ಬೆAಗಳೂರು, ಅ. ೪: ಕರಾವಳಿ ಹಾಗೂ ಮಲೆನಾಡಿನ ಜನರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗುವುದಕ್ಕಿಂತ, ನಿಮ್ಮಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡು ನಿಮ್ಮ ಊರುಗಳಲ್ಲೇ ಉದ್ಯಮಗಳನ್ನು ಆರಂಭಿಸಿ. ನಿಮಗೆ ಶಕ್ತಿ ತುಂಬುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ನೀತಿ ರೂಪಿಸಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು.
ಬೆಂಗಳೂರಿನ ಉಳ್ಳಾಲದಲ್ಲಿರುವ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಕೈಲ್ ಮುಹೂರ್ತ ಜಂಬರ ೨೦೨೬ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
ನೀವೆಲ್ಲರೂ ಕೊಡಗಿನಿಂದ ಬಂದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೀರಿ. ನೀವು ನಿಮ್ಮ ಮೂಲ ಮರೆತರೆ ಯಶಸ್ಸು ಸಿಗುವುದಿಲ್ಲ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಮುಖ್ಯ. ನಿಮ್ಮ ಸಂಸ್ಕೃತಿ, ಊರು, ಪರಂಪರೆ, ಸಮಾಜ ಎಲ್ಲವನ್ನು ಒಗ್ಗೂಡಿಸಿ ಇಲ್ಲಿ ಇಂತಹ ಭವ್ಯ ಕಟ್ಟಡ ನಿರ್ಮಿಸಿ, ನೀವೆಲ್ಲರೂ ಸೇರುತ್ತಿರುವುದು ಬಹಳ ಸಂತೋಷ ತಂದಿದೆ. ಇದಕ್ಕೆ ಶ್ರಮಿಸಿ, ಪ್ರೋತ್ಸಾಹ ನೀಡುತ್ತಿರುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೊಡಗು ಶೌರ್ಯ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರದಲ್ಲಿ ಇತಿಹಾಸ ಹೊಂದಿದೆ. ಪ್ರತಿ ಮನೆಯಲ್ಲಿ ವೀರರನ್ನು ತಯಾರು ಮಾಡಿರುವ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ. ನಮ್ಮೆಲ್ಲರ ತಾಯಿ ಕಾವೇರಿ ಇಲ್ಲೇ ಹುಟ್ಟಿ, ಪಾಂಡಿಚೇರಿವರೆಗೂ ಈ ತಾಯಿ ಮೇಲೆ ಅವಲಂಬಿತವಾಗಿದ್ದೇವೆ. ಈ ಬಾರಿ ಭೀಕರ ಬರಗಾಲವಾಗಿದೆ. ಮಲೆನಾಡಿನಲ್ಲೇ ಈ ವರ್ಷ ಮಳೆ ಇಲ್ಲವಾಗಿದೆ. ಕೆರೆ, ಕೆಆರ್ಎಸ್ ಅಣೆಕಟ್ಟು ತುಂಬುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದರು.
