ಮಡಿಕೇರಿ, ಅ. ೮: ಕೇಂದ್ರ ಸರಕಾರದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ ಎಂದು ದೂರಿದ ಸಂಸದ ಯದುವೀರ್ ಒಡೆಯರ್ ಕಾರ್ಯಾಂಗ ರಾಜಕೀಯದಿಂದ ದೂರವಿರಬೇಕು. ರಾಜಕೀಯ ಮಾಡಲು ನಾವಿದ್ದೇವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ನಡೆಯಿತು.
ಈ ವೇಳೆ ಅಧಿಕಾರಿಗಳ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿದ ಯದುವೀರ್ ವಸತಿ ಯೋಜನೆಗಳ ಅನುಷ್ಠಾನದಲ್ಲಿ ವಿಫಲತೆ, ತ್ಯಾಜ್ಯ ವಿಂಗಡಣೆ ಅಸಮರ್ಪಕತೆ, ಪಾರ್ಕ್ ನಿರ್ಮಾಣದಲ್ಲಿ ವೈಫಲ್ಯ, ಗುರಿ ಮುಟ್ಟದ ಜಲಜೀವನ್ ಮಿಷನ್ ಯೋಜನೆ, ಅವೈಜ್ಞಾನಿಕತೆಯಲ್ಲಿ ಕೂಡಿರುವ ಅಮೃತ್ ಯೋಜನೆ ಕಾಮಗಾರಿಗಳಿಗೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.
ಅಮೃತ್ ಅಸಮರ್ಪಕತೆ ವಿರುದ್ಧ ಕಿಡಿ
ಮಡಿಕೇರಿಯಲ್ಲಿ ಅಮೃತ್ ಯೋಜನೆ ಪೂರ್ಣಗೊಳ್ಳದ ಬಗ್ಗೆಯೂ ಸಂಸದರು ಸೇರಿದಂತೆ ದಿಶಾ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ದಿಶಾ ಸಮಿತಿ ಸದಸ್ಯ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಅಮೃತ್ ಯೋಜನೆ ಮಾರ್ಗಸೂಚಿ ಪ್ರಕಾರ ನಡೆಯುತ್ತಿಲ್ಲ ಎಂದು ದೂರಿದರು. ಸಂಬAಧಿಸಿದ ಅಧಿಕಾರಿ ಪ್ರತಿಕ್ರಿಯಿಸಿ, ೪ ಝೋನ್‌ಗಳಲ್ಲಿ ಕೆಲಸ ನಡೆಯುತ್ತಿದ್ದು, ೨ ಝೋನ್ ಪೂರ್ಣಗೊಂಡಿದೆ. ಹೊಸಪೈಪ್ ಲೈನ್ ವ್ಯವಸ್ಥೆ ೪೫ ಕಿ.ಮೀ. ಪೂರ್ಣಗೊಂಡಿದೆ ಎಂದು ಮಾಹಿತಿ ಒದಗಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ವೀರಾಜಪೇಟೆ ಭಾಗದಲ್ಲಿ ಅಮೃತ್ ಯೋಜನೆ ನೆನೆಗುದಿಗೆ ಬಿದ್ದಿದೆ. ೨ ತಿಂಗಳು ಕಾಮಗಾರಿ ಸ್ಥಗಿತವಾಗಿದೆ ಎಂದು ದೂರಿದರು. ಅಮೃತ್ ಯೋಜನೆ ಅಧಿಕಾರಿ ಜಯಕುಮಾರ್ ಮಾತನಾಡಿ, ವೀರಾಜಪೇಟೆಯಲ್ಲಿ ಕಾರ್ಮಿಕರ ಕೊರತೆಯಿಂದ ಕಾಮಗಾರಿ ಸ್ಥಗಿತವಾಗಿದ್ದು, ಇದೀಗ ಆರಂಭವಾಗಿದೆ. ಕುಶಾಲನಗರ-ಮಡಿಕೇರಿಯಲ್ಲಿ ಮಾರ್ಚ್ನೊಳಗೆ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿದರು.
