ಸೋಮವಾರಪೇಟೆ, ಅ. ೮: ಸದಾ ಬಾಡಿಗೆ, ಕೆಲಸದ ಒತ್ತಡದಲ್ಲಿ ದಿನ ಕಳೆಯುವ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರು ತಮ್ಮೆಲ್ಲಾ ಜಂಜಾಟ ಮರೆತು ಮೈದಾನದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಂಭ್ರಮದಿAದ ಭಾಗವಹಿಸುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದರು.

ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಆಯುಧ ಪೂಜೋತ್ಸವದ ಅಂಗವಾಗಿ ಸಂಘದ ಸದಸ್ಯರಿಗೆ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಸದಸ್ಯರುಗಳು ಸಂಭ್ರಮದಿAದ ಭಾಗಿಯಾದರು. ಕ್ರೀಡಾಕೂಟಕ್ಕೆ ಚೌಡ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಹಿಸಿದ್ದರು. ಈ ಸಂದರ್ಭ ಚೌಡ್ಲು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನತೀಶ್ ಮಂದಣ್ಣ, ಸಂಘದ ಉಪಾಧ್ಯಕ್ಷ ಬಿ.ಎನ್. ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಣಿ ಕುಶಾಲಪ್ಪ, ಖಜಾಂಚಿ ಡ್ಯಾನಿ ಡೋಮಿನಿಕ್, ಸಹಕಾರ್ಯದರ್ಶಿ ಎಂ.ಎA. ಕಿರಣ್ ಹಾಗೂ ಎಸ್.ಎಂ. ಕೃಷ್ಣ ಇದ್ದರು.

ಸದಸ್ಯರ ತಂಡಗಳ ನಡುವೆ ನಡೆದ ಕಬಡ್ಡಿ ಪಂದ್ಯದಲ್ಲಿ ಮೊದಲನೇ ಸ್ಥಾನವನ್ನು ಕೆ.ಎನ್. ಶರತ್ ತಂಡ ಪಡೆಯಿತು. ದ್ವಿತೀಯ ಸ್ಥಾನವನ್ನು ಎ.ಸಿ. ವಿನಯ್ ತಂಡ ಹಾಗೂ ತೃತೀಯ ಸ್ಥಾನವನ್ನು ಸತೀಶ್ ತಂಡ ಪಡೆಯಿತು. ಹಗ್ಗ ಜಗ್ಗಾಟದಲ್ಲಿ ಪ್ರಥಮ ಪ್ರಸನ್ನ ತಂಡ, ದ್ವಿತೀಯ ಕೆ.ಎನ್. ಹರೀಶ್ ತಂಡ ಹಾಗೂ ತೃತೀಯ ಮಹೇಶ್ ತಂಡ ಪಡೆಯಿತು. ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಸಿ.ಎಂ. ಶಿವಣ್ಣ ಪ್ರಥಮ, ಯು.ಎಂ. ಸುಖಾಂತ್ ದ್ವಿತೀಯ, ಎಸ್.ಬಿ. ರಮೇಶ್ ತೃತೀಯ, ಬಾಂಬ್ ಇನ್ ದ ಸಿಟಿ ಸ್ಪರ್ಧೆಯಲ್ಲಿ ಸಿ.ಎಂ. ಶಿವಣ್ಣ ಪ್ರಥಮ, ಯು.ಟಿ. ಚಂದ್ರಶೇಖರ್ ದ್ವಿತೀಯ ಹಾಗೂ ಎಸ್.ಬಿ. ರಮೇಶ್ ತೃತೀಯ ಸ್ಥಾನ ಗಳಿಸಿದರು.

೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಯು.ಎಂ. ಸುಖಾಂತ್ ಪ್ರಥಮ, ಎ.ಕೆ. ಪ್ರಕಾಶ್ ದ್ವಿತೀಯ, ಹಾಗೂ ಬಿ.ಜಿ. ಕೃಷ್ಣಪ್ಪ ತೃತೀಯ ಸ್ಥಾನ ಪಡೆದರು. ೨೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಕೆ.ಎನ್. ಶರತ್ ಪ್ರಥಮ, ಎಚ್.ಪಿ. ದುಶ್ಯಂತ್ ದ್ವಿತೀಯ ಹಾಗೂ ಕೆ.ಎ. ಮಿಥುನ್ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಆಯುಧಪೂಜಾ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಅಧ್ಯಕ್ಷ ಬಾಲಕೃಷ್ಣ ಪೂಜಾರಿ ತಿಳಿಸಿದರು.