ಮಡಿಕೇರಿ, ಅ. ೨: ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವತಿಯಿಂದ ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಅಂತರರಾಷ್ಟಿçÃಯ ಕಾಫಿ ದಿನವನ್ನು ಆಚರಿಸಲಾಯಿತು.

ಸ್ವಸ್ಥ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅತಿಥಿಗಳಿಂದ ಮಕ್ಕಳಿಗೆ ವಿಶೇಷ ಔತಣದ ಆಯೋಜನೆಯೊಂದಿಗೆ ದಿನವನ್ನು ಆಚರಿಸಲಾಯಿತು.

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷರಾದ ಜುಥಿಕ ಬೋಪಣ್ಣ, ಸುಂಟಿಕೊಪ್ಪ ಪ್ರಾಂತ್ಯದ ಮುಖ್ಯಸ್ಥೆ ಸುಮಾ ತಿಮ್ಮಯ್ಯ, ಕಾನೂರು ಪ್ರಾಂತ್ಯದ ಮುಖ್ಯಸ್ಥೆ ರಮ್ಯಾ ನರೇನ್ ಮತ್ತು ಸಂಘದ ಸದಸ್ಯರು, ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ, ಶಿಕ್ಷಕರು ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.