ಸುಂಟಿಕೊಪ್ಪ: ಮಹಾತ್ಮ ಗಾಂಧಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹರದೂರಿನಲ್ಲಿ ಗಾಂಧಿ ಜಯಂತಿ ಆಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಟ್ರಸ್ಟ್ನ ಕಾರ್ಯದರ್ಶಿ ಡೆನಿಸ್ ಡಿ'ಸೋಜ, ಇಂದಿನ ಸಮಾಜಕ್ಕೆ ಮಹಾತ್ಮಾ ಗಾಂಧೀಜಿಯವರ ಆದರ್ಶ ತತ್ವಗಳು ತುಂಬಾ ಅಗತ್ಯವಿದೆ. ಇಂದಿನ ಯುವ ಪೀಳಿಗೆಯ ಬದುಕಿನ ಹಾದಿಯನ್ನು ಗಮನಿಸಿದರೆ ಗಾಂಧೀಜಿಯವರ ತತ್ವವನ್ನು ಮೈಗೂಡಿಸಿಕೊಂಡರೆ ಮಾತ್ರ ಮುಂದಿನ ಉಜ್ವಲ ಭಾರತವನ್ನ ಕಾಣಲು ಸಾಧ್ಯ ಎಂಬAತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಕಾರ್ಯಕ್ರಮದ ಸ್ವಾಗತವನ್ನು ಟ್ರಸ್ಟ್ನ ಸಂಚಾಲಕರಾದ ಎಂ.ಇ ಮೊಹಿದ್ದೀನ್ ಮಾಡಿದರು. ಟ್ರಸ್ಟಿ ಕರ್ನಲ್ ಬಿ.ಜಿ.ವಿ ಕುಮಾರ್ ಅವರು ವಂದನಾರ್ಪಣೆ ಮಾಡಿದರು.