ವೀರಾಜಪೇಟೆ, ಅ. ೯: ಇಂದಿನ ಆಧುನಿಕ ಜೀವನ ವ್ಯವಸ್ಥೆಯು ಅತಿ ವೇಗವಾಗಿ ಸಾಗುತ್ತಿದ್ದರೂ, ನಮ್ಮ ನೈತಿಕ ನೆಲೆಗಟ್ಟುಗಳು ಕುಸಿಯುತ್ತಿರುವುದು ಆತಂಕಕಾರಿ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾಹಿತಿಗಳಾದ ಶ್ರೀಶೈಲ ಬೀಳಗಿ ಅವರು ಅಭಿಪ್ರಾಯಪಟ್ಟರು.
ಶ್ರೀ ಅರಮೇರಿ ಕಳಂಚೇರಿ ಮಠದಲ್ಲಿ ನಡೆದ 'ಹೊಂಬೆಳಕು ಕಿರಣ ೨೪೮' ಮಾಸಿಕ ತತ್ವಚಿಂತನಾಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿ ವೃಂದವು ಕೇವಲ ಅಂಕಗಳಿಗೆ ಅಥವಾ ಕಾಗದದ ಪದವಿಗಳಿಗೆ ಮಾತ್ರ ಸೀಮಿತರಾಗಬಾರದು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿ ವ್ಯಾಮೋಹದಿಂದ ಹೊರಬರಬೇಕು. ಪಕ್ಕದ ಮನೆಯವರೊಂದಿಗೆ ಬೆರೆಯದ ಸಂಕುಚಿತ ಮನೋಭಾವ ಇಂದು ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ವಿಶಾಲ ಹೃದಯವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಹುಣಸೂರು ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕಾರ್ಯದರ್ಶಿ ಡಾ. ರೇಣುಕ ಪ್ರಸಾದ್ ಕೆ.ಎಸ್. ವ್ಯಕ್ತಿತ್ವದ ಘನತೆ ಮತ್ತು ಶೈಕ್ಷಣಿಕ ಜವಾಬ್ದಾರಿ ಕುರಿತು ವಿಸ್ತöÈತವಾಗಿ ಉಪನ್ಯಾಸ ನೀಡಿ ಕಾಯಕ ಯೋÃಗಿ ಬಸವಣ್ಣನವರು ಹಾಗೂ ಅಕ್ಕಮಹಾದೇವಿಯವರ ವಚನಗಳನ್ನು ಉಲ್ಲೇಖಿಸಿ ಮನುಷ್ಯ ಹೇಗಿರಬೇಕು ಎಂಬುದರ ಕುರಿತು ಗಹನವಾದ ವಿಚಾರಗಳನ್ನು ಮಂಡಿಸಿದರು.
ಶ್ರೀ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳು, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಇಂದಿನ ಸಮಾಜಕ್ಕೆ ಮತ್ತು ವಿದ್ಯಾರ್ಥಿ ವೃಂದಕ್ಕೆ ಅತ್ಯಂತ ಪ್ರಸ್ತುತವಾಗುವ ಮಾರ್ಗದರ್ಶನ ನೀಡಿ, ಆಗಿನ ಕಾಲದಲ್ಲಿದ್ದ ಶಿಕ್ಷಣಕ್ಕೂ ಇಂದಿನ ಶಿಕ್ಷಣ ವ್ಯವಸ್ಥೆಗೂ ಬಹಳ ವ್ಯತ್ಯಾಸವಿದೆ. ಅಂದಿನ ಕಾಲದಲ್ಲಿ ಕೇವಲ ಅಕ್ಷರ ಜ್ಞಾನ ಅಥವಾ ಬೌದ್ಧಿಕ ಶಿಕ್ಷಣಕ್ಕೆ ಮಾತ್ರ ಒತ್ತು