ಕೊಡಗು ಕೆಲ ಅಧಿಕಾರಿಗಳ ಹಾಲಿಡೇ ಸ್ಪಾಟ್ ಆಗಿದೆ
ಕೊಡಗು ಜಿಲ್ಲೆ ಕೆಲ ಅಧಿಕಾರಿಗಳ ಹಾಲಿಡೇ ಸ್ಪಾಟ್ ಎಂಬAತಾಗಿದೆ ಎಂದು ಸಂಸದ ಯದುವೀರ್ ಕಿಡಿಕಾರಿದರು.
ನಿರೀಕ್ಷಿತಮಟ್ಟದಲ್ಲಿ ಕೆಲಸ ಆಗುತ್ತಿಲ್ಲ. ಪೌರಾಡಳಿತ ಸಚಿವರು ಮೈಸೂರಿನಲ್ಲಿ ನಡೆಸಿದ ಸಭೆಗೆ ಕೊಡಗಿನ ಅಧಿಕಾರಿಗಳು ಬಂದಿಲ್ಲ. ಸರಕಾರಿ ಸೇವೆಗೆ ಗೌರವವೇ ನೀಡುತ್ತಿಲ್ಲ. ಪ್ರತಿ ಸಭೆಯಲ್ಲೂ ಒಂದೇ ರೀತಿ ಉತ್ತರ ಸಿಗುತ್ತಿದೆ. ಫಲಿತಾಂಶ ಮಾತ್ರ ಶೂನ್ಯ. ನಮಗೆ ಯಾವುದೇ ತೃಪ್ತಿ ಇಲ್ಲ ಎಂದರು.
ರಾಜಕೀಯದಿAದ ಕಾರ್ಯಾಂಗ ದೂರವಿರಬೇಕು
ದಿಶಾ ಸಮಿತಿ ಸದಸ್ಯ ಆರ್.ಕೆ. ಚಂದ್ರು ಮಾತನಾಡಿ, ಕೇಂದ್ರ ಸರಕಾರದ ಯೋಜನೆಗಳನ್ನು ಅನುಷ್ಠಾನ ಮಾಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದು, ಇದರ ಹಿಂದೆ ರಾಜಕೀಯ ಅಡಗಿರುವ ಅನುಮಾನ ವ್ಯಕ್ತವಾಗುತ್ತಿದೆ. ರಾಜಕೀಯ ಒತ್ತಡದಿಂದ ಈ ರೀತಿ ವಿಳಂಬ ಧೋರಣೆ ಅನುಸರಿಸುತ್ತಿರುವುದಾಗಿ ಆರೋಪಿಸಿದರು.
ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಕೇಂದ್ರ ಸರಕಾರದ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುತ್ತಿಲ್ಲ ಎಂದರು.
ಕೇAದ್ರ ಸರಕಾರದ ವಸತಿ ಯೋಜನೆಗಳು ಕೂಡ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ತಪ್ಪು ಅಂಕಿಅAಶ ನೀಡಿ ದಾರಿ ತಪ್ಪಿಸುವ ಯತ್ನವಾಗುತ್ತಿದೆ ಎಂದು ದೂರಿದರು. ಇದೇ ವೇಳೆ ಸಭೆಯಲ್ಲಿ ತಾ.ಪಂ. ಹಾಗೂ ವಸತಿ ಇಲಾಖೆ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ತಪ್ಪುಗಳಿರುವುದು ಇದಕ್ಕೆ ಪೂರಕ ಎಂಬAತಿದೆ ಎಂದರು.
ರಾಜಕೀಯ ಕಾರಣದಿಂದ ಕೇಂದ್ರದ ಯೋಜನೆ ಅನುಷ್ಠಾನವಾಗುತ್ತಿಲ್ಲ ಎಂದು ನಾಗೇಶ್ ಆರೋಪಿಸಿದರು.
