ಪೊನ್ನಂಪೇಟೆ, ಅ. ೧೦: ಮಾಜಿ ಸೈನಿಕರು, ಕುಟುಂಬ ಹಾಗೂ ಅವಲಂಬಿತ ಪಿಂಚಣಿದಾರರ ಸಮಸ್ಯೆಗಳಿಗೆ ಸ್ಪಂದಿಸುವುದರೊAದಿಗೆ, ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಿಗ್ಗಟ್ಟ್ನಾಡ್ ಮಾಜಿ ಸೈನಿಕರ ಸಂಘ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಕಿಗ್ಗಟ್ಟ್ನಾಡ್ ಮಾಜಿ ಸೈನಿಕರ ಸಂಘದ ೧೩ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ೫೨೧ ಸದಸ್ಯರಿದ್ದು, ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ವಾರಸುದಾರರಿಗೆ ರೂ.೧೫ ಸಾವಿರ ನೆರವು ನೀಡಲಾಗುತ್ತಿದೆ. ೨೦೨೫-೨೬ನೇ ಸಾಲಿನಲ್ಲಿ ಮಾಜಿ ಸೈನಿಕರು ಹಾಗೂ ಕುಟುಂಬ ಪಿಂಚಣಿದಾರರ ೧೬೩ ಕುಂದುಕೊರತೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಿದರು. ಕೊಡಗು ವಿಶ್ವವಿದ್ಯಾಲಯಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಂಘದ ವತಿಯಿಂದ ಸ್ಥಾಪಿಸಿರುವ ವಿದ್ಯಾನಿಧಿಯ ಮೂಲಕ ಸದಸ್ಯರ ಮಕ್ಕಳು ಹಾಗೂ ಮೊಮ್ಮಕ್ಕಳಾದ ಇಂಜಿನಿಯರಿAಗ್ ವಿಭಾಗದ ಕಚ್ಚಪನೆರ ದಿವ್ಯಾ ದೇವಯ್ಯ, ಯು.ಚಿಣ್ಣಪ್ಪ, ಮುದ್ದಿಯಡ ಕೀರ್ತನ್ ಪೂವಯ್ಯ, ಎಂಎಸ್ಸಿ ಅಗ್ರಿಕಲ್ಚರ್ ವಿಭಾಗದ ದೇಯಂಡ ಪೊನ್ನಮ್ಮ ತಮ್ಮಯ್ಯ, ಪಿ ಯು ಸಿ ವಿಭಾಗದ ಕಳ್ಳಿಚಂಡ ದೇಚಕ್ಕ ಬೋಪಣ್ಣ, ಕೇಳಪಂಡ ರಿಶ್ವಿ ಗೌರಮ್ಮ, ಸುಳ್ಳೆರ ಎನ್ ಶಿವು, ದೇಯಂಡ ವಶಿಕ ಪೊನ್ನಣ್ಣ ಹಾಗೂ ಎಸ್.ಎಸ್.ಎಲ್.ಸಿ ವಿಭಾಗದ ಬೊಜ್ಜಂಗಡ ರಿನ್ಸಿ ಪೂಣಚ್ಚ, ಕಳ್ಳಿಚಂಡ ಪೂವಕ್ಕ ಬೋಪಣ್ಣ, ಚಿಮ್ಮಣಮಾಡ ದಿಯಾ ಬೆಳ್ಳಿಯಪ್ಪ ಅವರಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಹಿರಿಯ ಮಾಜಿ ಸೈನಿಕರಿಗೆ ಗೌರವ
೮೦ ವರ್ಷ ಮೇಲ್ಪಟ್ಟ ಮಾಜಿ ಸೈನಿಕರಾದ ಅಜ್ಜಮಾಡ ಕೆ. ತಿಮ್ಮಯ್ಯ, ಚೀರಂಡ ಎ. ಸುಬ್ಬಯ್ಯ, ಬಯವಂಡ ಯು. ಪೂಣಚ್ಚ, ಚಿಮ್ಮಣಮಾಡ ಸಿ. ಸೋಮಯ್ಯ, ಮಲ್ಲಂಗಡ ಎಸ್. ಕುಂಞಪ್ಪ, ಕೊಳ್ಳಿಮಾಡ ಎನ್. ಕಾರ್ಯಪ್ಪ, ಅಚ್ಚಿಯಂಡ ಜಿ. ಸುಭಾಷ್ ಚಂದ್ರ ಬೋಸ್, ಕೊಟ್ಟಂಗಡ ಕೆ. ಮಾಚಯ್ಯ ಹಾಗೂ ಎಂ.ಎಸ್. ಜಗದೀಶನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೀರಾಜಪೇಟೆಯ ಸರಕಾರಿ ಆಯುರ್ವೇದ ಆಸ್ಪತ್ರೆ ವೈದ್ಯರಾದ ಡಾ. ಶ್ರೀನಿವಾಸ್, ಡಾ ರವಿಕುಮಾರ್ ಮತ್ತು ತಂಡದವರಿAದ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರಿಗಾಗಿ ಉಚಿತ ಆಯುರ್ವೇದ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಸದಸ್ಯರು ಹಾಗೂ ಕುಟುಂಬದವರು ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು. ಸಭೆಯಲ್ಲಿ ಸದಸ್ಯರು ಸಂಘದ ಕಾರ್ಯಚಟುವಟಿಕೆಗಳಿಗೆ ಸಂಬAಧಿಸಿದAತೆ ಸಲಹೆ-ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸಿ.ಎಂ. ರಮೇಶ್, ಗೌರವ ಕಾರ್ಯದರ್ಶಿ ಪಿ.ಎ. ಶ್ಯಾಂಪ್ರಸಾದ್, ಖಜಾಂಚಿ ಐ.ಕೆ. ತಮ್ಮಯ್ಯ, ಜಂಟಿ ಕಾರ್ಯದರ್ಶಿಗಳಾದ ಬಿ.ಎನ್. ಬೆಳ್ಳಿಯಪ್ಪ, ಎ.ಟಿ. ಮುತ್ತಪ್ಪ, ಆಂತರಿಕ ಲೆಕ್ಕ ಪರಿಶೋಧಕ ಸಿ.ಎ. ಮಾದಪ್ಪ, ನಿರ್ದೇಶಕರಾದ ಬಿ.ಬಿ. ಜನಕ, ಎಂ.ಎಸ್. ಮುತ್ತಣ್ಣ, ಎ.ಸಿ. ಸೋಮಯ್ಯ, ಬಿ.ಎಸ್. ಚಂದ್ರಶೇಖರ್ ಹಾಗೂ ಹೆಚ್.ಇ. ಕೃಷ್ಣ ಸೇರಿದಂತೆ ನಿವೃತ್ತ ಸೈನಿಕರು, ಅರೆಸೇನಾ ಸೈನಿಕರು ಹಾಗೂ ಕುಟುಂಬದವರು ಉಪಸ್ಥಿತರಿದ್ದರು. ಐನಂಡ ಟಿ. ಪುಷ್ಪ ಪ್ರಾರ್ಥಿಸಿ, ಬಯವಂಡ ಜನಕ ಸ್ವಾಗತಿಸಿದರು. ಐನಂಡ ಕೆ ತಮ್ಮಯ್ಯ ವಂದಿಸಿದರು.