ಮಡಿಕೇರಿ, ಅ. ೨: ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಜೀರ್ಣಾಂಗ ಹಾಗೂ ಲಿವರ್ ಆರೋಗ್ಯದ ಕಡೆಗೆ ಗಮನಹರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಮೈಸೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯರುಗಳು ಸಾಮಾನ್ಯ ಜೀರ್ಣಾಂಗದ ಸಮಸ್ಯೆಗಳಾದ ಗ್ಯಾಸ್ಟಿçಟಿಸ್, ಅಸಿಡಿಟಿ, ಜಿ.ಎ.ಆರ್.ಡಿ. ಮತ್ತು ಅಲ್ಸರ್ನಿಂದ ಹಿಡಿದು ಫ್ಯಾಟಿ ಲಿವರ್, ಮದ್ಯಪಾನದಿಂದಾಗುವ ಲಿವರ್ ಸಮಸ್ಯೆ, ಪಿತ್ತಕೋಶದ ಕಲ್ಲುಗಳು ಹಾಗೂ ಆರಂಭಿಕ ಹಂತದ ಕ್ಯಾನ್ಸರ್ಗಳವರಗಿನ ಕಾಯಿಲೆಗಳನ್ನು ಸಾಮಾನ್ಯ ಅಜೀರ್ಣ ಎಂದು ನಿರ್ಲಕ್ಷಿಸಲಾಗುತ್ತದೆ. ನಿರಂತರ ಹೊಟ್ಟೆನೋವು, ನುಂಗಲು ಕಷ್ಟವಾಗುವುದು ಅಥವಾ ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆಯಂತಹ ಲಕ್ಷಣಗಳನ್ನು ಜನರು ಆರಂಭದಲ್ಲಿ ನಿರ್ಲಕ್ಷಿಸುವುದರಿಂದ ಕೊನೆಯ ಹಂತದಲ್ಲಿ ತಜ್ಞವೈದ್ಯರ ಬಳಿ ಬರುವುದು ಹೆಚ್ಚಾಗುತ್ತಿದೆ ಎಂದರು.
ಆರಂಭಿಕ ಹಂತದ ಪತ್ತೆ ಮತ್ತು ಶಸ್ತçಚಿಕಿತ್ಸೆಯಿಲ್ಲದ ಅಧುನಿಕ ಚಿಕಿತ್ಸೆಗಳ ಕುರಿತು ಮಾತನಾಡಿದ ಡಾ. ಸತೀಶ್ ರಾವ್ ಎ.ಕೆ., ಭಾರತದಲ್ಲಿ ಸಮೀಕ್ಷೆ ನಡೆಸಲಾದ ಘಟಕಗಳ ಪೈಕಿ ಕೇವಲ ಶೇ ೨೫.೫ ರಷ್ಟು ಘಟಕಗಳಲ್ಲಿ ಥರ್ಡ್ ಸ್ಪೇಸ್ ಎಂಡೋಸ್ಕೋಪಿ ಸೌಲಭ್ಯ ಲಭ್ಯವಿದೆ. ಎಂಡೋಸ್ಕೋಪಿಕ್ ಸಬ್ಮ್ಯೂಕೋಸನಲ್ ಡಿಸೆಕ್ಷನ್ (ಇಎಸ್ಡಿ) ನಂತಹ ಸುಧಾರಿತ ತಂತ್ರಜ್ಞಾನಗಳು ತೆರೆದ ಶಸ್ತçಚಿಕಿತ್ಸೆಯಿಲ್ಲದೆ ಆರಂಭಿಕ ಹಂತದ ಜಠರಕರುಳಿನ ಕ್ಯಾನ್ಸರ್ಗಳನ್ನು ತೆಗೆದು ಹಾಕಲು ನಮಗೆ ಸಹಾಯ ಮಾಡುತ್ತದೆ. ಕೊಡಗಿನಲ್ಲಿ ಗ್ಯಾಸ್ಟಿçಟಿಸ್, ಜಿಇಆರ್ಡಿ ಮತ್ತು ಫ್ಯಾಟಿ ಲಿವರ್ ಸಮಸ್ಯೆಗಳನ್ನು ನಾವು ಸಾಮಾನ್ಯವಾಗಿ ಗಮನಿಸುತ್ತಿದ್ದರೂ ನುಂಗಲು ತೊಂದರೆ, ಕಪ್ಪುಬಣ್ಣದ ಮಲವಿಸರ್ಜನೆ ಅಥವಾ ಕಾರಣವಿಲ್ಲದೆ ತೂಕ ಕಡಿಮೆಯಾಗುವಂತಹ ಮುನ್ನೆಚ್ಚರಿಕೆ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ಹೇಳಿದರು.