ನೀಡುತ್ತಿರಲಿಲ್ಲ; ಅದರೊಂದಿಗೆ ನೈತಿಕ ಶಿಕ್ಷಣ ಹಾಗೂ ಅಧ್ಯಾತ್ಮಿಕ ಶಿಕ್ಷಣಕ್ಕೆ ಅತ್ಯುನ್ನತ ಸ್ಥಾನವಿತ್ತು. ಬದುಕಿನಲ್ಲಿ ಕೇವಲ ಪುಸ್ತಕದ ಶಿಕ್ಷಣವಿದ್ದರೆ ಸಾಲದು. ಬದುಕನ್ನು ಯಾವ ರೀತಿಯಲ್ಲಿ ಅನುಭವಿಸಿಕೊಂಡು ಹೋಗಬೇಕು, ಜೀವನದ ಸವಾಲುಗಳನ್ನು ಎದುರಿಸುವ ಗಟ್ಟಿತನವನ್ನು ಯಾವ ರೀತಿ ರೂಢಿಸಿಕೊಳ್ಳಬೇಕು ಎಂಬ ಅನುಭವದ ಮಾಗುವಿಕೆ ಪ್ರತಿ ವಿದ್ಯಾರ್ಥಿಗೂ ಅತ್ಯಗತ್ಯ. ಇವತ್ತು ಸಮಾಜ ತಾಂತ್ರಿಕತೆ ಮುಂದುವರಿಯುತ್ತಿರುವAತೆ ಯುವ ಪೀಳಿಗೆಯ ಆಲೋಚನೆಗಳೂ ಬದಲಾಗುತ್ತಿವೆ. ಆದರೆ ಈ ಬದಲಾವಣೆ ವಿನಾಶದ ಕಡೆಗೆ ಹೋಗದೆ, ಸನ್ಮಾರ್ಗದಲ್ಲಿ ಸಾಗಬೇಕು. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಾಂಸ್ಕöÈತಿಕ ಮೌಲ್ಯಗಳನ್ನು ಮರೆಯದೆ, ಅಧ್ಯಾತ್ಮಿಕ ಚಿಂತನೆ ಮತ್ತು ಅಂತರAಗದ ಶಾಂತಿಯನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಬೇಕು ಎಂದರು. ಅತಿಥಿಗಳಾದ ಶ್ರೀಶೈಲ ಬೀಳಗಿ ಹಾಗೂ ರೇಣುಕ ಪ್ರಸಾದ್ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರೇಣುಕ ಪ್ರಸಾದ್ ಅವರ ಪತ್ನಿ ಸುಜಾತಾ, ವೀರಾಜಪೇಟೆಯ ವೈದ್ಯರು ಹಾಗೂ ಪಕ್ಷಿ ತಜ್ಞ ಡಾ. ನರಸಿಂಹನ್, ಸಾಹಿತಿ ಗಿರೀಶ್ ಕಿಗ್ಗಾಲು, ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಯೋಗ ಗುರುಗಳಾದ ಪಿ.ಎ. ಲಕ್ಷಿ÷್ಮನಾರಾಯಣ, ಕೃಷಿಕರಾದ ತಿಮ್ಮಪ್ಪಯ್ಯ ಹಾಗೂ ಆಶಾ ತಿಮ್ಮಪ್ಪಯ್ಯ, ಶಿಕ್ಷಕರಾದ ಮೈಥಿಲಿ ರಾವ್, ಸುಧಾಕರ್, ಸೀತಾಲಕ್ಷಿ÷್ಮ, ವೈಲೇಶ್, ಡಿ. ಮಂಜುನಾಥ್, ರಜಿತ ಕಾರ್ಯಪ್ಪ ಸೇರಿದಂತೆ ಅನೇಕ ಗಣ್ಯರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಯಶಸ್ ಗೌಡ ಅವರು ಸ್ವಾಗತ ಕೋರಿದರು, ಶಿಕ್ಷಕರಾದ ಚೈತ್ರ ಅವರು ನಿರೂಪಣೆ ಮಾಡಿದರು ಮತ್ತು ವರ್ಷಿಣಿ ಅವರು ವಂದನಾರ್ಪಣೆ ಸಲ್ಲಿಸಿದರು. ಅತಿಥಿ ಪರಿಚಯವನ್ನು ಧೀರಜ್ ಗೌಡ ಹಾಗೂ ವಿದ್ಯಾರ್ಥಿನಿ ಸೋನಾ ಮಾಡಿಕೊಟ್ಟರು.