ಇದು ಬದಲಾಗುತ್ತಿರುವ ಕಾಲ. ಒಂದು ಕಾಲದಲ್ಲಿ ಪತ್ರ ಬರೆಯಲು ದಿನಗಳು ಬೇಕಾಗುತ್ತಿತ್ತು, ದೂರದಲ್ಲಿರುವವರೊಂದಿಗೆ ಮಾತನಾಡಲು ದೂರವಾಣಿ ಕೇಂದ್ರಗಳನ್ನು ಅವಲಂಬಿಸಬೇಕಾಗುತ್ತಿತ್ತು, ಯಾವುದಾದರೂ ವಿಷಯ ತಿಳಿದುಕೊಳ್ಳಲು ಪುಸ್ತಕಗಳನ್ನು ಹುಡುಕ ಬೇಕಾಗುತ್ತಿತ್ತು. ಆದರೆ ಇಂದು ಒಂದು ಮೊಬೈಲ್ ಕೈಯಲ್ಲಿದ್ದರೆ ಜಗತ್ತೇ ನಮ್ಮ ಬೆರಳತುದಿಯಲ್ಲಿ ಇದ್ದಂತೆ. ಮೊಬೈಲ್, ಕಂಪ್ಯೂಟರ್, ಇಂಟರ್‌ನೆಟ್, ವಿವಿಧ ಗ್ಯಾಜೆಟ್‌ಗಳು ಹಾಗೂ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಅಥವಾ ಂI ನಮ್ಮ ಬದುಕಿನ ವೇಗವನ್ನೇ ಬದಲಿಸಿವೆ. ಶಿಕ್ಷಣದಿಂದ ವೈದ್ಯಕೀಯದವರೆಗೆ, ಕೃಷಿಯಿಂದ ಉದ್ಯಮದವರೆಗೆ, ಸಂವಹನದಿAದ ಮನರಂಜನೆಯವರೆಗೆ ತಂತ್ರಜ್ಞಾನ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ.

ಇಂದಿನ ಮಕ್ಕಳು ಹಿಂದಿನ ಪೀಳಿಗೆಗೆ ಸಿಗದಷ್ಟು ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯುವ ಅವಕಾಶ ಹೊಂದಿದ್ದಾರೆ. ಒಂದು ಪಾಠ ಅರ್ಥವಾಗದಿದ್ದರೆ ಮತ್ತೆ ವಿವರಿಸಿಕೊಳ್ಳಬಹುದು, ಹೊಸ ಭಾಷೆ ಕಲಿಯಬಹುದು, ಪ್ರಾಜೆಕ್ಟ್ಗಳಿಗೆ ಮಾಹಿತಿ ಸಂಗ್ರಹಿಸಬಹುದು, ಸೃಜನಶೀಲತೆಯನ್ನು ಬೆಳೆಸಿಕೊಳ್ಳಬಹುದು. ಂI ಸರಿಯಾದ ರೀತಿಯಲ್ಲಿ ಬಳಸಿದರೆ ವಿದ್ಯಾರ್ಥಿಯ ಕಲಿಕೆಗೆ ಉತ್ತಮ ಸಹಾಯಕನಾಗಬಲ್ಲದು. ಆದರೆ ಇಲ್ಲಿ ನಾವು ಒಂದು ಸೂಕ್ಷö್ಮವಾದ ಪ್ರಶ್ನೆಯನ್ನು ಕೇಳಿ ಕೊಳ್ಳಬೇಕಾಗಿದೆ. ತಂತ್ರಜ್ಞಾನ ನಮ್ಮ ಮಕ್ಕಳಿಗೆ ಸಹಾಯ ಮಾಡುತ್ತಿ ದೆಯೇ, ಅಥವಾ ಕೆಲವೊಮ್ಮೆ ನಮ್ಮ ಮಕ್ಕಳು ತಂತ್ರಜ್ಞಾನಕ್ಕೆ ಅವಲಂಬಿತ ರಾಗುತ್ತಿದ್ದಾರೆಯೇ ?

