ಸೋಮವಾರಪೇಟೆ, ಅ. ೨: ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿಗೆ ಒಳಪಡುವ ಯಲಕನೂರು, ಕಾಟಿಕೊಪ್ಪಲು ಗ್ರಾಮದಲ್ಲಿ ಹಕ್ಕುಪತ್ರಕ್ಕಾಗಿ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರೂ ಈವರೆಗೆ ದಾಖಲೆಗಳನ್ನು ನೀಡಿಲ್ಲ ಎಂದು ಸಾರ್ವಜನಿಕರು ಶಾಸಕ ಡಾ. ಮಂತರ್ ಗೌಡ ಅವರಲ್ಲಿ ಅಳಲು ತೋಡಿಕೊಂಡರು.
ಕಾಟಿಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಡಾ. ಮಂತರ್ ಗೌಡ ಅವರ ಬಳಿ, ನಿವೇಶನಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಕಾಟಿಕೊಪ್ಪಲು ಗ್ರಾಮದ ಸರ್ವೇ ನಂಬರ್ ೩೬/೬ರಲ್ಲಿರುವ ಜಾಗ ೧೯೫೦ ರ ಜಮಾ ಬಂದಿಯ ಪ್ರಕಾರ ಪೈಸಾರಿ ಎಂದು ಕಂಡುಬAದಿದ್ದು, ಅಲ್ಲಿನ ೪೦ಕ್ಕೂ ಹೆಚ್ಚಿನ ಗ್ರಾಮಸ್ಥರು ಮೂರೂಮುಕ್ಕಾಲು ಸೆಂಟ್ ಜಾಗಕ್ಕೆ ೩,೫೦೦ ರಂತೆ ಪಾವತಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಅಲ್ಲದೆ ಹೇಮಾವತಿ ನದಿಯ ಮುಳುಗಡೆಯ ನಿರಾಶ್ರಿತರಿಗೆ ಇದೆ ಸರ್ವೇ ನಂ ನಲ್ಲಿ ೫೦ ಕುಟುಂಬಗಳಿಗೆ ಒ.ಎಂ. ಫಾರಂನ್ನು ಸರಕಾರ ನೀಡಿದೆ. ಅಲ್ಲದೆ, ೨೦೦೬ ರಲ್ಲಿ ಅಂದಿನ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ೩೬/೬ ರ ಸರ್ವೇ ನಂ. ನಲ್ಲಿ ೧೫೦ ಏಕರೆ ಜಾಗವನ್ನು ನಿವೇಶನ ಹಕ್ಕು ಪತ್ರ ನೀಡುವ ಉದ್ದೇಶದಿಂದ ಕಾಯ್ದಿರಿಸಿ ಆದೇಶ ಹೊರಡಿಸಿದ್ದರು.
ಇಷ್ಟಾದರೂ ಈವರೆಗೆ ಮೂರುಮುಕ್ಕಾಲು ಸೆಂಟ್ ಜಾಗಕ್ಕೆ ಹಕ್ಕು ಪತ್ರ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಚಿನ್ ಸಭೆಯಲ್ಲಿ ಆರೋಪಿಸಿದರು. ಇದರೊಂದಿಗೆ ಸ.ನಂ. ೩೬/೬ರ ಜಾಗ ಅರಣ್ಯ ಭೂಮಿಗೂ ಹೊಂದಿಕೊAಡಿರುವ ಹಿನ್ನೆಲೆ, ಅರಣ್ಯ ಇಲಾಖೆಯವರು ಗ್ರಾಮಸ್ಥ ರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು. ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಸ್ಥಳೀಯ ಜನರ ಬದುಕಿನೊಂದಿಗೆ ಅಧಿಕಾರಿಗಳು ಆಟ ಆಡಬಾರದು. ಸರಿಯಾದ ಮಾಹಿತಿ ನೀಡಿ ಜನರಿಗೆ ಸಹಕಾರಿಯಾಗಬೇಕು. ಸರ್ವೇ ನಂ ೩೬/೬ ರ ಭೂಮಿ ವಿಚಾರವಾಗಿ ೧೫ ದಿನಗಳ ಒಳಗೆ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾಮದ ಕಿರಣ್ ಮಾತನಾಡಿ, ಹಳೆ ಮದಲಾಪುರ ಜೇನು ಕುರುಬರ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ನಿರ್ಮಿತಿ ಕೇಂದ್ರದಿAದ ಅಂದಾಜು ೪೦ ಲಕ್ಷ ಹಣ ಬಿಡುಗಡೆ ಮಾಡಿದ್ದು ಕಾಂಕ್ರೀಟ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಸಂಬAಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ಇತ್ತ ಸುಳಿದಿಲ್ಲ. ರಸ್ತೆ ನಿರ್ಮಾಣಗೊಂಡು ಹದಿನೈದು ದಿನದಲ್ಲೇ ಬಿರುಕು ಬಿಟ್ಟಿದೆ ಎಂದು ದೂರಿದರು.
ನಿರ್ಮಿತಿ ಕೇಂದ್ರದ ಇಂಜಿನಿಯರ್‌ಗೆ ಸ್ಥಳದಲ್ಲೇ ಕರೆ ಮಾಡಿದ ಶಾಸಕರು, ಕೂಡಲೇ ಕಾಮಗಾರಿ ಪರಿಶೀಲಿಸಿ ವರದಿ ನೀಡಬೇಕು. ಮರು ಕಾಂಕ್ರಿಟೀಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು. ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಎಸ್.ಎಂ. ಡಿಸಿಲ್ವಾ, ಪಿ.ಡಬ್ಲ್ಯೂ.ಡಿ. ಇಂಜಿನಿಯರ್ ಕುಮಾರ್, ಎ.ಸಿ.ಎಫ್. ನವೀನ್ ಕುಮಾರ್, ಆರ್‌ಎಫ್‌ಓ ಮಲ್ಲೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ, ಸೆಸ್ಕ್ ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್ ಕುಮಾರ್, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.