Àಕರ ನಿಧಿಯಡಿ ರೂ.೫ ಲಕ್ಷ ಅನುದಾನ ಸೇರಿದಂತೆ ಒಟ್ಟು ರೂ.೨೬ ಲಕ್ಷ ವೆಚ್ಚದಲ್ಲಿ ನೂತನವಾಗಿ ನವೀಕರಣಗೊಂಡಿರುವ ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಕಟ್ಟಡವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಹಕಾರ ಕ್ಷೇತ್ರಗಳ ಬಲವರ್ಧನೆಯಿಂದ ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸದಸ್ಯರ ಶ್ರೇಯೋಭಿವೃದ್ಧಿಗೆ ಒದಗಿಸುತ್ತಿರುವ ಸೌಲಭ್ಯಗಳನ್ನು ಪಡೆಯಲು ರೈತರು ಮುಂದೆ ಬರಬೇಕು. ಸಹಕಾರ ಬ್ಯಾಂಕ್‌ನ ನೂತನ ಕಟ್ಟಡದಿಂದ ರೈತರಿಗೆ ಇನ್ನಷ್ಟು ಸೇವೆಗಳು ಲಭ್ಯವಾಗಲಿ ಎಂದು ಆಶಿಸಿದರು.

ಬ್ಯಾಂಕಿನ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿ, ಬ್ಯಾಂಕ್ ಕಟ್ಟಡವನ್ನು ನವೀಕರಿಸಲು ಸಂಘದಿAದ ರೂ. ೨೧ ಲಕ್ಷ ಅನುದಾನ ಬಳಸಿಕೊಂಡಿದ್ದು, ಶಾಸಕರು ರೂ.೫ ಲಕ್ಷ ಅನುದಾನ ನೀಡಿದ್ದಾರೆ. ನವೀಕೃತ ಕಟ್ಟಡದಿಂದ ಸದಸ್ಯರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸಲಾಗುವುದು ಎಂದರು.

ಈ ಸಂದರ್ಭ ಉಪಾಧ್ಯಕ್ಷ ಜನಾರ್ದನ್ ಪ್ರಭು, ನಿರ್ದೇಶಕರುಗಳಾದ ಟಿ.ಆರ್. ಪುರುಷೋತ್ತಮ್, ಎಂ.ಟಿ. ದಾಮೋಧರ್, ಡಿ. ಭಗವಾನ್, ಹೆಚ್.ಬಿ. ಶಿವಕುಮಾರ್, ಪಿ.ಸಿ. ಬೇಲಯ್ಯ, ಬಿ.ಎನ್. ಮಂಜುನಾಥ್, ಕೆ.ಬಿ. ಕವಿತಾ, ಎಸ್.ಪಿ. ಪೊನ್ನಪ್ಪ, ಬಿ.ಪಿ. ಸುಮಲತಾ, ಬಿ.ಬಿ. ಆದರ್ಶ್, ಕೆ.ಜಿ. ಕುಮಾರಸ್ವಾಮಿ, ನಾಮನಿರ್ದೇಶಿತ ಸದಸ್ಯ ಜಿ.ಆರ್. ತಮ್ಮಯ್ಯ, ಪ್ರಭಾರ ವ್ಯವಸ್ಥಾಪಕ ಶಿವಕುಮಾರ್ ಸೇರಿದಂತೆ ಸಿಬ್ಬಂದಿಗಳು, ಸದಸ್ಯರುಗಳು ಇದ್ದರು.