ಶನಿವಾರಸಂತೆ, ಅ. ೫: ಶನಿವಾರಸಂತೆ ವಲಯದಲ್ಲಿ ಇರುವವ ರೆಲ್ಲರೂ ಸಣ್ಣ ಬೆಳೆಗಾರರಾಗಿದ್ದು ಅವರನ್ನೆಲ್ಲಾ ಆರ್ಥಿಕವಾಗಿ ಬಲಪಡಿಸುವಲ್ಲಿ ಕಾಫಿಯ ಪಾತ್ರವೂ ಮಹತ್ವದಾಗಿದೆ ಎಂದು ಸೋಮವಾರಪೇಟೆ ಕಾಫಿ ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ದಯಾನಂದ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ಅಂತರರಾಷ್ಟಿçÃಯ ಕಾಫಿ ದಿನ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತೀಯ ಕಾಫಿ ನೆರಳಿನಲ್ಲಿ ಬೆಳೆಯುವ ಬೆಳೆಯಾಗಿದ್ದು, ಕಾಫಿ ಮಂಡಳಿಯಿAದ ಮುಂದಿನ ದಿನಗಳಲ್ಲಿ ಇಂಡಿಕಾಫ್ಸ್ ಎಂಬ ಸುಸ್ಥಿರ ಕಾಫಿ ಕೃಷಿಯನ್ನು ಪರಿಚಯ ಮಾಡಿಕೊಡಲಾಗುವುದು ಎಂದರು. ರೋಟೇರಿಯನ್ ಎ.ಎಚ್. ಚಂದ್ರಕಾAತ್ ಪ್ರಾಸ್ತಾವಿಕ ನುಡಿಯಾಡಿ, ಕಾಫಿ ಬರಿ ಕುಡಿಯುವ ಪೇಯವಲ್ಲ. ಕಾಫಿ ಬೆಳೆ ಹಾಗೂ ಕಾಫಿ ಬೆಳೆಗಾರರಿಗೆ ಇರುವ ಹಲವಾರು ಸವಾಲುಗಳನ್ನು ಎದುರಿಸಿ, ಶುಚಿ-ರುಚಿಯಾದ ಸಹಜ ಕಾಫಿ ಬೆಳೆಯಬೇಕಾಗಿದೆ. ಅಲ್ಲದೇ ಬೆಳೆದ ಕಾಫಿಗೆ ಮಾರುಕಟ್ಟೆಯಾಗಬೇಕೆಂದರೆ ಸ್ಥಳೀಯವಾಗಿ ಕಾಫಿಯನ್ನು ಉಪಯೋಗಿಸಬೇಕು ಎಂದು ಕರೆ ನೀಡಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಸುಪ್ರೀತ್, ಸಂಸ್ಥಾಪಕ ಅಧ್ಯಕ್ಷ ಎಚ್.ವಿ. ದಿವಾಕರ್, ರೋಟೆರಿಯನ್‌ಗಳಾದ ಟಿ.ಆರ್. ಪುರುಷೋತ್ತಮ್, ಪ್ರಮೋದ್, ಪ್ರತಾಪ್, ಸುದೀಪ್, ಸಾಗರ್, ಸೋಮಶೇಖರ್, ಚಂದನ್, ಕೇಶವಮೂರ್ತಿ ಮತ್ತಿತರ ಕಾಫಿ ಬೆಳೆಗಾರರು ಹಾಜರಿದ್ದರು. ಚಂದ್ರಕಾAತ್ ನಿರೂಪಿಸಿ, ವಂದಿಸಿದರು.ರೋಟರಿ ಸಂಸ್ಥೆ ವತಿಯಿಂದ ಸಾರ್ವಜನಿಕರಿಗೆ ಕಾಫಿ ಹಾಗೂ ಬಿಸ್ಕತ್ ವಿತರಿಸಲಾಯಿತು.