ಶನಿವಾರಸಂತೆ, ಅ. ೨: ಸಮೀಪದ ಒಡೆಯನಪುರ ಗ್ರಾಮದಲ್ಲಿ ಶ್ರೀಮಂಜುನಾಥ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

ಗೌರಿ-ಗಣೇಶ ಚತುರ್ಥಿಯಂದು ಗ್ರಾಮದ ಮಂದಿರದಲ್ಲಿ ಪ್ರತಿಷ್ಠಾಪಿಸಿ, ನಿತ್ಯವೂ ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಗಣೇಶೋತ್ಸವದ ಪ್ರಯುಕ್ತ ಗ್ರಾಮದಲ್ಲಿ ರಂಗೋಲಿ ಹಾಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ರಂಗೋಲಿ ಸ್ಪರ್ಧೆಯಲ್ಲಿ ೧೮ ಮಂದಿ ಯುವತಿಯರು ಸ್ಪರ್ಧಿಸಿದ್ದು ಗ್ರಾಮದ ರಸ್ತೆಯಲ್ಲಿ ಸುಂದರ ರಂಗೋಲಿ ಬಿಡಿಸಿ ಗಮನ ಸೆಳೆದರು. ಸ್ಪರ್ಧೆಯಲ್ಲಿ ಭಾಗ್ಯ ರಮೇಶ್ ಪ್ರಥಮ ಸ್ಥಾನ, ಪೂಜಾ ದ್ವಿತೀಯ ಹಾಗೂ ಸೌಮ್ಯಾ ಗಿರೀಶ್ ತೃತೀಯ ಸ್ಥಾನ ಗಳಿಸಿದರು. ತೀರ್ಪುಗಾರರಾಗಿ ಪತ್ರಕರ್ತೆ ಶ.ಗ ನಯನತಾರಾ ಹಾಗೂ ಶಿಕ್ಷಕಿ ಜ್ಯೋತಿ ನಿರಂಜನ್ ಪಾಲ್ಗೊಂಡಿದ್ದರು.

ನAತರ ನಡೆದ ಸಮಾರಂಭದಲ್ಲಿ ರಂಗೋಲಿ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು. ತೀರ್ಪುಗಾರರಾದ ಶ.ಗ. ನಯನತಾರಾ, ಜ್ಯೋತಿ ನಿರಂಜನ್, ಪತ್ರಕರ್ತ ಪ್ರಕಾಶ್ಚಂದ್ರ, ಶಿಕ್ಷಕ ವಿ.ಆರ್.ನಾಗರಾಜ್, ದಾನಿಗಳಾದ ನಿವೃತ್ತ ಮುಖ್ಯಶಿಕ್ಷಕ ಸಿ.ಎಲ್. ಸುಬ್ಬಯ್ಯ ಹಾಗೂ ಮಾಜಿ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಕಿರಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಜೆ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತ ಮಂಟಪದಲ್ಲಿ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ಹಾಗೂ ಭಕ್ತರು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ನಂತರ ದೇವರ ಉತ್ಸವ ಮೂರ್ತಿಗಳನ್ನು ಹಿತ್ತಲಕೇರಿ ಗ್ರಾಮದ ಹೊಳೆಯಲ್ಲಿ ಪೂಜಿಸಿ ವಿಸರ್ಜಿಸಲಾಯಿತು.

ಶ್ರೀಮಂಜುನಾಥ ಯುವಕ ಸಂಘದ ಅಧ್ಯಕ್ಷ ವಿ.ವಿ.ಲತೇಶ್, ಖಜಾಂಚಿ ಸುರೇಶ್ ಮೊಗೇರ, ನಿರ್ದೇಶಕರಾದ ವಿ.ಆರ್, ಪ್ರಸನ್ನ, ವಿ.ಹೆಚ್.ಪ್ರವೀಣ್, ಮಂಜುನಾಥ್, ನಿಶಾಂತ್, ಗಿರೀಶ್, ರಾಜು, ಮನೋಜ್, ಯೋಗೇಶ್, ಗ್ರಾಮ ಮುಖಂಡರು ಹಾಜರಿದ್ದರು.