ಇಂದಿನ ಶಾಲಾ-ಕಾಲೇಜುಗಳ ಶಿಕ್ಷಣ ವ್ಯವಸ್ಥೆಯನ್ನು ನೋಡಿದರೆ ಮೊಬೈಲ್ ಮತ್ತು ಕಂಪ್ಯೂಟರ್‌ಗಳನ್ನು ಸಂಪೂರ್ಣವಾಗಿ ಮಕ್ಕಳಿಂದ ದೂರ ಇಡುವುದು ಸಾಧ್ಯವೂ ಅಲ್ಲ, ಸೂಕ್ತವೂ ಅಲ್ಲ. ಆನ್‌ಲೈನ್ ತರಗತಿಗಳು, ಅಧ್ಯಯನ ಸಾಮಗ್ರಿಗಳು, ಹೋಮ್‌ವರ್ಕ್, ಅಸೈನ್‌ಮೆಂಟ್‌ಗಳು, ಪರೀಕ್ಷಾ ಮಾಹಿತಿ, ಶೈಕ್ಷಣಿಕ ವಿಡಿಯೋಗಳು, ನೋಟ್ಸ್ಗಳು ಸೇರಿದಂತೆ ಅನೇಕ ವಿಷಯಗಳು ಡಿಜಿಟಲ್ ಮಾಧ್ಯಮದ ಮೂಲಕವೇ ಮಕ್ಕಳಿಗೆ ತಲುಪುತ್ತಿವೆ. ಕೆಲವೊಮ್ಮೆ ಶಿಕ್ಷಕರು ನೀಡುವ ಕೆಲಸವೂ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲೇ ಇರುತ್ತದೆ ಅಲ್ಲವೇ.

ಹೀಗಿರುವಾಗ “ಮೊಬೈಲ್ ನೋಡಬಾರದು”, “ಮೊಬೈಲ್ ಮುಟ್ಟಬಾರದು”, “ಮೊಬೈಲ್ ಎಂದರೆ ಕೆಟ್ಟದ್ದು” ಎಂದು ಮಕ್ಕಳಿಗೆ ಹೇಳುವುದು ಎಷ್ಟು ಸಮಂಜಸ ? ಇನ್ನೂ ಮುಖ್ಯವಾಗಿ, ಮಗು ಮೊಬೈಲ್ ಬಳಸುತ್ತಿದೆ ಎಂಬ ಕಾರಣಕ್ಕೆ ಅದನ್ನು ಕಸಿದುಕೊಳ್ಳುವುದು, ಪ್ರತಿಯೊಂದು ಕ್ಷಣವೂ “ಏನು ನೋಡುತ್ತಿರುವೆ ?” ಎಂದು ಅನುಮಾನಿಸುವುದು, ಅತಿಯಾದ ವಿಚಾರಣೆ ನಡೆಸುವುದು ಅಥವಾ ನಿರಂತರವಾಗಿ ಬೈಯುವುದು ಎಷ್ಟು ಸರಿ. ಎಲ್ಲವೂ ನಿಭಾಯಿಸಲು ಸಾಧ್ಯವಿಲ್ಲದ್ದು ಎಂದು ಅನಿಸುತ್ತಿದೆ. ಏಕೆಂದರೆ ಮೊಬೈಲ್‌ಗಿಂತ ದೊಡ್ಡದು ಮಗುವಿನ ಮನಸ್ಸು. ನಾವು ನಿಯಂತ್ರಿಸುವ ಉದ್ದೇಶದಲ್ಲಿ ಮಗುವಿನ ಮನಸ್ಸನ್ನು ನೋಯಿಸಬಾರದು.