ನಾನು ಪ್ರತಿ ವರ್ಷ ಕಾವೇರಿ ಆರತಿ ನಡೆಸಲು ತೀರ್ಮಾನಿಸಿದ್ದು, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ದಸರಾ ಸಂದರ್ಭದಲ್ಲಿ ಈ ಬಾರಿಯೂ ಆಚರಿಸಲು ನಿರ್ದೇಶನ ನೀಡಲಾಗಿದೆ. ಕೊಡಗು ಜಿಲ್ಲೆ ಕರ್ನಾಟಕದ ಕಾಶ್ಮೀರ. ಇಡೀ ವಿಶ್ವ ಈ ಭಾಗಕ್ಕೆ ಆಕರ್ಷಿತವಾಗಿದೆ. ನಿಮ್ಮ ಪರಂಪರೆ ಉಳಿಸಿಕೊಳ್ಳಿ. ಇದು ಮನುಷ್ಯತ್ವದ ದೊಡ್ಡ ಗುಣ. ನನ್ನದೇ ಆದ ಅನುಭವದಲ್ಲಿ ಹಳ್ಳಿಯಿಂದ ನಗರಕ್ಕೆ ವಲಸೆ ಬರುವವರು ಶಿಕ್ಷಣ, ವಿದ್ಯಾಭ್ಯಾಸ ಹಾಗೂ ಬದುಕಿಗೆ. ಹಳ್ಳಿಗಳಲ್ಲೇ ಶಿಕ್ಷಣ ಹಾಗೂ ಉದ್ಯೋಗ ಸಿಕ್ಕಿದ್ದರೆ ನೀವು ಇಲ್ಲಿಗೆ ಬರುತ್ತಿರಲಿಲ್ಲ. ನೀವು ಸಂಘಟಿತರಾಗಿ ಹಳ್ಳಿ ಜನರಿಗೆ ಒಳ್ಳೆಯದಾಗಬೇಕು ಎಂದು ಪ್ರಯತ್ನಿಸುತ್ತಿದ್ದು, ನನಗೆ ಅನೇಕ ಬೇಡಿಕೆ ಇಟ್ಟಿದ್ದೀರಿ ಎಂದರು.
ಇತ್ತೀಚೆಗೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಅಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ ರೂಪಿಸಲಾಗಿದೆ. ಈ ಭಾಗದ ಜನರ ಪ್ರತಿಭೆ ಗುರುತಿಸುವಂತಾಗಬೇಕು. ಈ ಜಿಲ್ಲೆಯ ಜನ ಕ್ರೀಡೆ, ರಕ್ಷಣಾ ಕ್ಷೇತ್ರದಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ಕರಾವಳಿ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು,. ಬ್ಯಾಂಕುಗಳು ನಿರ್ಮಾಣವಾಗಿದೆ. ಈಗ ಅವುಗಳು ನಶಿಸಿವೆ. ಇವುಗಳನ್ನು ಕಾಪಾಡುವುದು ನಮ್ಮ ಕರ್ತವ್ಯ. ೩೨೭ ಕಿ.ಮೀ ಉದ್ದದ ಕರಾವಳಿ ಭಾಗವನ್ನು ಗೋವಾ ಹಾಗೂ ಕೇರಳದಂತೆ ಪ್ರವಾಸೋದ್ಯಮಕ್ಕೆ ಬಳಸಿದಂತೆ ಬಳಸಲು ತೀರ್ಮಾನಿಸಲಾಗಿದೆ ಎಂದರು.
ಕಾಫಿ, ಮಸಾಲೆ ಪ್ರದಾರ್ಥ, ಸಂಸ್ಕೃತಿ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಇದನ್ನು ಉಳಿಸಲು ಈ ಪ್ರವಾಸೋದ್ಯಮ ನೀತಿಯಲ್ಲಿ ಈ ಭಾಗದಲ್ಲಿ ಮೂಲಸೌಕರ್ಯ ನೀತಿ ಮಾಡಿದ್ದು, ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಸಂಬAಧಿಸಿದAತೆ ಉದ್ಯಮ ಆರಂಭಿಸಿದರೆ, ಬ್ಯಾಂಕ್ಗಳಲ್ಲಿ ನೀಡುವ ೫-೬ ವರ್ಷಗಳ ಸಾಲವನ್ನು, ೨೦ ವರ್ಷಗಳ ವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಉದ್ಯಮ ಆರಂಭಿಸುವವರಿಗೆ ಆರ್ಥಿಕ ಶಕ್ತಿ ನೀಡಬೇಕು ಎಂದು ವಿವರಿಸಿದರು.