ಸಂಸದ ಯದುವೀರ್ ಮಾತನಾಡಿ, ಕಾರ್ಯಾಂಗಕ್ಕೆ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ನಾವು ಮಾಡುತ್ತೇವೆ ಎಂದು ಹೇಳಿದರು.
ಕೇಂದ್ರ ಸರಕಾರದ ಹಲವಷ್ಟು ವಸತಿ ಕಾರ್ಯಕ್ರಮಗಳಿದ್ದು, ಅದನ್ನು ಜಾರಿಮಾಡಲು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ದಿಶಾ ಸಮಿತಿ ಸದಸ್ಯ ಡಾ. ಬಿ.ಸಿ. ನವೀನ್ ಕುಮಾರ್ ಆರೋಪಿಸಿದರು.
ಎಲ್ಲಾ ರೀತಿಯ ವಸತಿ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿಯ ಬಗ್ಗೆ ವಿಸ್ತೃತ ಪಟ್ಟಿ ತಯಾರಿಸಿ ನೀಡುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ಪ್ರಯತ್ನ
ಮಡಿಕೇರಿಯ ಕಸವಿಲೇವಾರಿ ಘಟಕ ನಿರ್ಮಾಣ ಸಂಬAಧ ಅಗತ್ಯ ಪ್ರಯತ್ನಗಳು ನಡೆಯುತ್ತಿದ್ದು, ಅರಣ್ಯ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಮೊಣ್ಣಂಗೇರಿಯ ಜಾಗವನ್ನು ಪಡೆಯುವ ಕೆಲಸಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸಭೆಗೆ ಮಾಹಿತಿ ಒದಗಿಸಿದರು.
ಮೊಣ್ಣಂಗೇರಿಯಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ, ಅರಣ್ಯ ಇಲಾಖೆ ಅಡ್ಡಿಯಿಂದ ಕಾಟಕೇರಿಯಲ್ಲಿ ಜಾಗ ಹುಡುಕಲಾಗಿತ್ತು. ಅದು ಸೂಕ್ತವಲ್ಲ ಎಂಬ ಅಭಿಪ್ರಾಯ ಬಂದಿದೆ. ಮೊಣ್ಣಂಗೇರಿ ಜಾಗ ಸಿಗುವ ವಿಶ್ವಾಸವಿದೆ ಎಂದ ಅವರು, ಪೊನ್ನಂಪೇಟೆಯಲ್ಲಿಯೂ ಎಸ್‌ಟಿಪಿಗೆ ಜಾಗ ಸಮಸ್ಯೆಯಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ದಿಶಾ ಸಮಿತಿ ಸದಸ್ಯ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ತಂತ್ರಜ್ಞಾನವನ್ನು ಬಳಸಿಕೊಂಡು ಕಸವಿಲೇವಾರಿಗೆ ಹೊಸ ಚಿಂತನೆ ಅಳವಡಿಸಿಕೊಳ್ಳುವತ್ತ ಕಾರ್ಯೋನ್ಮುಖಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ಆನೆಗಳ ಸ್ಥಳಾಂತರದ ಚರ್ಚೆ
ಕೇಂದ್ರ ಮಟ್ಟದಲ್ಲಿ ನಾಡಿನಲ್ಲಿರುವ ಕಾಡಾನೆಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಚರ್ಚೆಗಳಿದ್ದು, ‘ಪ್ರಾಜೆಕ್ಟ್ ಎಲಿಫ್ಯಾಂಟ್’ ಯೋಜನೆಯಡಿ ಸೂಕ್ತ ಕ್ರಿಯಾಯೋಜನೆ ತಯಾರಿಸಬೇಕೆಂದು ಸಂಸದ ಯದುವೀರ್ ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕುಶಾಲನಗರ ಭಾಗದಲ್ಲಿ ೭ ಕಿ.ಮೀ. ರೈಲ್ವೆ ಬ್ಯಾರಿಕೇಡ್ ವಿಳಂಬದ ಬಗ್ಗೆ ಯದುವೀರ್ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಮಾತನಾಡಿ, ತಾಂತ್ರಿಕ ಕಾರಣದಿಂದ ಬ್ಯಾರಿಕೇಡ್ ನಿರ್ಮಾಣ ಸಂಬAಧ ಟೆಂಡರ್ ಆಗುತ್ತಿಲ್ಲ. ಮತ್ತೊಮ್ಮೆ ಆಹ್ವಾನ ನೀಡಿದ್ದು, ಒಂದು ತಿಂಗಳಿನಲ್ಲಿ ಟೆಂಡರ್ ಆಗಲಿದೆ ಎಂದು ಅಭಿಷೇಕ್ ಮಾಹಿತಿ ನೀಡಿದರು.