ಒಬ್ಬ ಮಗು ತನ್ನ ಕೋಣೆಯಲ್ಲಿ ಮೊಬೈಲ್ ಹಿಡಿದುಕೊಂಡಿದೆ ಎಂದುಕೊಳ್ಳಿ. ಪೋಷಕರು ತಕ್ಷಣ “ಮತ್ತೆ ಮೊಬೈಲ್ ಹಿಡಿದುಕೊಂಡಿ ದ್ದೀಯಾ ? ಯಾವಾಗಲೂ ಇದೇ ಕೆಲಸ ! ಏನು ನೋಡುತ್ತಿದ್ದೀಯ? ಯಾರ ಜೊತೆ ಮಾತನಾಡುತ್ತಿದ್ದೀಯ ?” ಎಂದು ಕೋಪದಿಂದ ಕೇಳಿದರೆ, ಆ ಮಗು ತನ್ನನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ ಎಂಬ ಭಾವನೆಗೆ ಒಳಗಾಗಬಹುದು. ಅದೇ ಪೋಷಕರು, “ಏನು ನೋಡುತ್ತಿದ್ದೀಯ ? ನಿನ್ನ ಕ್ಲಾಸ್‌ಗೆ ಸಂಬAಧಿಸಿದ್ದೇನಾ ? ನನಗೂ ತೋರಿಸು, ನಾವಿಬ್ಬರೂ ನೋಡೋಣ” ಎಂದು ಮಗುವಿನ ಪಕ್ಕದಲ್ಲಿ ಕುಳಿತರೆ ಪರಿಸ್ಥಿತಿ ಬದಲಾಗುತ್ತದೆ. ಮಗುವಿನ ಮೇಲೆ ಅನುಮಾನ ಮಾಡುವ ಬದಲು ಅದರ ಜಗತ್ತನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವಾಗುತ್ತದೆ. ಮೊಬೈಲ್‌ನ್ನು ಕಸಿದುಕೊಳ್ಳುವುದಕ್ಕಿಂತ ಮಗುವಿನ ಪಕ್ಕದಲ್ಲಿ ಕುಳಿತು, “ಇದರಲ್ಲಿ ಏನು ಕಲಿಯುತ್ತಿದ್ದೀಯ ?” ಎಂದು ಕೇಳುವ ಒಂದು ಮಾತು ಕೆಲವೊಮ್ಮೆ ದೊಡ್ಡ ಬದಲಾವಣೆಯನ್ನು ತರಬಹುದು. ಇದು ಮಕ್ಕಳನ್ನು ಸಂಪೂರ್ಣವಾಗಿ ಸ್ವತಂತ್ರವಾಗಿ ಬಿಟ್ಟುಬಿಡಬೇಕು ಎಂದರ್ಥವೂ ಅಲ್ಲ. ಪೋಷಕರ ಗಮನ, ಮಾರ್ಗದರ್ಶನ ಮತ್ತು ಮಿತಿಗಳು ಅಗತ್ಯವೇ. ಆದರೆ ಆ ಮಿತಿಗಳು ಭಯದಿಂದ ಬರಬಾರದು, ನಂಬಿಕೆಯಿAದ ಬರಬೇಕು. “ನಾನು ನಿನ್ನನ್ನು ಗಮನಿಸುತ್ತಿದ್ದೇನೆ” ಎಂಬ ಭಾವನೆಗಿಂತ “ನಿನಗೆ ಏನಾದರೂ ಸಮಸ್ಯೆ ಬಂದರೆ ನಾನು ನಿನ್ನ ಜೊತೆಗಿದ್ದೇನೆ” ಎಂಬ ಭರವಸೆ ಮಗುವಿಗೆ ಹೆಚ್ಚು ಅಗತ್ಯ. ಮಕ್ಕಳು ತಮ್ಮ ಡಿಜಿಟಲ್ ಬದುಕಿನ ಬಗ್ಗೆ ಪೋಷಕರೊಂದಿಗೆ ಮುಕ್ತವಾಗಿ ಮಾತನಾಡುವಂತಹ ವಾತಾವರಣ ನಿರ್ಮಾಣವಾಗಬೇಕು. ತಪ್ಪು ಮಾಡಿದಾಗ ಮೊದಲು ಬೈಯುತ್ತಾರೆ ಎಂಬ ಭಯವಿದ್ದರೆ ಮಗು ಸಮಸ್ಯೆಯನ್ನು ಮರೆಮಾಚಬಹುದು. ಆದರೆ “ಏನಾದರೂ ತಪ್ಪಾದರೂ ಮೊದಲು ನನ್ನ ಬಳಿ ಬಾ, ನಾವು ಒಟ್ಟಿಗೆ ಪರಿಹಾರ ಹುಡುಕೋಣ” ಎಂಬ ಮಾತು ಮಗುವಿಗೆ ಸುರಕ್ಷತೆಯ ಭಾವನೆ ನೀಡುತ್ತದೆ. ಇದು ಕೂಡ ವಾಸ್ತವಿಕ ಪರಿಹಾರವಲ್ಲ.