ಪೊನ್ನಣ್ಣ-ಮಂತÀರ್ ಕೊಡಗಿನ ಎರಡು ಕಣ್ಣುಗಳಿದ್ದಂತೆ
ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಇದಕ್ಕೆ ನಾವು ನೀವು ಒಟ್ಟಾಗಿ ಕೆಲಸ ಮಾಡೋಣ. ಮೈಸೂರಿನವರು ಜಾಗದ ಬಗ್ಗೆ ಮನವಿ ನೀಡಿದ್ದು, ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಮಂಡಿಸುವAತೆ ಪೊನ್ನಣ್ಣ ಹಾಗೂ ಮಂತರ್ ಗೌಡ ಅವರಿಗೆ ತಿಳಿಸಿರುವೆ. ನನ್ನ ಕೈಯಲ್ಲಿ ಸಾಧ್ಯವಾದ ನೆರವು ನೀಡುತ್ತೇನೆ. ಉಳಿದ ಬೇಡಿಕೆಗಳನ್ನು ಪರಿಶೀಲಿಸಿ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಂತರ್ ಹಾಗೂ ಪೊನ್ನಣ್ಣ ಅವರು ಕೊಡಗು ಜಿಲ್ಲೆಯ ಎರಡು ಕಣ್ಣುಗಳಿದ್ದಂತೆ. ಅವರಿಗೂ ಶಕ್ತಿ ನೀಡಿ. ಇವರು ಕ್ರಿಯಾಶೀಲ ಶಾಸಕರು. ಯುವಕರು, ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಇವರು ಬೆಳವಣಿಗೆ ಕಾಣುತ್ತಿದ್ದಾರೆ ಎಂದು ಕೆಲವರು ಅಸೂಯೆ ಪಡುತ್ತಾರೆ. ಅಸೂಯೆಗೆ ಮದ್ದಿಲ್ಲ. ಶಕ್ತಿಶಾಲಿಯಾಗಿರುವವರು ಚೆನ್ನಾಗಿ ಕೆಲಸ ಮಾಡುವವರಿಗೆ ಟೀಕೆಗಳು, ಶತ್ರುಗಳು ಇರುತ್ತಾರೆ ಎಂದು ತಿಳಿಸಿದರು.
ಮತದಾನದ ಹಕ್ಕು ಉಳಿಸಿಕೊಳ್ಳಿ
ನಾವು ಹೆಚ್ಚು ಬಲಿಷ್ಠವಾಗಿದ್ದರೆ, ಹೆಚ್ಚು ಶತ್ರುಗಳು, ಕಡಿಮೆ ಬಲಿಷ್ಠರಾಗಿದ್ದರೆ, ಕಡಿಮೆ ಶತ್ರುಗಳು, ಬಲಿಷ್ಟರಲ್ಲದೇ ಇದ್ದರೆ ಶತ್ರುಗಳೇ ಇರುವುದಿಲ್ಲ. ಯಾರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾರೆ ಅವರ ಬಗ್ಗೆ ಅಸೂಯೆ ಇರುತ್ತದೆ. ಹೀಗಾಗಿ ನೀವು ಈ ಇಬ್ಬರು ಶಾಸಕರನ್ನು ಉಳಿಸಿಕೊಳ್ಳಬೇಕು. ಅವರನ್ನು ಉಳಿಸಿಕೊಂಡರೆ ನನ್ನನ್ನು ಉಳಿಸಿಕೊಂಡAತೆ. ನನಗೆ ಶಕ್ತಿ ನೀಡಿದಂತೆ. ನೀವು ನಿಮ್ಮ ಮತಗಳನ್ನು ಕಾಪಾಡಿಕೊಳ್ಳಿ. ನೀವೇ ನೋಡುತ್ತಿದ್ದೀರಿ. ನಿಮ್ಮ ಮತದಾನದ ಹಕ್ಕು ರಕ್ಷಿಸಲು ನಾವು ಹಗಲು ರಾತ್ರಿ ಹೋರಾಟ ಮಾಡುತ್ತಿದ್ದೇವೆ. ಈಗ ಚುನಾವಣಾ ಆಯೋಗದವರು ಅನಾವಶ್ಯಕವಾಗಿ ಯಾರ ಹೆಸರನ್ನು ಮತಪಟ್ಟಿಯಿಂದ ತೆಗೆಯಬಾರದು ಎಂದು ನಿರ್ದೇಶನ ನೀಡಿದೆ. ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮಾತನಾಡಿ, ಕೊಡಗಿನ ಅರೆಭಾಷೆ ಗೌಡ ಸಮಾಜವು ತನ್ನದೇ ಆದ ವಿಭಿನ್ನ ಹಾಗೂ ವಿಶಿಷ್ಟ ಸಂಸ್ಕೃತಿ, ಪರಂಪರೆ ಮತ್ತು ಜೀವನಶೈಲಿಯನ್ನು ಹೊಂದಿದೆ. ನಾಡಿನ ಕಲೆ, ಸಂಸ್ಕೃತಿ ಹಾಗೂ ಜನಾಂಗದ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಮಾಜವು ಕೈಗೊಳ್ಳುತ್ತಿರುವ ಪ್ರಯತ್ನಗಳು ಸ್ವಾಗತಾರ್ಹವಾಗಿವೆ. ಕೊಡಗು ಗೌಡ ಸಮಾಜದ ಮುಖಂಡರು ಹಲವು ಪ್ರಮುಖ ವಿಚಾರಗಳನ್ನು ತಮ್ಮ ಗಮನಕ್ಕೆ ತಂದಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡುವುದಾಗಿ ಅವರು ತಿಳಿಸಿದರು.
ಅರೆಭಾಷೆ ಗೌಡ ಸಮುದಾಯವು ರಾಜ್ಯ ಹಾಗೂ ನಾಡಿನ ಅಭಿವೃದ್ಧಿಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ. ಕೊಡಗು ಗೌಡ ಸಮಾಜವು ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವುದರಿAದ ಅದರ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಬಾರಿ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಕೊಡಗಿನ ಗೌಡ ಸಮುದಾಯದವರನ್ನು ಆಯ್ಕೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಪೊನ್ನಣ್ಣ ತಿಳಿಸಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿಗೆ ಕೊಡಗಿನವರನ್ನು ಈ ಬಾರಿ ಅಧ್ಯಕ್ಷರನ್ನಾಗಿ ನೇಮಿಸಬೇಕು. ಕುಶಾಲನಗರ ಅರೆಭಾಷೆ ಗೌಡ ಸಮಾಜಕ್ಕೆ ರೂ. ೧ ಕೋಟಿ ಅನುದಾನ ಒದಗಿಸಲಾಗಿದ್ದು, ಹೆಚ್ಚುವರಿಯಾಗಿ ರೂ. ೧ ಕೋಟಿ ಅನುದಾನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಬೆಂಗಳೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಅಯ್ಯೇಟಿ ಮನೋಜ್ ಕುಮಾರ್, ಉಪಾಧ್ಯಕ್ಷ ಚೆಟ್ಟಿಮಾಡ ರತ್ನ ಉತ್ತಪ್ಪ, ಕುದುಪಜೆ ಮೋಹನ್, ಕಾರ್ಯದರ್ಶಿ ಬೇಕಲ್ ಬಿಪಿನ್, ಕಾನೂನು ಸಲಹೆಗಾರರಾದ ಪ್ರಕಾಶ್, ಮಮತಾ, ಪ್ರಮುಖರಾದ ಸೂರ್ತಲೆ ಸೋಮಣ್ಣ, ಅಂಬೇಕಲ್ ನವೀನ್ ಕುಶಾಲಪ್ಪ, ತೇನನ ರಾಜೇಶ್, ಪೊನ್ನಚ್ಚನ ಮೋಹನ್ ಸೇರಿದಂತೆ ಇನ್ನಿತರರು ಹಾಜರಿದ್ದರು.