ಮಡಿಕೇರಿ, ಅ. ೯: ಭಾರತ ಸ್ಕಾ÷್ವಷ್ ಕ್ರೀಡಾತಾರೆ ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಎರಡು ಕಂಚಿನ ಪದಕ ವಿಜೇತೆ ಕೊಡಗಿನ ಮೂಲದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರಿಗೆ ತಮಿಳುನಾಡು ಸರಕಾರ ರೂ. ೬೦ ಲಕ್ಷ ಹಣದ ಕೊಡುಗೆಯೊಂದಿಗೆ ಸನ್ಮಾನಿಸಿದೆ.

ಸರಕಾರದ ಪರವಾಗಿ ತಮಿಳುನಾಡು ರಾಜ್ಯ ಪ್ರತಿನಿಧಿಸುತ್ತಿರುವ ಜೋಶ್ನಾ ಅವರನ್ನು ಮುಖ್ಯಮಂತ್ರಿ ಜೋಸೆಫ್ ವಿಜಯ್ ಸನ್ಮಾನಿಸಿ ಅವರ ಸಾಧನೆಯನ್ನು ಶ್ಲಾಘಿಸಿದರು. ಜೋಶ್ನಾ ಅವರು ಸತತ ಏಳು ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಂಡ ದಾಖಲೆಯೊಂದಿಗೆ ಈ ಬಾರಿಯೂ ಪದಕಗಳಿಸಿದ್ದಾರೆ. ಈ ಬಾರಿ ಜೋಶ್ನಾ ಮಿಕ್ಸೆಡ್ ಡಬಲ್ಸ್ನಲ್ಲಿ ಹಾಗೂ ಟೀಮ್ ಈವೆಂಟ್‌ನಲ್ಲಿ ಎರಡು ಕಂಚಿನ ಪದಕದ ಸಾಧನೆ ಮಾಡಿದ್ದಾರೆ.