ಇಂದು ಂI ಕೂಡ ಇದೇ ರೀತಿಯ ಸೂಕ್ಷö್ಮ ವಿಚಾರವಾಗಿದೆ. ಂIಯನ್ನು ಬಳಸಬಾರದು ಎಂದು ಮಕ್ಕಳಿಗೆ ಹೇಳುವುದು ಸುಲಭವಿರಬಹುದು; ಆದರೆ ಂI ಇಲ್ಲದ ಜಗತ್ತಿನಲ್ಲಿ ಅವರು ಮುಂದಿನ ದಿನಗಳಲ್ಲಿ ಬದುಕುವುದಿಲ್ಲ. ಆದ್ದರಿಂದ ಂIಯನ್ನು ಹೇಗೆ ಜವಾಬ್ದಾರಿಯಿಂದ ಬಳಸಬೇಕು ಎಂಬುದನ್ನು ಕಲಿಸುವುದು ಮುಖ್ಯ. ಪಾಠ ಅರ್ಥಮಾಡಿಕೊಳ್ಳಲು ಂIಯ ಸಹಾಯ ಪಡೆಯಬಹುದು, ಆದರೆ ಉತ್ತರವನ್ನು ಅರ್ಥಮಾಡಿಕೊಳ್ಳದೆ ನಕಲಿಸಬಾರದು. ಬರಹದ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು, ಆದರೆ ಸ್ವಂತ ಆಲೋಚನೆ ಯನ್ನು ಸಂಪೂರ್ಣವಾಗಿ ಂIಗೆ ಒಪ್ಪಿಸಬಾರದು. ಪ್ರಾಜೆಕ್ಟ್ಗಳಿಗೆ ಮಾಹಿತಿ ಪಡೆಯಬಹುದು, ಆದರೆ ಪರಿಶೀಲಿಸದೆ ಎಲ್ಲವನ್ನೂ ಸತ್ಯವೆಂದು ನಂಬಬಾರದು. ತಂತ್ರಜ್ಞಾನವನ್ನು ಬಳಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಆದರೆ ಸ್ವಂತ ಯೋಚನಾ ಶಕ್ತಿಯನ್ನು ಕಡಿಮೆ ಮಾಡಿಕೊಳ್ಳಬಾರದು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ “೮೦ ಫೋಟೋ” ಎಂಬ ಹೆಸರಿನಲ್ಲಿ ಂI ಬಳಸಿ ಹಳೆಯ ಕಾಲದ ಶೈಲಿಯಲ್ಲಿ ಫೋಟೋಗಳನ್ನು ಬದಲಾಯಿಸುವ ಟ್ರೆಂಡ್ ಹೆಚ್ಚಾಗಿದೆ. ಹಳೆಯ ಕಾಲದ ಉಡುಪು, ಮನೆ, ವಾತಾವರಣ ಹಾಗೂ ಫೋಟೋ ಶೈಲಿಯಲ್ಲಿ ತಮ್ಮ ಚಿತ್ರಗಳನ್ನು ಪರಿವರ್ತಿಸಿಕೊಂಡು ಹಂಚಿಕೊಳ್ಳುವುದು ನೋಡಲು ಸೃಜನಶೀಲವಾಗಿರಬಹುದು. ಆದರೆ ಇದರ ಇನ್ನೊಂದು ಮುಖವನ್ನು ನಾವು ಮರೆಯಬಾರದು. ನಮ್ಮ ಫೋಟೋಗಳನ್ನು ವಿವಿಧ ಂI ಅಪ್ಲಿಕೇಶನ್‌ಗಳಿಗೆ ಅಪ್‌ಲೋಡ್ ಮಾಡುವಾಗ ಅವು ಎಲ್ಲಿಗೆ ಹೋಗುತ್ತವೆ, ಯಾರ ಬಳಿ ಸಂಗ್ರಹವಾಗುತ್ತವೆ ಮತ್ತು ಮುಂದೆ ಹೇಗೆ ಬಳಸಲ್ಪಡಬಹುದು ಎಂಬುದರ ಬಗ್ಗೆ ಎಚ್ಚರಿಕೆ ಅಗತ್ಯ. ವಿಶೇಷವಾಗಿ ಮಕ್ಕಳ ಹಾಗೂ ವಿದ್ಯಾರ್ಥಿಗಳ ಫೋಟೋಗಳನ್ನು ಯೋಚಿಸದೆ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಅಥವಾ ಅಪರಿಚಿತ ಂI ಸಾಧನಗಳಿಗೆ ನೀಡುವುದು ಅಪಾಯಕಾರಿಯಾಗಬಹುದು. ಇಂದು ನಾವು ಮೋಜಿಗಾಗಿ ಬದಲಾಯಿಸಿದ ಒಂದು ಸಾಮಾನ್ಯ ಫೋಟೋವನ್ನು ನಾಳೆ ಯಾರಾದರೂ ಅನುಮತಿಯಿಲ್ಲದೆ ಮತ್ತಷ್ಟು ಬದಲಾಯಿಸಿ, ತಪ್ಪು ಅರ್ಥ ಬರುವಂತೆ ಬಳಸಬಹುದು. ಹೀಗಾಗಿ “ಫೋಟೋವನ್ನು ಬದಲಾಯಿಸಬಹುದೇ?” ಎನ್ನುವುದಕ್ಕಿಂತ “ಅದನ್ನು ಬದಲಾಯಿಸುವುದು ಮತ್ತು ಹಂಚಿಕೊಳ್ಳುವುದು ಸುರಕ್ಷಿತವೇ? ಸರಿಯೇ?” ಎಂಬ ಪ್ರಶ್ನೆಯನ್ನು ಮೊದಲು ಕೇಳಿಕೊಳ್ಳುವ ಡಿಜಿಟಲ್ ವಿವೇಕವನ್ನು ನಮ್ಮ ಮಕ್ಕಳು ಬೆಳೆಸಿಕೊಳ್ಳಬೇಕು.