ಹೆಚ್ಚುತ್ತಿರುವ ಜಠರಕರುಳಿನ ಕ್ಯಾನ್ಸರ್ನ ಪ್ರಕರಣಗಳು ಹಾಗೂ ತೀವ್ರತೆಯ ಬಗ್ಗೆ ಮಾತನಾಡಿದ ಡಾ. ವಾಸುದೇವ್ ಪೈ ಹೊಸದುರ್ಗ, ಭಾರತದಲ್ಲಿ ಜಠರಕರುಳಿನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಸಮೀಕ್ಷೆಯೊಂದರ ಅಂದಾಜಿನ ಪ್ರಕಾರ ವಾರ್ಷಿಕವಾಗಿ ಕೊಲೊರೆಕ್ಟಲ್ ಹೊಟ್ಟೆ ಮತ್ತು ಅನ್ನನಾಳದ ಕ್ಯಾನ್ಸರ್ಗಳ ಒಟ್ಟು ೧.೭ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಸತತ ಹೊಟ್ಟೆಯ ಅಸ್ವಸ್ಥತೆ, ಮಲವಿಸರ್ಜನೆಯ ಕ್ರಮದಲ್ಲಿ ಬದಲಾವಣೆ ಅಥವಾ ಜಾಂಡಿಸ್ನAತಹ ಸೂಚನೆ ಕಂಡುಬAದ ತಕ್ಷಣ ಮೌಲ್ಯಮಾಪನ ಮಾಡಿಸಿಕೊಳ್ಳಬೇಕು. ಇದರಿಂದ ನಿಖರ ರೋಗ ನಿರ್ಣಯ ಮತ್ತು ಅಧುನಿಕ ಶಸ್ತçಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಮೌನವಾಗಿ ಹರಡುವ ಲಿವರ್ ಕಾಯಿಲೆಗಳ ಬಗ್ಗೆ ತಜ್ಞ ವೈದ್ಯ ಡಾ. ನಿಶ್ಚಯ್ ಆರ್ ಮಾತನಾಡಿ, ೩೦ ರಿಂದ ೫೦ ವರ್ಷದೊಳಗಿನ ಜನರಲ್ಲಿ ಫ್ಯಾಟಿ ಲಿವರ್ ಮತ್ತು ಮದ್ಯಪಾನದಿಂದಾಗುವ ಲಿವರ್ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇವು ಆರಂಭದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸು ವುದಿಲ್ಲವಾದ್ದರಿಂದ ನಿಯಮಿತವಾಗಿ ಲಿವರ್ ತಪಾಸಣೆ (ಎಲ್ಎಫ್ಟಿ) ಮತ್ತು ಅಲ್ಟಾçಸೌಂಡ್ ಸ್ಕಾö್ಯನ್ ಮಾಡುವುದು ಒಳ್ಳೆಯದು ಎಂದರು.
ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಲಿವರ್ ಕಸಿ (ಅಂಗಾಗ ಕಸಿ) ಅತ್ಯಂತ ಪ್ರಮುಖ ಚಿಕಿತ್ಸೆಯಾಗಿದೆ ಎಂದರು. ಕೊಡಗಿನ ಜನರು ಅಂಗಾAಗ ದಾನ ಮಾಡಲು ಮುಂಚೂಣಿಗೆ ಬರಬೇಕೆಂದು ವಿನಂತಿಸಿದರು. ಸರಿಯಾದ ಸಮಯಕ್ಕೆ ಮಾಡುವ ಅಂU್ಯAಗ ದಾನವೂ ವೈಫಲ್ಯ ಅನುಭವಿಸುತ್ತಿರುವ ರೋಗಿಗಳಿಗೆ ಮರುಜೀವ ನೀಡುತ್ತದೆ ಎಂದರು.
ತAಡವಾಗಿ ನೀಡುವ ಚಿಕಿತ್ಸೆಯ ಮಹತ್ವದ ಬಗ್ಗೆ ಮಣಿಪಾಲ್ ಆಸ್ಪತ್ರೆಯ ಕ್ಲಿನಿಕಲ್ ಸರ್ವಿಸಸ್ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ, ವಿವಿಧ ವಿಭಾಗಗಳ ತಜ್ಞ ವೈದ್ಯರ ಸಮಗ್ರ ಸಮಾಲೋಚನೆಯ ರೋಗಿಯನ್ನು ಜಂಟಿಯಾಗಿ ಮೌಲ್ಯಮಾಪನ ಮಾಡಲು ಮತ್ತು ಅವರ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸಾ ಮಾರ್ಗಸೂಚಿಯನ್ನು ರೂಪಿಸಲು ಅನುವು ಮಾಡಿಕೊಡುತ್ತದೆ. ಇದು ರೋಗನಿರ್ಣಯದಿಂದ ಹಿಡಿದು ರೋಗಿ ಸಂಪೂರ್ಣ ಚೇತರಿಸಿಕೊಳ್ಳುವವರೆಗೆ ಪೂರ್ಣ ಪ್ರಮಾಣದ ಆರೈಕೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದರು.