ಮಡಿಕೇರಿ, ಅ.೧೦; ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬಕ್ಕೆ ಮಂಜಿನ ನಗರಿ ಸಜ್ಜಾಗುತ್ತಿದೆ. ತಾ.೧೧ರಿಂದ(ಇAದಿನಿAದ) ಕರಗ ಮಹೋತ್ಸವದೊಂದಿಗೆ ದಸರಾ ಆಚರಣೆಗೆ ಚಾಲನೆ ದೊರಕಲಿದ್ದು, ಈ ನಿಟ್ಟಿನಲ್ಲಿ ತಯಾರಿ ಬಿರುಸಿನಿಂದ ಸಾಗುತ್ತಿದೆ.
ಮಡಿಕೇರಿ ದಸರಾ ಆಚರಣೆ ಸಂಬAಧ ಮಡಿಕೇರಿ ನಗರ ದಸರಾ ಸಮಿತಿ ಮೂಲಕ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮಡಿಕೇರಿ ನಗರ ದಾರ್ಶನಿಕರ ಪ್ರತಿಮೆಗಳು ಸೇರಿದಂತೆ ಕೋಟೆ ಮುಂತಾದವುಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ನಗರ ಬಣ್ಣದ ಬೆಳಕಿನೊಂದಿಗೆ ಝಗಮಗಿಸುತ್ತಿದೆ. ನಗರದ ಪ್ರಮುಖ ರಸ್ತೆ ಸೇರಿದಂತೆ ಕರಗ ದೇವತೆಗಳು, ದಶ ಮಂಟಪಗಳು ರಸ್ತೆಗಳ ಬದಿಯಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
ಕರಗ ಪ್ರದಕ್ಷಿಣೆ
ತಾ.೧೧ರಂದು (ಇಂದು) ಸಂಜೆ ೫ಗಂಟೆಗೆ ಸೋಮಾವಾರಪೇಟೆ ರಸ್ತೆಯಲ್ಲಿರುವ ಪಂಪಿನ ಕೆರೆ ಬಳಿಯಿಂದ ಕರಗ ದೇವತೆಗಳ ಪೂಜೆಯೊಂದಿಗೆ ದಸರಾ ಉತ್ಸವಕ್ಕೆ ಚಾಲನೆ ದೊರಕಲಿದೆ. ಅಲ್ಲಿಂದ ಹೊರಡುವ ನಾಲ್ಕು ಪ್ರಮುಖ ಕರಗ ದೇವತೆಗಳು ಕೋದಂಡರಾಮ ದೇವಾಲಯ ಪ್ರವೇಶಿಸಿ ಮಹದೇವಪೇಟೆ ಮೂಲಕ ಸಾಗಿ ಪೇಟೆ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿ ನಂತರ ತಮ್ಮ ದೇವಾಲಯಗಳಿಗೆ ಹಿಂತಿರುಗಲಿವೆ.
ಸಾಂಸ್ಕೃತಿಕ ವೈಭವ
ನಾಡ ಹಬ್ಬ ದಸರಾವನ್ನು ಜನೋತ್ಸವವನ್ನಾಗಿ ಆಚರಿಸಲಾಗುತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಏರ್ಪಡಿಸಲಾಗಿದೆ.೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ತಾ.೧೨ರಿಂದ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಹತ್ತು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನ ರಂಜಿಸಲಿವೆ. ಇದಕ್ಕಾಗಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ತಯಾರಿ ಮಾಡಿಕೊಳ್ಳಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ಆಯೋಜನೆಯಾಗಿರುವ ಗಾಂಧಿ ಮೈದಾನದಲ್ಲಿ ಬೃಹತ್ ವೇದಿಕೆ ಹಾಗೂ ಸಭಾಂಗಣ ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗಿದೆ. ಬೆಂಗಳೂರಿನ ತಿಬ್ಬಾದೇವಿ ಗ್ರೂಪ್ ವೇದಿಕೆ ನಿರ್ಮಾಣ ಕಾರ್ಯವನ್ನು ರೂ.೫೧ ಲಕ್ಷಕ್ಕೆ ಪಡೆದುಕೊಂಡಿದ್ದು, ಕೆಲಸ ಸಾಗುತ್ತಿದೆ.