ಆದರಲ್ಲೂ ಇದರ ಇನ್ನೊಂದು ಮುಖವೂ ಇದೆ. ಒಂದು ಸಣ್ಣ ಮನಸ್ತಾಪ, ಸ್ನೇಹಿತರ ನಡುವಿನ ಜಗಳ ಅಥವಾ ಕ್ಷಣಿಕ ಕೋಪ ಕೆಲವೊಮ್ಮೆ ಡಿಜಿಟಲ್ ದುರುಪಯೋಗಕ್ಕೆ ಕಾರಣವಾಗಬಹುದು. ಉದಾಹರಣೆಗೆ, ಇಬ್ಬರು ಸ್ನೇಹಿತರು ಯಾವುದೋ ಕಾರಣಕ್ಕೆ ದೂರವಾಗುತ್ತಾರೆ. “ಅವನಿಗೆ ಅಥವಾ ಅವಳಿಗೆ ಒಂದು ಪಾಠ ಕಲಿಸಬೇಕು” ಎಂಬ ಕೋಪದ ಆಲೋಚನೆ ಒಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ಮೂಡಬಹುದು. ಂI ಅಥವಾ ಇತರ ಡಿಜಿಟಲ್ ಸಾಧನಗಳನ್ನು ದುರುಪಯೋಗಪಡಿಸಿಕೊಂಡು ಒಬ್ಬ ಹುಡುಗಿಯ ಸಾಮಾನ್ಯ ಫೋಟೋವನ್ನು ತೆಗೆದುಕೊಂಡು, ಸಂಬAಧವಿಲ್ಲದ ಮತ್ತೊಬ್ಬ ಹುಡುಗನ ಫೋಟೋವನ್ನು ಸೇರಿಸಿ, ತಪ್ಪು ಅರ್ಥ ಬರುವಂತಹ ನಕಲಿ ಚಿತ್ರವೊಂದನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಹುದು. ಚಿತ್ರ ಕೃತಕವಾಗಿರಬಹುದು, ಕಥೆ ಸುಳ್ಳಾಗಿರಬಹುದು, ಆದರೆ ಅದರಿಂದ ಉಂಟಾಗುವ ನೋವು ಮಾತ್ರ ನಿಜವಾಗಿರುತ್ತದೆ. ಒಂದು ಕ್ಷಣದ ಕೋಪದಲ್ಲಿ ಮಾಡಿದ ಕೃತ್ಯ ಮತ್ತೊಬ್ಬ ವಿದ್ಯಾರ್ಥಿಯ ಗೌರವ, ಸ್ನೇಹ, ಕುಟುಂಬದ ನೆಮ್ಮದಿ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುವಂತಾಗಬಹುದು. ಹೀಗಾಗಿ ಇಂತಹ ಕೃತ್ಯಗಳನ್ನು “ಮಕ್ಕಳ ತಮಾಷೆ” ಎಂದು ಕಡೆಗಣಿಸುವುದು ಸರಿಯಲ್ಲ. ಡಿಜಿಟಲ್ ಜಗತ್ತಿನಲ್ಲೂ ಜವಾಬ್ದಾರಿ ಇದೆ, ಗೌರವ ಇದೆ, ಮಿತಿ ಇದೆ.

