ಸುಂಟಿಕೊಪ್ಪ, ಅ. ೪: ಮಕ್ಕಳು ಕೇವಲ ವಿದ್ಯೆಯನ್ನು ಕಲಿತರೆ ಸಾಲದು ಗುರು ಹಿರಿಯರಿಗೆ ಗೌರವಿಸುವ ಮೂಲಕ ಉತ್ತಮ ನಡವಳಿಕೆಯನ್ನು ರೂಪಿಸಿಕೊಳ್ಳಬೇಕೆಂದು ಜಿಲ್ಲಾ ಶಿಕ್ಷಣ ಇಲಾಖೆಯ ನಿವೃತ ವಿಷಯ ಪರಿವೀಕ್ಷಕರಾದ ಎ.ಎಂ.ರವಿ ಚಂಗಪ್ಪ ಅವರು ಹೇಳಿದರು. ಗುರುವಾರದಂದು ೭ನೇ ಹೊಸಕೋಟೆ ದೀಪ್ತಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಾಲಾ ವಿದ್ಯಾರ್ಥಿಗಳ ಅಜ್ಜ ಅಜ್ಜಿಯರ ದಿನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೂಪಿಸಿಕೊಂಡು ಉತ್ತಮ ವ್ಯಕ್ತಿತ್ವದವರಾಗಿ ಉತ್ತಮ ನಾಗರೀಕರಾಗಿ ಬಾಳಬೇಕೆಂದು ಕರೆ ನೀಡಿದರು. ಅಕ್ಟೋಬರ್ ೧ ಅನ್ನು ವಿಶ್ವ ಹಿರಿಯ ನಾಗರೀಕರ ದಿನವೆಂದು ಆಚರಿಸುತ್ತಿದ್ದು ಅದಕ್ಕೆ ಪೂರಕವಾಗಿ ಈ ಸಂಸ್ಯೆಯಲ್ಲಿ ಹಿರಿಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಅವರು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ೭ನೇ ಹೊಸಕೋಟೆ ಸಂತ ಸಬಾಸ್ಟೀನ್ ದೇವಾಲಯದ ಧರ್ಮಗುರುಗಳಾದ ಅಬ್ರಾಹಂ ಪಟೇಲ್ ಮಾತನಾಡಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯ ಅಂಗವಾಗಿ ಈ ಸಂಸ್ಥೆ ಯಲ್ಲಿ ಇಂದು ಅಜ್ಜ ಅಜ್ಜಿಯರ ದಿನವನ್ನು ಏರ್ಪಡಿಸಲಾಗಿದೆ ಮಕ್ಕಳು ಪೋಷಕರೊಂದಿಗೆ ಅಜ್ಜ ಅಜ್ಜಿಯರನ್ನು ಶಾಲೆಗೆ ಬರುವಂತೆ ಒಂದು ವಿಶೇಷ ಕಾರ್ಯಕ್ರಮವಾಗಿದೆ ನಮ್ಮ ಬಾಲ್ಯದಲ್ಲಿ ನಮಗೆ ನಮ್ಮ ತಂದೆ ತಾಯಿಯರಿಗಿಂತ ಅಜ್ಜ ಅಜ್ಜಿ ಪರಿಪೂರ್ಣವಾಗಿದ್ದರು. ಅದರೆ ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಮೊಬೈಲ್ ಸರ್ವಸ್ವವಾಗಿದ್ದು ಯಾರಿಗೂ ಯಾರು ಬೇಡ ಎಂಬAತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪೊಲೀಸ್ ಸಹಾಯಕ ಇನ್ಸ್ಪೆಕ್ಟರ್ ಪಾರ್ಥ ಮಾತನಾಡಿ, ಇಂದಿನ ಯುವಪೀಳಿಗೆಯು ಆಧುನಿಕ ಬರಾಟೆಯಲ್ಲಿ ನಾವು ಮಾನವೀಯತೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ ಮಕ್ಕಳು ಮೊಬೈಲ್ ಸೇರಿದಂತೆ ಮಾದಕ ವಸ್ತುಗಳ ದಾಸರಾಗದೆ ಉತ್ತಮ ಶಿಕ್ಷಣವನ್ನು ದೇಶಕ್ಕೆ ಸತ್ಪಪ್ರಜೆಗಳಾಗಿ ಪೋಷಕರಿಗೆ ಕೀರ್ತಿಯನ್ನು ತರುವಂತಾಗಬೇಕು. ಹಿರಿಯರಿಗೆ ಗೌರವಿಸುವ ಗುಣ ಮೌಲ್ಯಗಳನ್ನು ಈಗಿನಿಂದಲೇ ರೂಢಿಸಿಕೊಳ್ಳುವಂತೆ ಕರೆ ನೀಡಿದರು. ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಗೀತಾ ಪಾರ್ಥ, ಸೆಕ್ರೆಡ್ ಹಾರ್ಟ್ ಕಾನ್ವೆಂಟ್‌ನ ಮದರ್ ಸುಪಿರಿಯರ್ ಎ.ಜೆ. ಉಷಾ ಮಾತನಾಡಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ೧೦೦ಕ್ಕೂ ಅಧಿಕ ಆಗಮಿಸಿದ ಅಜ್ಜ-ಅಜ್ಜಿಯಂದಿರನ್ನು ಈ ಸಂದರ್ಭ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಜನಮನಸೂರೆಗೊಳಿಸಿತು.

ಶಾಲಾ ಮಕ್ಕಳು ಮೊದಲಿಗೆ ಪ್ರಾರ್ಥಿಸಿ, ಸಿಸ್ಟರ್ ಜಿನ್ಸಿ ನಿರೂಪಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಟೆಸಿಮ್ಯಾನುವೇಲ್ ಸ್ವಾಗತಿಸಿ, ಸತ್ಯದಾಸ್ ವಂದಿಸಿದರು. ಈ ಸಂದರ್ಭ ಶಾಲಾ ಸಹ ಶಿಕ್ಷಕರುಗಳು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.