ಪ್ರಾಜೆಕ್ಟ್ ಎಲಿಫ್ಯಾಂಟ್ ಮಾರ್ಗಸೂಚಿ ಬಂದಿಲ್ಲ. ಈಗಾಗಲೇ ಇದಕ್ಕೆ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ಅಂದಾಜು ೩೦೦ ಕೋಟಿ ವೆಚ್ಚದ ಸಾಧ್ಯತೆ ಇದೆ ಎಂದು ಅಭಿಷೇಕ್ ಹೇಳಿದರು.
ಎನ್‌ಜಿಓಗಳನ್ನು ಪರಿಶೀಲಿಸಬೇಕು
ಅರಣ್ಯ ವಿಚಾರವನ್ನು ಮುಂದಿಟ್ಟುಕೊAಡು ವಿದೇಶಿ ಹಣಕ್ಕಾಗಿ ಹಾಗೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲ ಎನ್‌ಜಿಓಗಳು ಪ್ರಯತ್ನಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಯಬೇಕಾಗಿದೆ ಎಂದು ಸಂಸದ ಯದುವೀರ್ ಸೂಚಿಸಿದರು. ಜನರ ಸಮಸ್ಯೆಗಳನ್ನು ಮುಂದಿಟ್ಟುಕೊAಡು ಎನ್‌ಜಿಓಗಳು ಮಧ್ಯಪ್ರವೇಶಿಸಿ ಗೊಂದಲ ಸೃಷ್ಟಿಸುತ್ತಿವೆ. ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕೆಂದರು.
ಕಾಡಾನೆ ತಡೆಗೆ ನಿರ್ಮಿಸಿರುವ ಕಂದಕಗಳ ನಿರ್ವಹಣೆಯಾಗಬೇಕು ಎಂದು ಎಂಎಲ್‌ಸಿ ಸುಜಾ ಕುಶಾಲಪ್ಪ ಸೂಚಿಸಿದರಲ್ಲದೆ, ವನ್ಯಜೀವಿ ದಾಳಿಯಿಂದ ಕೃಷಿ ಫಸಲು ನಾಶಕ್ಕೆ ತ್ವರಿತ ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದರು.
೩ ತಿಂಗಳಿನಿAದ ನಷ್ಟ ಪರಿಹಾರ ಬಾಕಿಯಿದೆ. ಪಾವತಿಗೆ ಕ್ರಮವಹಿಸಲಾಗುವುದು ಎಂದು ಅಭಿಷೇಕ್ ಹೇಳಿದರು. ದಿಶಾ ಸಮಿತಿ ಸದಸ್ಯ ಚಂದ್ರು ಮಾತನಾಡಿ, ಸ್ವಾತಂತ್ರö್ಯ ಬಂದಾಗಲಿAದಲೂ ಆದಿವಾಸಿಗಳು ನಿರ್ಲಕ್ಯಕ್ಕೆ ತುತ್ತಾಗುತ್ತಿದ್ದಾರೆ. ಕನಿಷ್ಟ ವಿದ್ಯುತ್ ನೀಡಲಾಗದಿರುವುದು ವಿಪರ್ಯಾಸ ಎಂದರು.