ಕ್ರೀಡಾ ಕಲರವ
ದಸರಾಗೆ ಮೆರುಗು ತರುವದರೊಂದಿಗೆ ಕ್ರೀಡಾಪಟುಗಳಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕ್ರಿಡಾಕೂಟಗಳನ್ನು ಆಯೋಜನೆ ಮಾಡಲಾಗಿದ್ದು, ಕ್ರೀಡಾ ಸಮಿತಿಯವರು ಹಗಲಿರುಳು ಶ್ರಮ ವಹಿಸುತ್ತಿದ್ದಾರೆ. ತಾ. ೧೧ರಿಂದ(ಇAದು) ಬೆಳಿಗ್ಗೆ ೬ ಗಂಟೆಗೆ ರಸ್ತೆ ಓಟದೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ದೊರಕಲಿದೆ.
ಕಾಫಿ ದಸರಾ
ಕೊಡಗು ಕಾಫಿಗೆ ಹೆಸರುವಾಸಿ, ಇದು ಇಲ್ಲಿಯ ಪ್ರಮುಖ ವಾಣಿಜ್ಯ ಬೆಳೆ. ಹಾಗಾಗಿ ದಸರಾದಲ್ಲಿ ಕಾಫಿ, ಕಾಫಿ ಉತ್ಪನ್ನಗಳ ಬಗ್ಗೆ ಪರಿಚಯಿಸುವ ನಿಟ್ಟಿನಲ್ಲಿ ಕಾಫಿ ದಸರಾ ಕೂಡ ಏರ್ಪಡಿಸಲಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ, ಮಂತರ್ ಗೌಡ ಅವರ ಪರಿಕಲ್ಪನೆಯ ಕಾಫಿ ದಸರಾ ತಾ. ೧೩ ಹಾಗೂ ೧೪ರಂದು ನಡೆಯಲಿದೆ.
ಕವಿಗೋಷ್ಠಿ
ದಸರಾ ಸಂಭ್ರಮದಲ್ಲಿ ಸಾಹಿತ್ಯಕ್ಕೂ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಹುಭಾಷ ಕವಿಗೋಷ್ಠಿ ಏರ್ಪಡಿಸಲಾಗಿದ್ದು, ಕವಿಗೊಷ್ಠಿ ಸಮಿತಿಯವರು ಪೂರ್ವ ತಯಾರಿಯಲ್ಲಿದ್ದಾರೆ. ತಾ.೧೫ರಂದು ಕವಿಗೋಷ್ಠಿ ನಡೆಯಲಿದೆ.
ಮಕ್ಕಳ ದಸರಾ
ದಸರಾ ಎಂದರೆ ಎಲ್ಲರ ಸಂಭ್ರಮದ ಹಬ್ಬ, ಹಾಗಾಗಿ ಮಕ್ಕಳಿಗೂ ಒಂದು ಅವಕಾಶ ನೀಡುವ ನಿಟ್ಟಿನಲ್ಲಿ ಮಕ್ಕಳ ದಸರಾ ಕೂಡ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ತಾ.೧೬ರಂದು ಮಕ್ಕಳ ದಸರಾ ನಡೆಯಲಿದೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯವರು ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿದ್ದಾರೆ.
ಯುವ ದಸರಾ
ಇಂದಿನ ಯುವ ಪೀಳಿಗೆ ದೇಶದ ಭವಿಷ್ಯ ರೂಪಿಸುವವರು, ಹಾಗಾಗಿ ಯುವ ಪೀಳಿಗೆಗೂ ದಸರಾ ಸಂಭ್ರಮದ ಸವಿಯುಣ್ಣಲು ಯುವ ದಸರಾ ಕೂಡ ಆಚರಣೆಯಲ್ಲಿದೆ. ತಾ.೧೭ರಂದು ಹಗಲು ಶ್ವಾನ ಪ್ರದರ್ಶನ, ಹಾಗೂ ತಾ.೧೮ರಂದು ರಾತ್ರಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿದ್ದು, ಯುವ ದಸರಾ ಸಮಿತಿಯವರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ.
