ನಾಪೋಕ್ಲು, ಅ. ೮: ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ೨೦೨೬-೨೭ನೇ ಶೈಕ್ಷಣಿಕ ಸಾಲಿನ ಕ್ರೀಡಾಕೂಟಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಲಯ ಮಟ್ಟ, ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ವಾಲಿಬಾಲ್, ಫುಟ್‌ಬಾಲ್, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಹಾಕಿ, ಬಾಲ್ ಬ್ಯಾಡ್ಮಿಂಟನ್, ಚೆಸ್ ಹಾಗೂ ಮೇಲಾಟಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಶಟಲ್ ಬ್ಯಾಡ್ಮಿಂಟನ್‌ನಲ್ಲಿ ೧೦ನೇ ತರಗತಿಯ ವಿದ್ಯಾರ್ಥಿನಿ ವಂಶಿ ಬಿ.ಎ. ಅವರು ವಿಭಾಗ ಮಟ್ಟಕ್ಕೆ ಆಯ್ಕೆ. ಹಾಕಿ ತಂಡದಿAದ ಕರುಣ್ ಕಾರ್ಯಪ್ಪ, ಧ್ಯಾನ್ ದೇವಯ್ಯ, ಕಾರ್ತಿಕ್ ಮತ್ತು ತನುಫ್ ಅವರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪರಿಧಿ ಪೂವಮ್ಮ ಕೆ.ಬಿ. ಅವರು ಟೇಬಲ್ ಟೆನ್ನಿಸ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಾಧಕ ಕ್ರೀಡಾಪಟುಗಳಿಗೆ ತರಬೇತುದಾರರಾದ ಸರಿತಾ ಕೆ.ಕೆ., ದೈಹಿಕ ಶಿಕ್ಷಕಿ ಕುಮಾರಿ ವೀಕ್ಷಿತ ಪಿ. ಈ. ಹಾಗೂ ಶಾಲೆಯ ಪ್ರಾಂಶುಪಾಲ ರಾದ ಶಾರದ ಬಿ.ಎಂ. ಅವರು ಮಾರ್ಗದರ್ಶನ ನೀಡಿದ್ದಾರೆ. ಈ ಶ್ರಮದಾನ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಸಮಿತಿಯ ಮಾಸ್ಟರ್ ದಿವ್ಯಾ, ಸ್ವಯಂಸೇವಕರಾದ ಉಮಾಲಕ್ಷ್ಮಿ, ಶ್ಯಾಮಲಾ, ಚಂದ್ರಕಲಾ, ರಶ್ಮಿ, ಸೀನ ಮಾಧವನ್, ಶಂಕರ, ದಿಲಿಶ್, ಸುರೇಶ್, ಕೃಷ್ಣ, ಶರವಣ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಸಂತೋಷ್ ಅವರು ಉಪಸ್ಥಿತರಿದ್ದರು.