ಹೊಸ ಆಲೋಚನೆಗಳನ್ನು ಅಧಿಕಾರಿಗಳು ಮಾಡಬೇಕು. ಕೇಂದ್ರದ ಅನೇಕ ಯೋಜನೆಗಳಿದ್ದು, ಅವುಗಳ ಸದ್ಭಳಕೆಯಾಗಬೇಂದು ಸಲಹೆಯಿತ್ತ ಡಾ. ನವೀನ್ ಕುಮಾರ್ ಯೋಜನೆಯ ಸಾಧಕ-ಬಾಧಕಗಳ ಚರ್ಚೆಯಾಗಬೇಕು. ಜನಪರ ಯೋಜನೆಗಳು ಜನರಿಗೆ ತಲುಪದ ಮೇಲೆ ಯೋಜನೆ ರೂಪಿಸಿರುವುದು ಯಾಕಾಗಿ ಎಂದು ಪ್ರಶ್ನಿಸಿದರು.
ಜಲಜೀವನ್ ಮಿಷನ್ ಮುಗಿಸಿ
ಜನಸಾಮಾನ್ಯರಿಗೆ ನೀರು ಪೂರೈಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿರುವ ಜಲಜೀವನ್ ಮಿಷನ್ ಅನ್ನು ತ್ವರಿತವಾಗಿ ಮುಗಿಸಬೇಕು. ಬರಪರಿಸ್ಥಿತಿ ಹಿನ್ನೆಲೆ ಶೀಘ್ರವಾಗಿ ನಲ್ಲಿ ನೀರು ಒದಗಿಸುವ ಕೆಲಸವಾಗಬೇಕೆಂದು ಯದುವೀರ್ ಸೂಚನೆ ನೀಡಿದರು.
ನಾಗೇಶ್ ಕುಂದಲ್ಪಾಡಿ ಮಾತನಾಡಿ, ಗಂಭೀರ ಸಮಸ್ಯೆಯಿದ್ದರೂ ಕ್ರಮಕೈಗೊಳ್ಳುತ್ತಿಲ್ಲ. ಕಾವೇರಿ ಹರಿಯುವ ನಾಡಲ್ಲಿ ಕುಡಿಯಲು ನೀರಿಲ್ಲ ಎಂಬAತಾಗಿದೆ. ಕೆಲಸವೆಲ್ಲ ಆದ ಮೇಲೆ ನೀರು ಹುಡುಕುವ ಪರಿಸ್ಥಿತಿ ಇದೆ ಎಂದರು.
ಅಧಿಕಾರಿ ಭಾಸ್ಕರ್ ಮಾತನಾಡಿ, ಸಮನ್ವಯತೆಯಿಂದ ಕೆಲಸ ಮಾಡಲಾಗುತ್ತಿದೆ. ಕೆಲಕಡೆಗಳಲ್ಲಿ ಸಮಸ್ಯೆಗಳಿವೆ. ಮಾರ್ಚ್ ಒಳಗೆ ಮುಗಿಸುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಎಲ್-ನಿನೊ ಪರಿಣಾಮದಿಂದ ಮಳೆಯಾಗದೆ ೬೦ ವರ್ಷದ ನಂತರ ಬರ ಪರಿಸ್ಥಿತಿ ನಿರ್ಮಾಣವಾಗಿ, ಭತ್ತ ಬೆಳೆ ಒಣಗುತ್ತಿದೆ. ಆದ್ದರಿಂದ ಸೂಕ್ತ ಪರಿಹಾರ ನೀಡಬೇಕು. ಆ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಆರ್.ಕೆ.ಚಂದ್ರು ಮಾತನಾಡಿ ನಂಜರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ವಾರದಲ್ಲಿ ಎರಡು ದಿನ ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿದ ದಿನದಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ಹಿಂದಿನAತೆ ಸಂಚಾರಿ ವಾಹನದಲ್ಲಿ ವೈದ್ಯರು ಮತ್ತು ಶ್ರುಶ್ರೂಷಕರು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.