ಇಂದು ಒಂದು ಫೋಟೋವನ್ನು ಬದಲಿಸುವುದು ಸುಲಭವಾಗಿದೆ. ನಾಳೆ ಧ್ವನಿಯನ್ನು ಅನುಕರಿಸುವುದು, ವಿಡಿಯೋವನ್ನು ಬದಲಿಸುವುದು ಅಥವಾ ಯಾರಾದರೂ ಹೇಳದ ಮಾತನ್ನು ಅವರು ಹೇಳಿದಂತೆ ತೋರಿಸುವಂತಹ ತಂತ್ರಜ್ಞಾನಗಳು ಇನ್ನಷ್ಟು ಸಾಮಾನ್ಯವಾಗಬಹುದು. ಆದ್ದರಿಂದ ಮುಂದಿನ ಪೀಳಿಗೆಗೆ ನಾವು ಕಲಿಸಬೇಕಾದದ್ದು ಕೇವಲ ತಂತ್ರಜ್ಞಾನ ಬಳಕೆಯಲ್ಲ, ತಂತ್ರಜ್ಞಾನದ ಹಿಂದೆ ಇರುವ ನೈತಿಕತೆ ಮತ್ತು ಜವಾಬ್ದಾರಿಯೂ ಹೌದು. “ಇದನ್ನು ಮಾಡಬಹುದೇ?” ಎನ್ನುವುದಕ್ಕಿಂತ ಮೊದಲು “ಇದನ್ನು ಮಾಡುವುದು ಸರಿಯೇ?” ಎಂದು ಯೋಚಿಸುವ ಮನಸ್ಸು ಮಕ್ಕಳಲ್ಲಿ ಬೆಳೆಯಬೇಕು.

ಇಲ್ಲಿ ಪೋಷಕರ ಪಾತ್ರ ಅತ್ಯಂತ ದೊಡ್ಡದು. ಮಕ್ಕಳ ಕೈಯಲ್ಲಿರುವ ಮೊಬೈಲ್‌ನ್ನು ಕೇವಲ ಅನುಮಾನದ ದೃಷ್ಟಿಯಿಂದ ನೋಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅವರ ಜೊತೆ ಮಾತನಾಡಬೇಕು, ಅವರ ಜೊತೆ ಬೆರೆಯಬೇಕು, ಅವರ ಡಿಜಿಟಲ್ ಜಗತ್ತನ್ನು ಅರ್ಥಮಾಡಿಕೊಳ್ಳ ಬೇಕು. ಮಗುವಿಗೆ ಇಷ್ಟವಾದ ಒಂದು ಶೈಕ್ಷಣಿಕ ವಿಡಿಯೋವನ್ನು ಅವರ ಜೊತೆ ಕುಳಿತು ನೋಡಬಹುದು. ಅವರು ಬಳಸುವ ಯಾವುದಾದರೂ ಶೈಕ್ಷಣಿಕ ಅಪ್ಲಿಕೇಶನ್ ಬಗ್ಗೆ ಕೇಳಬಹುದು. ಆನ್‌ಲೈನ್ ತರಗತಿಯ ಅನುಭವ ಹೇಗಿದೆ ಎಂದು ವಿಚಾರಿಸಬಹುದು. “ಇಂದು ಮೊಬೈಲ್‌ನಲ್ಲಿ ಏನು ಕಲಿತೆ?” ಎಂಬ ಪ್ರಶ್ನೆ “ಇಂದು ಮೊಬೈಲ್‌ನಲ್ಲಿ ಏನು ನೋಡಿದೆ?” ಎನ್ನುವುದಕ್ಕಿಂತ ವಿಭಿನ್ನವಾದ ಸಂಬAಧವನ್ನು ನಿರ್ಮಿಸುತ್ತದೆ. ಮಗುವಿನ ಮೇಲೆ ಕಣ್ಣಿಟ್ಟಿರುವುದಕ್ಕಿಂತ ಮಗುವಿನ ಪಕ್ಕದಲ್ಲಿ ನಿಂತಿರುವುದು ಹೆಚ್ಚು ಪರಿಣಾಮಕಾರಿ.

ಅದೇ ರೀತಿ ಶಿಕ್ಷಕರ ಜವಾಬ್ದಾರಿಯೂ ಇದೆ. ಶಾಲೆ ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ನೀಡುವ ಸ್ಥಳವಲ್ಲ, ಬದುಕನ್ನು ಎದುರಿಸಲು ಸಿದ್ಧಗೊಳಿಸುವ ಪುಣ್ಯ ಸ್ಥಳ. ಇಂದು ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಭಾಷೆ ಎಷ್ಟು ಅಗತ್ಯವೋ, ಡಿಜಿಟಲ್ ಜವಾಬ್ದಾರಿಯೂ ಅಷ್ಟೇ ಅಗತ್ಯ. ನಕಲಿ ಚಿತ್ರವನ್ನು ಹೇಗೆ ಗುರುತಿಸಬೇಕು ? ಎಲ್ಲ ಮಾಹಿತಿಯನ್ನೂ ನಂಬಬಹುದೇ ? ಮತ್ತೊಬ್ಬರ ಜೀವನವನ್ನು ಹೇಗೆ ಗೌರವಿಸಬೇಕು? ಂI ನೀಡಿದ ಉತ್ತರವನ್ನು ಹೇಗೆ ಪರಿಶೀಲಿಸಬೇಕು ? ಸಾಮಾಜಿಕ ಜಾಲತಾಣದಲ್ಲಿ ಏನನ್ನು ಹಂಚಬೇಕು, ಏನನ್ನು ಹಂಚಬಾರದು ? ಇಂತಹ ಪ್ರಶ್ನೆಗಳ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವ ಅಗತ್ಯವಿದೆ.

