಹೆಸರಿಸಲಾಗಿದೆ. ಸಾರ್ವಜನಿಕರ ಆಕ್ರೋಶ ಮತ್ತು ಅಸಮಾಧಾನದ ಸ್ವಯಂಪ್ರೇರಿತ ಅಭಿವ್ಯಕ್ತಿಯೇ ಈ ಮೆರವಣಿಗೆಯಾಗಿದೆ ಎಂದು ಬಣ್ಣಿಸುವ ಮೂಲಕ ಸಿಂಘ್ವಿ ಅದನ್ನು ಸಮರ್ಥಿಸಿಕೊಂಡರು. ಪ್ರತಿಭಟನೆಯಲ್ಲಿ ಭಾಗವಹಿಸಲು ಜನರಿಗೆ ಹಣ ನೀಡಲಾಗಿತ್ತು ಎಂಬ ಆರೋಪಗಳನ್ನು ಅವರು ನಿರಾಕರಿಸಿದರು ಹಾಗೂ ಇದರಲ್ಲಿ ಪಾಲ್ಗೊಂಡವರು ಸ್ವಯಂಪ್ರೇರಣೆಯಿAದಲೇ ಭಾಗವಹಿಸಿದ್ದರು ಎಂದು ಪ್ರತಿಪಾದಿಸಿದರು.

ಚಲೋ ದೆಹಲಿ

ಕಾಂಗ್ರೆಸ್ ನಾಯಕ "ಚಲೋ ದೆಹಲಿ - ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆ" ಎಂಬ ಬ್ಯಾನರ್ ಅಡಿಯಲ್ಲಿ ಸುಪ್ರೀಂ ಕೋರ್ಟ್ ಕಡೆಗೆ ಇಂಡಿಯಾ ಬ್ಲಾಕ್ ಮೆರವಣಿಗೆಯನ್ನು ಮುನ್ನಡೆಸಿತು. "ವೋಟ್ ಚೋರಿ" ಆರೋಪದ ಮೇಲೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ವಿರೋಧ ಪಕ್ಷದ ಬೇಡಿಕೆಯ ಮಧ್ಯೆ ಈ ಅರ್ಜಿ ಬಂದಿದೆ. ಮೆರವಣಿಗೆಗೆ ಮುಂಚಿತವಾಗಿ, ಮೋದಿ ಸರ್ಕಾರ ಕುಮಾರ್ ಅವರನ್ನು ರಕ್ಷಿಸುತ್ತಿದೆ ಎಂದು ಗಾಂಧಿ ಆರೋಪಿಸಿದರು, ದೆಹಲಿಯಲ್ಲಿ ಭಾರೀ ಭದ್ರತಾ ನಿಯೋಜನೆಯನ್ನು ಪ್ರಶ್ನಿಸಿದರು ಮತ್ತು ೨೦೦ ಸರ್ಕಾರಿ ಅಧಿಕಾರಿಗಳು ವಿರೋಧ ಪಕ್ಷದ ಜೊತೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಿಕೊಂಡರು. ಏತನ್ಮಧ್ಯೆ, ದೆಹಲಿ ಹೈಕೋರ್ಟ್ ಅಕ್ಟೋಬರ್ ೧೩ ರಂದು ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಾಗಿ ಮುಚ್ಚಿರುವುದನ್ನು ಪ್ರಶ್ನಿಸುವ ಅರ್ಜಿಯನ್ನು ವಿಚಾರಣೆ ನಡೆಸಲಿದೆ ಮತ್ತು ಅಕ್ಟೋಬರ್ ೧೦ ಮತ್ತು ೧೧ ರಂದು ನಡೆದ ಪ್ರದರ್ಶನಗಳಿಗೆ ಸಂಬAಧಿಸಿದ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಲಿದೆ. ಭದ್ರತಾ ಕಾರಣಗಳಿಗಾಗಿ ತಾತ್ಕಾಲಿಕವಾಗಿ ಮುಚ್ಚಲಾದ ಆರು ನಿಲ್ದಾಣಗಳಲ್ಲಿನ ದೆಹಲಿ ಮೆಟ್ರೋ ಗೇಟ್‌ಗಳನ್ನು ನಂತರ ಮತ್ತೆ ತೆರೆಯಲಾಗಿದೆ.