ಜಾನಪದ ದಸರಾ
ಭರತ ಭೂಮಿ ವೈವಿಧ್ಯಮಯ ಜಾನಪದ ಸೊಗಡಿನಿಂದ ಹೆಸರುವಾಸಿಯಾಗಿದೆ. ಈ ಜಾನಪದ ಸೊಗಡನ್ನು ಪ್ರತಿಬಿಂಬಿಸುವ ಸಲುವಾಗಿ ದಸರಾದಲ್ಲಿ ಜಾನಪದ ದಸರಾ ಕೂಡ ಸೇರ್ಪಡೆಯಾಗಿದೆ. ತಾ, ೧೮ರಂದು ಹಗಲು ಜಾನಪದ ದಸರಾ ನಡೆಯಲಿದ್ದು, ಕೊಡಗು ಜಿಲ್ಲಾ ಜನಪದ ಪರಿಷತ್ತು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮಹಿಳಾ ದಸರಾ
ವಿಜಯದಶಮಿ ದುರ್ಗಾದೇವಿ ಆರಾಧನೆಯಾಗಿದೆ. ದೇವಿ ಮಹಿಳೆಯಾಗಿರುವಾಗ ಮಹಿಳೆಯರಿಗೂ ಪ್ರಾಶಸ್ತö್ಯ ನೀಡುವ ಸಲುವಾಗಿ ಮಹಿಳಾ ದಸರಾ ಕೂಡ ಆಚರಣೆಯಲ್ಲಿದ್ದು, ತಾ. ೧೯ರಂದು ಹಗಲು ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಮಹಿಳಾ ದಸರಾ ನಡೆಯಲಿದೆ.
ಅಲಂಕಾರ ಸ್ಪರ್ಧೆ
ದಸರಾಗೆ ಮತ್ತಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ವಾಹನ ಹಾಗೂ ಕಟ್ಟಡಗಳ ಅಲಂಕಾರ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಅಲಂಕಾರ ಸಮಿತಿಯವರು ರೂಪುರೇಷೆ ಮಾಡಿಕೊಂಡಿದ್ದಾರೆ.
ವೇದಿಕೆ-ಸ್ವಾಗತ
ಇವರೊಂದಿಗೆ ವೇದಿಕೆ ನಿರ್ವಹಣೆ, ಅತಿಥಿಗಳನ್ನು ಸ್ವಾಗತ ಕೋರಲು ಕೂಡ ದಸರಾ ಸಮಿತಿ ಕಾರ್ಯೋನ್ಮುಖವಾಗಿದೆ. ಇದಕ್ಕಾಗಿ ವೇದಿಕೆ ಹಾಗೂ ಸ್ವಾಗತ ಸಮಿತಿಯವರು ಸಜ್ಜಾಗಿ ನಿಂತಿದ್ದಾರೆ.
ದಶಮಂಟಪ ಶೋಭಾಯಾತ್ರೆ
ತಾ.೨೦ರಂದು ಆಯುಧಾ ಪೂಜಾ ಸಮಾರಂಭ ಹಾಗೂ ತಾ.೨೧ರಂದು ವಿಜಯದಶಮಿ ಆಚರಣೆ ನಡೆಯಲಿದೆ. ತಾ.೨೧ರಂದು ದಶಮಂಟಪಗಳ ಶೋಭಾಯಾತ್ರೆ ನಡೆದು ಕರಗ ದೇವತೆಗಳೊಂದಿಗೆ ಬನ್ನಿ ಕಡಿಯುವ ಮೂಲಕ ದಸರಾ ಉತ್ಸವಕ್ಕೆ ತೆರೆ ಬೀಳಲಿದೆ. - ಕುಡೆಕಲ್ ಸಂತೋಷ್ ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಅ. ೧೦: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಆಯೋಜಿಸಲಾಗುತ್ತಿರುವ ೪೮ನೇ ವರ್ಷದ ದಸರಾ ಜನೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಉತ್ಸವದ ಯಶಸ್ಸಿಗಾಗಿ ವಿವಿಧ ಸಮಿತಿಗಳ ಸದಸ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ.