ಮಕ್ಕಳಿಗೂ ಒಂದು ಮಾತು. ನಿಮ್ಮ ಪೋಷಕರು ಮೊಬೈಲ್ ಬಳಕೆಯ ಬಗ್ಗೆ ಪ್ರಶ್ನಿಸಿದಾಗ ಅವರು ನಿಮ್ಮ ಶತ್ರುಗಳಲ್ಲ. ಅವರು ನಿಮ್ಮನ್ನು ಕಾಪಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಿಮ್ಮ ಜಗತ್ತನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂಬುದು ಎಷ್ಟು ಸತ್ಯವೋ, ಅವರ ಆತಂಕವನ್ನು ನೀವು ಅರ್ಥಮಾಡಿಕೊಳ್ಳುವುದೂ ಅಷ್ಟೇ ಮುಖ್ಯ. ಮೊಬೈಲ್ ನಿಮ್ಮ ಜೀವನದ ಒಂದು ಭಾಗವಾಗಿರಬೇಕೇ ಹೊರತು ನಿಮ್ಮ ಸಂಪೂರ್ಣ ಜೀವನವಾಗಬಾರದು. ಸ್ನೇಹಿತನೊಂದಿಗೆ ಮಾತನಾಡಲು ಮೊಬೈಲ್ ಬೇಕಾಗಬಹುದು, ಆದರೆ ಸ್ನೇಹವನ್ನು ಉಳಿಸಿಕೊಳ್ಳಲು ಮೊಬೈಲ್ ಮಾತ್ರ ಸಾಕಾಗುವುದಿಲ್ಲ. ಂI ನಿಮಗೆ ಉತ್ತರ ಕೊಡಬಹುದು, ಆದರೆ ಜೀವನದ ಸರಿಯಾದ ನಿರ್ಧಾರವನ್ನು ಯಾವಾಗಲೂ ನಿಮ್ಮ ವಿವೇಕವೇ ತೆಗೆದುಕೊಳ್ಳಬೇಕು.

ತಂತ್ರಜ್ಞಾನವನ್ನು ಮಕ್ಕಳಿಂದ ಸಂಪೂರ್ಣವಾಗಿ ದೂರ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡುವುದು ಬಹುಶಃ ಅವರ ಭವಿಷ್ಯದಿಂದಲೇ ಅವರನ್ನು ದೂರ ಮಾಡುವಂತಾಗಬಹುದು. ಬದಲಾಗಿ ತಂತ್ರಜ್ಞಾನವನ್ನು ಅವರ ಕೈಯಲ್ಲೇ ಇರಿಸಿ, ಅದರ ಸರಿಯಾದ ದಿಕ್ಕನ್ನು ತೋರಿಸಬೇಕು. ಮೊಬೈಲ್‌ನ್ನು ಜ್ಞಾನದ ಕಿಟಕಿಯನ್ನಾಗಿ ಪರಿವರ್ತಿಸಿಕೊಳ್ಳಬೇಕೇ ಹೊರತು ಬದುಕಿನ ಸಂಪೂರ್ಣ ಕಿಟಕಿಯನ್ನಾಗಿ ಅಲ್ಲ. ಂIಯನ್ನು ಕೇವಲ ಸಹಾಯಕನನ್ನಾಗಿ ಮಾಡಬೇಕೇ ಹೊರತು ಸ್ವಂತ ಬುದ್ಧಿಗೆ ಪರ್ಯಾಯವನ್ನಾಗಿ ಅಲ್ಲ. ಸಾಮಾಜಿಕ ಜಾಲತಾಣವನ್ನು ಸಂಪರ್ಕದ ಮಾಧ್ಯಮವನ್ನಾಗಿ ಬಳಸಬೇಕೇ ಹೊರತು ನಿಜವಾದ ಸಂಬAಧಗಳ ಪರ್ಯಾಯವನ್ನಾಗಿ ಅಲ್ಲ.