ಮೆರವಣಿಗೆಯಲ್ಲಿ ವಿರೋಧ ಪಕ್ಷದ ಹಲವು ಸಂಸದರು, ರಾಜಕೀಯ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಬರಾಖಂಬ ರಸ್ತೆ ಜಂಕ್ಷನ್ನತ್ತ ತೆರಳುವ ಮುನ್ನ ಅವರು 'ಕಾನ್ಸಿ÷್ಟಟ್ಯೂಷನ್ ಕ್ಲಬ್‌ನಲ್ಲಿ ಜಮಾಯಿಸಿದ್ದರು ನಾಲ್ಕು ಹವಾನಿಯಂತ್ರಿತ ಬಸ್ಗಳಲ್ಲಿ ಮತ್ತು ಕಾಲ್ನಡಿಗೆಯಲ್ಲಿ ಸುಪ್ರೀಂ ಕೋರ್ಟ್ನತ್ತ ಸಾಗುತ್ತಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗಳ ಮೇಲೆ ನಿರ್ಬಂಧಗಳಿದ್ದರೂ ವಿರೋಧ ಪಕ್ಷಗಳು ಈ ಪ್ರತಿಭಟನೆಯನ್ನು ನಡೆಸಿದವು.

ಆದರೆ, ಬ್ಯಾರಿಕೇಡ್‌ಳನ್ನು ಅಳವಡಿಸಲಾಗಿದ್ದ ಭಗವಾನ್ ದಾಸ್ ರಸ್ತೆಯಲ್ಲಿ ದೆಹಲಿ ಪೊಲೀಸರು ಈ ಮೆರವಣಿಗೆಯನ್ನು ತಡೆದರು. ಮೆರವಣಿಗೆ ನಿಂತ ನಂತರ, ಗಾಂಧಿ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಕೆಲವು ನಾಯಕರು ವಾಹನವೊಂದರ ಮೇಲೆ ಹತ್ತಿ ನಿಂತರು. ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಮತ್ತು "ಸಾಕ್ಷಿದಾರರಾಗಿ (ಅಪ್ರೂವರ್) ಬದಲಾಗಬೇಕು" ಎಂದು ಕರೆ ನೀಡಿದರು. ಆರೋಪಿತ ಅಕ್ರಮದ ಹಿಂದಿನ ಸೂತ್ರಧಾರ ಆಯೋಗದ ಮುಖ್ಯಸ್ಥರಲ್ಲ ಎಂದು ಅವರು ಪ್ರತಿಪಾದಿಸಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ)"ರಾಜೀನಾಮೆ ನೀಡಿ, ಸಾಕ್ಷಿದಾರರಾಗಿ ಬದಲಾಗಿ; ನೀವು (ಕುಮಾರ್) ತಪ್ಪು ಮಾಡಿದ್ದೀರಿ ಆದರೆ ಆ ತಪ್ಪಿನ ಹಿಂದಿನ ಸೂತ್ರಧಾರ ನೀವಲ್ಲ," ಎಂದು ಗಾಂಧಿ ಹೇಳಿದರು.

ವಿರೋಧ ಪಕ್ಷದ ಈ ಅಭಿಯಾನವು ಅಗತ್ಯವಿರುವಷ್ಟು ಕಾಲ ಮುಂದುವರಿಯುತ್ತದೆ ಎಂದು ಗಾಂಧಿ ದೃಢವಾಗಿ ಹೇಳಿದರು. ಬಿಜೆಪಿ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.