ದಸರಾ ಆಚರಣೆಗೆ ಸರ್ಕಾರದಿಂದ ರೂ. ೧ ಕೋಟಿ ಅನುದಾನ ಬಿಡುಗಡೆಯಾಗಿದ್ದು, ೧೧ ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜನಮನ ಸೆಳೆಯಲಿವೆ. ಮಹಿಳಾ ದಸರಾ, ಮಕ್ಕಳ ದಸರಾ, ಯುವ ದಸರಾ ಹಾಗೂ ಕವಿಗೋಷ್ಠಿ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಗೋಣಿಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದ್ದು, ಪ್ರತಿದಿನ ಸಂಜೆ ೬ರಿಂದ ರಾತ್ರಿ ೧೧ ಗಂಟೆಯವರೆಗೆ ಸ್ಥಳೀಯ ಹಾಗೂ ಹೊರಜಿಲ್ಲೆಗಳ ಕಲಾವಿದರಿಂದ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಹಿಳಾ ದಸರಾ, ಮಕ್ಕಳ ದಸರಾ, ಯುವ ದಸರಾ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ಹಗಲಿನ ವೇಳೆಯಲ್ಲಿ ಮೈದಾನದ ಆವರಣ ಮತ್ತು ವೇದಿಕೆಯಲ್ಲಿ ಜರುಗಲಿವೆ.
ಕಾವೇರಿ ದಸರಾ ಸಮಿತಿಯಲ್ಲಿ ಉತ್ಸಾಹಿ ಯುವಕರ ತಂಡ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಜನೋತ್ಸವವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.
ದಸರಾ ಜನೋತ್ಸವದ ಅಂಗವಾಗಿ ಶಿವಾಜಿ ಯುವ ಸೇನೆಯು ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಅಕ್ಟೋಬರ್ ೧೭ ಮತ್ತು ೧೮ರಂದು ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿದೆ. ದಸರಾ ಸಂಭ್ರಮಕ್ಕೆ ಕ್ರೀಡಾ ಚಟುವಟಿಕೆಗಳೂ ಮೆರುಗು ನೀಡಲಿವೆ.
ಹೊನಲು ಬೆಳಕಿನ ಕಬಡ್ಡಿ
ದಸರಾ ಅಂಗವಾಗಿ ಹೊನಲು ಬೆಳಕಿನ ಜಿಲ್ಲಾಮಟ್ಟದ ಮ್ಯಾಟ್ ಕಬಡ್ಡಿ ತಾ. ೧೭ ಹಾಗೂ ೧೮ರಂದು ಶಿವಾಜಿ ಯುವ ಸೇನೆಯ ಅಧ್ಯಕ್ಷ ಅಣ್ಣಪ್ಪನವರ ಮುಂದಾಳತ್ವದಲ್ಲಿ ನಡೆಯಲಿದೆ. ಈಗಾಗಲೇ ಆಟಗಾರರ ಬಿಡ್ಡಿಂಗ್ ಕಾರ್ಯವೂ ಮುಗಿದಿದ್ದು ಕ್ರೀಡೆಯ ಯಶಸ್ವಿಗೆ ಸಕಲ ಸಿದ್ದತೆಗಳನ್ನು ಕೈಗೊಂಡಿದೆ.
ದಸರಾ ಯಶಸ್ವಿಯ ಹಿನ್ನೆಲೆಯಲ್ಲಿ ಈಗಾಗಲೇ ದಶಮಂಟಪಗಳ ಅಧ್ಯಕ್ಷರುಗಳ ಹಾಗೂ ಪದಾಧಿಕಾರಿಗಳ ಸಭೆ ನಡೆಸಿರುವ ಕಾವೇರಿ ದಸರಾ ಸಮಿತಿಯು ದಶಮಂಟಪಗಳಿAದ ಹಲವು ಸಲಹೆಗಳನ್ನು ಸ್ವೀಕರಿಸಿದ್ದಾರೆ. ಬಹುತೇಕ ಮಂಟಪಗಳು ಈ ಬಾರಿ ಡಿಜೆ ಕಾರ್ಯಕ್ರಮವನ್ನು ಅಳವಡಿಕೆಯಿಂದ ಹಿಂದೆ ಸರಿಯುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ದಶಮಂಟಪಗಳ ಪದಾಧಿಕಾರಿಗಳು ಭರವಸೆ ನೀಡಿದ್ದಾರೆ. ನಗರದಲ್ಲಿ ಲೈಟಿಂಗ್ಸ್ ಅಲಂಕಾರಕ್ಕೆ ಸಿದ್ದತೆಗಳು ಭರದಿಂದ ಸಾಗುತ್ತಿದೆ.