ಮಡಿಕೇರಿ, ಅ. ೮: ಹುದಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿಯು ಹೊಸದಾಗಿ ರಚನೆಗೊಂಡಿದೆ. ಹುದಿಕೇರಿ ಕೊಡವ ಸಮಾಜದಲ್ಲಿ ಸಮಾಜದ ಅಧ್ಯಕ್ಷರಾದ ಮೀದೆರಿರ ಸವಿನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಡವರ ಆಚಾರ ವಿಚಾರ, ಅಯಿಮೆ ಕೊಯಿಮೆ, ಪದ್ದತಿ ಪರಂಪರೆ, ನಮ್ಮೆ ನಾಳ್ ಕೊಡವಾಮೆನ, ಕೊಡವ ಪಾಜೆನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೊಮ್ಮಕಡ ಕೂಟ ರಚನೆ ಮಾಡಲಾಯಿತು.
ಪೊಮ್ಮಕ್ಕಡ ಕೂಟದ ಅಧ್ಯಕ್ಷರಾಗಿ ಕುಪ್ಪಣಮಾಡ ನಿವ್ಯಾ ಕಾವೇರಮ್ಮ, ಉಪಾಧ್ಯಕ್ಷರಾಗಿ ಮುಕ್ಕಾಟಿರ ಭಾರತಿ, ಕಾರ್ಯದರ್ಶಿಯಾಗಿ ಬೊಜ್ಜಂಗಡ ಭವ್ಯ ದೇವಯ್ಯ, ಜಂಟಿ ಕಾರ್ಯದರ್ಶಿಯಾಗಿ ಚೇಂದಿರ ವಿನ್ಸಿ ಅಪ್ಪಣ್ಣ, ಖಜಾಂಚಿಯಾಗಿ ಬೊಜ್ಜಂಗಡ ತೀಷ್ಮ (ತುಳಸಿ) ಸಾಂಸ್ಕೃತಿಕ ನಾಯಕಿಯಾಗಿ ಬಾನಂಗಡ ಭಾಗ್ಯ ಪ್ರದೀಪ್ ಕ್ರೀಡಾ ನಾಯಕಿಯಾಗಿ ಕಳ್ಳೇಂಗಡ ಅರ್ಚನಾ ರವರು ಆಯ್ಕೆಯಾಗಿದಾರೆ.
ನಿರ್ದೇಶಕರಾಗಿ ಬಾನಂಗಡ ಪ್ರತಿಮಾ, ಕೋಡಂಗಡ ಡೈನ ದಮಯಂತಿ, ತೀತೀರ ಉರ್ಮಿಳಾ, ಬೊಳ್ಳಜಿರ ರಾಧಾ ಕರುಂಬಯ್ಯ, ದಡ್ಡೆರ ದಮಯಂತಿ, ಚಂಗುಲAಡ ಸುಮಾ ದಿಲೀಪ್, ಕುಪ್ಪಣಮಾಡ ಮೋನಿಕಾ ಚಂಗಪ್ಪ ಇವರುಗಳು ಆಯ್ಕೆಗೊಂಡು ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಸದಸ್ಯರು ಹಾಜರಿದ್ದರು.