ಕೋವರ್‌ಕೊಲ್ಲಿ ಇಂದ್ರೇಶ್
ಬೆAಗಳೂರು, ಅ. ೩: ವಿಮೆ ಹೊಂದಿರುವ ವಾಹನದಿಂದಲೇ ಅಪಘಾತ ನಡೆದಿದೆ ಎಂದು ತನಿಖೆಯಲ್ಲಿ ಸಾಬೀತಾದಾಗ, ದ್ವಿಚಕ್ರ ವಾಹನದಲ್ಲಿ ನಿಯಮ ಮೀರಿ ಮೂವರು ಮಂದಿ ಪ್ರಯಾಣಿಸುತ್ತಿದ್ದರು ಎಂಬ ಕಾರಣ ನೀಡಿ, ಪರಿಹಾರ ನೀಡುವ ಹೊಣೆಗಾರಿಕೆಯಿಂದ ವಿಮಾ ಕಂಪನಿ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಹರಪನಹಳ್ಳಿ-ಹರಿಹರ ರಸ್ತೆಯಲ್ಲಿ ಜೀಪ್ ಹಾಗೂ ಬೈಕ್ ನಡುವೆ ನಡೆದಿದ್ದ ಭೀಕರ ಅಪಘಾತ ಪ್ರಕರಣಕ್ಕೆ ಸಂಬAಧಿಸಿದAತೆ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ.ವಿ. ಹೊಸಮನಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.
ಅಪಘಾತ ನಡೆದ ವಾಹನದಲ್ಲಿ ಚಾಲಕ ಸೇರಿ ಇಬ್ಬರು ಹಿಂಬದಿ ಸವಾರರಿದ್ದು, ಪರಿಹಾರ ನೀಡಲಾಗದು ಎಂಬುದಾಗಿ ವಿಮಾ ಕಂಪನಿಯ ವಾದ ತಿರಸ್ಕರಿಸಿದ ಹೈಕೋರ್ಟ್, ಸುಪ್ರೀಂಕೋರ್ಟ್ ಈ ಹಿಂದೆ ನೀಡಿರುವ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ, ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎಂಬುದು ಕಾನೂನು ಉಲ್ಲಂಘನೆಯಾಗಬಹುದು. ಆದರೆ, ಆ ಮೂವರ ಸವಾರಿಯೇ ಅಪಘಾತಕ್ಕೆ ನೇರ ಕಾರಣ ಎಂಬುದಕ್ಕೆ ಯಾವುದೇ ಸಾಕ್ಷಾö್ಯಧಾರಗಳಿಲ್ಲದಿದ್ದಲ್ಲಿ, ಅದನ್ನು ‘ಸವಾರನ ನಿರ್ಲಕ್ಷö್ಯ’ ಎಂದು ಪರಿಗಣಿಸಿ ವಿಮಾ ಪರಿಹಾರ ನಿರಾಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಈ ಸಂಬAಧ ನಡೆದಿರುವ ತನಿಖೆಯಲ್ಲಿ ಘಟನೆಗೆ ಕಾರಣವಾದ ಜೀಪ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷö್ಯವೇ ಕಾರಣ ಎಂದು ಸ್ಪಷ್ಟಪಡಿಸಿರುವುದರಿಂದ, ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿಹಿಡಿದಿದ್ದು, ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ೨೦೧೦ರ ನವೆಂಬರ್ ೧೮ರಂದು ಮನ್ನಾ ಖಾನ್ ಸಾದಿಕ್ ಎಂಬವರು ತಮ್ಮ ಬೈಕ್‌ನಲ್ಲಿ ಮತ್ತಿಬ್ಬರು ಹಿಂಬದಿ ಸವಾರರೊಂದಿಗೆ ಚಲಿಸುತ್ತಿದ್ದರು. ಈ ಸಂದರ್ಭದಲ್ಲಿ ಎದುರಿನಿಂದ ವೇಗವಾಗಿ ಬಂದ ಜೀಪ್ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮನ್ನಾ ಖಾನ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಹಿಂಬದಿಯಲ್ಲಿದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಪರಿಹಾರ ಕೋರಿ ಮನ್ನಾ ಖಾನ್ ಅವಲಂಬಿತರು ಪ್ರಕರಣ ದಾಖಲಿಸಿದ್ದರು. ಈ ನಡುವೆ ಗಾಯಗೊಂಡವರ ಕುಟುಂಬಸ್ಥರು ಪರಿಹಾರ ಕೋರಿ ವಿಚಾರಣಾ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಹರಪನಹಳ್ಳಿ ನ್ಯಾಯಾಲಯವು ಸಂತ್ರಸ್ತರಿಗೆ ಒಟ್ಟು ೧೫.೭ ಲಕ್ಷ ರೂ.ಗೂ ಹೆಚ್ಚು ಪರಿಹಾರವನ್ನು ಬಡ್ಡಿ ಸಮೇತ ಪಾವತಿಸುವಂತೆ ವಿಮಾ ಕಂಪನಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಿಮಾ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆ ವೇಳೆ ವಿಮಾ ಕಂಪನಿ ಪರ ವಕೀಲರು, ಮೋಟಾರು ವಾಹನ ಕಾಯ್ದೆ ೧೨೮ರ ಪ್ರಕಾರ ಬೈಕ್‌ನಲ್ಲಿ ಒಬ್ಬರಿಗೆ ಮಾತ್ರ ಹಿಂಬದಿ ಸವಾರರಾಗಿ ಕೂರಲು ಅವಕಾಶವಿದೆ. ಆದರೆ ಬೈಕ್‌ನಲ್ಲಿ ಇಬ್ಬರನ್ನು ಕೂರಿಸಿಕೊಂಡು ಸವಾರ ನಿಯಮ ಉಲ್ಲಂಘಿಸಿದ್ದಾನೆ. ಹೆಚ್ಚುವರಿ ಸವಾರರಿದ್ದ ಕಾರಣ ವಾಹನದ ಸಮತೋಲನ ತಪ್ಪಿ ಅಪಘಾತ ಸಂಭವಿಸಿದೆ. ಹೀಗಾಗಿ, ಕಂಪನಿಯು ಪರಿಹಾರ ನೀಡಲು ಬದ್ಧವಾಗಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.