ವೀರಾಜಪೇಟೆ : ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತಿçಯವರನ್ನು ಕೇವಲ ಜಯಂತಿಯ ದಿನದಂದು ನೆನೆದರೆ ಸಾಲದು. ಅವರ ತತ್ವ ವಿಚಾರಗಳನ್ನು ಅರ್ಥೆÊಸಿ ಅಳವಡಿಸಿಕೊಳ್ಳುವ ಕಾರ್ಯವಾದಾಗ ಅವರ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ. ಪದ್ಮ ಸಲಹೆ ನೀಡಿದರು.
ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತಿçಗಳ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಗಾಂಧೀಜಿಯ ಹಾಗೂ ಶಾಸ್ತಿçಯವರ ವಿಚಾರ ಧಾರೆ ಹಾಗೂ ಮಹತ್ವವನ್ನು ಈ ದಿನ ಅರಿತು ಕೊಳ್ಳುತ್ತೇವೆ. ಅವರ ಒಂದೊAದು ತತ್ವಗಳನ್ನು ನಾವು ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬಹುದು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಕೆ.ಜಿ. ವೀಣಾ, ಗಾಂಧೀಜಿಯವರ ಅಹಿಂಸೆ, ಗ್ರಾಮ ಸ್ವರಾಜ್ಯ, ಸಮಾನತೆ, ಗುಡಿ ಕೈಗಾರಿಕೆಯ ಅಭಿವೃದ್ಧಿ ಪ್ರಸ್ತುತ ಸಮಾಜಕ್ಕೆ ಬಹಳ ಮುಖ್ಯವಾದದ್ದು ಎಂದರು. ಅದೇ ರೀತಿ ಲಾಲ್ ಬಹಾದ್ದೂರ್ ಶಾಸ್ತಿçಗಳ ಸರಳ ಜೀವನ ಅಪ್ರತಿಮ ದೇಶಭಕ್ತಿಯನ್ನು ಪ್ರತಿಯೊಬ್ಬರು ಅರಿಯಬೇಕೆಂದರು.
ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಎನ್.ಸಿ.ಸಿ ಘಟಕದ ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ಕಾಲೇಜಿನ ಆವರಣ ಹಾಗೂ ಮುಂಭಾಗ ಹೆದ್ದಾರಿಯ ಕಸವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೊಜಕ ಎಲ್.ಆರ್ ರಾಘವೇಂದ್ರ, ಎನ್.ಎಸ್.ಎಸ್ ಯೋಜನಾಧಿಕಾರಿ ಬಿ.ಬಿ. ಸುನಿಲ್ ಕುಮಾರ್, ಎನ್.ಸಿ.ಸಿ ಅಧಿಕಾರಿ ಲೆ.ಬಿ.ಬಿ ಬೋಜಮ್ಮ, ಉಪನ್ಯಾಸಕರಾದ ಅಕ್ಷಿತಾ ನಾಯ್ಕ್, ಮಾಣಿಕ್ಯ, ಪವಿತ್ರ, ಬಾಬು, ದಮಯಂತಿ, ಅನುಪಮ ಆಡಳಿತಾತ್ಮಕ ಸಿಬ್ಬಂದಿಗಳಾದ ಸೋಮನಾಥ್, ಹರೀಶ್, ಸಿಂಧು, ದಿನೇಶ್, ಶಶಿಕಲಾ, ಜಯಮ್ಮ ಇದ್ದರು.