ಪೊನ್ನಂಪೇಟೆ, ಅ. ೩: ಪ್ರಸ್ತುತ ವರ್ಷ ಕೊಡವ ಕುಟುಂಬಗಳ ನಡುವೆ ನಡೆಯುವ ೨೫ನೇ ವರ್ಷದ ಕೊಟ್ಟಂಗಡ ಒಕ್ಕಡÀ ಕ್ರಿಕೆಟ್ ನಮ್ಮೆಯ ಲಾಂಛನ ಬಿಡುಗಡೆ ಸಮಾರಂಭ ಪೊನ್ನಂಪೇಟೆಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.U Àಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಕೊಟ್ಟಂಗಡ ಕ್ರಿಕೆಟ್ ನಮ್ಮೆಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಲು ಕುಟುಂಬದ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಸಹಕಾರ ಅತ್ಯಗತ್ಯ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೈಜೋಡಿಸಿದರೆ ಪಂದ್ಯಾವಳಿ ಯಶಸ್ವಿಯಾಗುತ್ತದೆ ಎಂದರು.

೨೫ ನೇ ವರ್ಷದ ಕೊಟ್ಟಂಗಡ ಕ್ರಿಕೆಟ್ ನಮ್ಮೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಮುಂಬರುವ ಅಜ್ಜಿಕುಟ್ಟೀರ ಹಾಕಿ ನಮ್ಮೆಗೂ ಎಲ್ಲರ ಸಹಕಾರ ಕೋರಿದರು.

ಕ್ರೀಡೆಯಿಂದ ಏಕತೆಗೆ ಬಲ : ಯದುವೀರ್

ಮುಖ್ಯ ಅತಿಥಿ ಸಂಸದ ಯದುವೀರ್ ಒಡೆಯರ್ ಮಾತನಾಡಿ, ಕೊಡಗಿಗೂ ಕ್ರೀಡೆಗೂ ಅವಿನಾಭಾವ ಸಂಬAಧವಿದೆ. ಕೊಡಗಿನ ಸುಪುತ್ರಿ ಪೂವಮ್ಮ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದಿರುವುದು ಸಂತೋಷದ ಸಂಗತಿ. ಹಾಗೆಯೇ ೪ಏಳನೇ ಪುಟಕ್ಕೆ

೪ಏಳನೇ ಪುಟಕ್ಕೆ ಮೈಸೂರಿನ ಪ್ರಣವಿ ಅರಸ್ ಗಾಲ್ಫ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಭಾರತದಲ್ಲಿ ಅಪಾರ ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ. ಕ್ರೀಡೆ ರಾಜಕೀಯಕ್ಕೆ ಸೀಮಿತವಲ್ಲ, ಅದು ಸಮಾಜ ಮತ್ತು ರಾಷ್ಟ್ರದ ಏಕತೆಗೆ ಬಲ ನೀಡುವ ಸಾಧನ ಎಂದು ಹೇಳಿದರು.

ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ದೇಶದ ಸೈನ್ಯಕ್ಕೆ ಹಾಗೂ ಕ್ರೀಡೆಗೆ ಕೊಡವ ಜನಾಂಗದ ಕೊಡುಗೆ ಅಪಾರ. ಏಷ್ಯನ್ ಕ್ರೀಡಾಕೂಟಕ್ಕೆ ಕರ್ನಾಟಕದಿಂದ ಆಯ್ಕೆಯಾದ ೧೫ ಕ್ರೀಡಾಪಟುಗಳಲ್ಲಿ ೬ ಮಂದಿ ಕೊಡಗಿನವರು ಎಂಬುದು ಹೆಮ್ಮೆಯ ಸಂಗತಿ. ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದ ಪೂವಮ್ಮ ಕೊಡಗಿನ ಕೀರ್ತಿ ಹೆಚ್ಚಿಸಿದ್ದಾರೆ. ಕ್ರೀಡಾ ಮೂಲ ಸೌಕರ್ಯ ಅಭಿವೃದ್ಧಿಗೆ ಕೊಡಗಿಗೆ ೩೪ ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.

ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಕೊಡವ ಪದ್ಧತಿ, ಸಂಸ್ಕೃತಿಯ ಅರಿವು ಮೂಡಿಸಬೇಕು. ಪೋಷಕರು ಮಕ್ಕಳ ಚಟುವಟಿಕೆ, ಶಾಲಾ ಹಾಜರಾತಿ ಗಮನಿಸಬೇಕು. ಹೆಣ್ಣು ಮಕ್ಕಳಂತೆ ಗಂಡು ಮಕ್ಕಳೂ ಕ್ರೀಡೆಯಲ್ಲಿ ತೊಡಗಿ ಸಾಧನೆ ಮಾಡಬೇಕು ಎಂದರು.

ಕೊಡವ ಕ್ರಿಕೆಟ್ ಅಕಾಡೆಮಿ ಖಜಾಂಚಿ ಕೊಕ್ಕೇಂಗಡ ರಂಜನ್ ಮಾತನಾಡಿ, ಕೀತಿಯಂಡ ಒಕ್ಕದಿಂದ ಪ್ರಾರಂಭವಾದ ಕ್ರಿಕೆಟ್ ನಮ್ಮೆ ಇಂದು ಕೊಟ್ಟಂಗಡ ಕುಟುಂಬದ ಮೂಲಕ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಅಕಾಡೆಮಿ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಟ್ಟಂಗಡ ಕುಟುಂಬದ ಅಧ್ಯಕ್ಷ ಕೆ.ಬಿ. ಮುದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕೊಟ್ಟಂಗಡ ಒಕ್ಕಕ್ಕೆ ೮೦೦ ವರ್ಷಗಳ ಇತಿಹಾಸವಿದ್ದು, ಪ್ರಸ್ತುತ ೬೦೦ ಕುಟುಂಬ ಸದಸ್ಯರನ್ನು ಹೊಂದಿದೆ ಎಂದರು.

ಇದೇ ಸಂದರ್ಭ ಲೋಗೋ ವಿನ್ಯಾಸಗೊಳಿಸಿದ ಸುಳ್ಳಿಮಾಡ ದರ್ಶನ್ ಪೂವಪ್ಪ, ಮಾಧ್ಯಮ ಪ್ರಚಾರ ಸಮಿತಿ ಸದಸ್ಯರಾದ ಕಡೆಮಾಡ ಸುವಿತ್ ಸೋಮಣ್ಣ, ಮತ್ರಂಡ ನಿಖಿಲ್ ಚಂಗಪ್ಪ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಟ್ಟಂಗಡ ಒಕ್ಕÀಡ ಉಪಾಧ್ಯಕ್ಷ ನಂದಾ ಕಾರ್ಯಪ್ಪ, ಕಾರ್ಯದರ್ಶಿ ಕೆ.ಸಿ. ಪ್ರಕಾಶ್, ಕ್ರೀಡಾ ಸಂಚಾಲಕ ಸೂರಜ್ ಕೆ.ಕೆ, ಡಿಕ್ಕಿ ನಾಣಯ್ಯ, ಅಯ್ಯಪ್ಪ ಕೆ.ಜೆ, ರೋಶನ್ ಕೆ.ಎಂ, ಮಧು ಕೆ.ಎಸ್, ಚೇತನ್ ಕೆ.ಎಸ್, ಅಯ್ಯಪ್ಪ ಕೆ.ಬಿ, ದರ್ಶನ್, ಪ್ಯಾರಿ, ಅಂಪೈರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ತಾಮನೆ ಮಹಿಳೆಯರು ಹಾಜರಿದ್ದರು. ಪ್ಯಾನ್ಸಿ ಹಾಗೂ ನಿಶಾ ಪ್ರಾರ್ಥಿಸಿದರು. ಕೊಟ್ಟಂಗಡ ರಾಜಾ ಸುಬ್ಬಯ್ಯ ಹಾಗೂ ಡಿಂಪಲ್ ಮುತ್ತಮ್ಮ ಕಾರ್ಯಕ್ರಮ ನಿರೂಪಿಸಿದರು. - ಚನ್ನನಾಯಕ