ಮುಳ್ಳೂರು: ಗಾಂಧಿ ಜಯಂತ್ರಿ ಪ್ರಯುಕ್ತ ಸಮೀಪದ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವತಿಯಿಂದ ಸಂಗಯ್ಯನಪುರ ಗ್ರಾಮದ ಅರೆಭಾಷೆ ಗೌಡ ಸಮಾಜದ ಭವನದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ನಂತರ ಗಾಂಧಿ ಜಯಂತಿ ಅಂಗವಾಗಿ ಸಮಾಜದ ಬಾಂಧವರು ಸೇರಿಕೊಂಡು ಸ್ವಚ್ಚತಾ ಶ್ರಮದಾನದ ಮೂಲಕ ಗೌಡ ಸಮಾಜ ಭವನದ ಸುತ್ತಲಿನ ಜಾಗದಲ್ಲಿ ಬೆಳೆದ ಕಾಡು ಗಿಡಗಂಟಿಗಳನ್ನು ಕಡಿದರು.
ತದನಂತರ ಕುಶಾಲನಗರ-ಶನಿವಾರಸಂತೆ ಹೆದ್ದಾರಿಯ ರಸ್ತೆ ಬದಿಯಲ್ಲಿ ಬೆಳೆದ ಕಾಡುಪೊದೆಗಳನ್ನು ಕಡಿದು ತೆರವುಗೊಳಿಸಿ ಚರಂಡಿಯನ್ನು ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.
ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಉಪಾಧ್ಯಕ್ಷ ಭಟ್ಯನ ಈರಪ್ಪ, ಕಾರ್ಯದರ್ಶಿ ಕುಯ್ಯಮುಡಿ ಜಯಕುಮಾರ್ ನೇತೃತ್ವದಲ್ಲಿ ಸಮಾಜದ ಪದಾಧಿಕಾರಿಗಳು, ಸದಸ್ಯರು ಸ್ವಚ್ಚತಾ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.