ಕೊನೆಗೆ ನಾವು ಒಂದು ವಿಷಯವನ್ನು ನೆನಪಿಡಬೇಕು. ಮಕ್ಕಳನ್ನು ಕಾಪಾಡುವುದು ಎಂದರೆ ಅವರ ಕೈಯಲ್ಲಿರುವ ಪ್ರತಿಯೊಂದು ಸಾಧನವನ್ನು ಕಸಿದುಕೊಳ್ಳುವುದಲ್ಲ. ಕೆಲವೊಮ್ಮೆ ಅವರ ಪಕ್ಕದಲ್ಲಿ ಕುಳಿತು, ಅವರು ನೋಡುವುದನ್ನು ಅರ್ಥಮಾಡಿಕೊಳ್ಳುವುದು, ಅವರ ಮಾತನ್ನು ಕೇಳುವುದು, ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ತಪ್ಪಾದಾಗ ಬೈಯುವ ಮೊದಲು ದಾರಿ ತೋರಿಸುವುದೇ ನಿಜವಾದ ರಕ್ಷಣೆ.

ಮಕ್ಕಳ ಕೈಯಲ್ಲಿರುವ ಮೊಬೈಲ್‌ಗಿಂತ ಅವರ ಮನಸ್ಸು ಮುಖ್ಯ. ಅವರ ಮೊಬೈಲ್ ಬಳಕೆಯನ್ನು ನಿಯಂತ್ರಿಸುವುದಕ್ಕಿAತ ಅವರ ವಿವೇಕವನ್ನು ಬೆಳೆಸುವುದು ಮುಖ್ಯ. ಅವರ ಮೇಲೆ ಅನುಮಾನ ಮಾಡುವುದಕ್ಕಿಂತ ಅವರೊಂದಿಗೆ ನಂಬಿಕೆಯ ಸಂಬAಧ ಕಟ್ಟುವುದು ಮುಖ್ಯ.

ತಂತ್ರಜ್ಞಾನ ಬೆಳೆಯಲಿ. ಂI ಬೆಳೆಯಲಿ. ನಮ್ಮ ಮಕ್ಕಳು ಹೊಸ ಜಗತ್ತನ್ನು ಗೆಲ್ಲಲಿ. ಆದರೆ ಆ ಬೆಳವಣಿಗೆಯ ನಡುವೆ ಮಾನವೀಯತೆ, ಸ್ನೇಹ, ಗೌರವ, ಪ್ರೀತಿ ಮತ್ತು ಜವಾಬ್ದಾರಿ ಮಾತ್ರ ಕಳೆದುಹೋಗಬಾರದು ಏಕೆಂದರೆ ನಾಳೆಯ ಭಾರತವನ್ನು ಕೇವಲ ಂI ನಿರ್ಮಿಸುವುದಿಲ್ಲ. ಂIಯನ್ನು ಬಳಸುವ ನಮ್ಮ ಮಕ್ಕಳು ನಿರ್ಮಿಸುತ್ತಾರೆ.

ಆ ಮಕ್ಕಳ ಕೈಯಲ್ಲಿ ತಂತ್ರಜ್ಞಾನ ಇರುವುದಕ್ಕಿಂತ, ಅವರ ಮನಸ್ಸಿನಲ್ಲಿ ವಿವೇಕ ಇರಲಿ. ಅವರ ಕಣ್ಣಲ್ಲಿ ಕನಸುಗಳಿರಲಿ. ಅವರ ನಡೆಗೆ ಜವಾಬ್ದಾರಿ ಇರಲಿ ಮತ್ತು ಅವರ ಹಿಂದೆ, ಅವರನ್ನು ಕೇವಲ ನಿಯಂತ್ರಿಸುವವರಾಗಿ ಅಲ್ಲ, ಅವರ ಜೊತೆ ನಡೆಯುವ ತಂದೆ-ತಾಯಿಗಳಾಗಿ ನಾವು ಇರೋಣ.

ತಂತ್ರಜ್ಞಾನ ನಮ್ಮ ಕೈಯಲ್ಲಿದೆ. ಆದರೆ, ನಮ್ಮ ಮಕ್ಕಳ ಕೈಯಲ್ಲಿದೆ ನಾಳೆಯ ಭವಿಷ್ಯ.

-ಈರಮಂಡ ಹರಿಣಿ ವಿಜಯ್

ಕೋಡಂಬೂರು-ಮೂರ್ನಾಡು

ಮೊ: ೯೭೪೦೯೭೦೮೪೦