ಕೂಡಿಗೆ, ಅ. ೨: ಹೆಬ್ಬಾಲೆ ಶ್ರೀ ಕಾಳಿಕಾಂಬ ವಿಶ್ವಕರ್ಮ ಕೈಗಾರಿಕಾ ಸಹಕಾರ ಸಂಘ ನಿಯಮಿತ ಇದರ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆಯು ನೆರವೇರಿತು. ಸಂಘದ ಆವರಣದಲ್ಲಿ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಹೆಚ್.ಬಿ. ಲಿಂಗಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು,

ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು ಹಾಗೂ ಅನುಪಯುಕ್ತ ಹಳೆಯ ಯಂತ್ರೋಪಕರಣಗಳನ್ನು ವಿಲೇವಾರಿ ಮಾಡುವುದು ಮತ್ತು ಮುಂದಿನ ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ವತಿಯಿಂದ ಸಂಘಕ್ಕೆ ಸಿಗುವ ಅನುದಾನವನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚಿಸಲಾಯಿತು.

ಸಂಘದಲ್ಲಿ ವಿಶ್ವಕರ್ಮ ಕೃಷಿ ಪತ್ತಿನ ಸಹಕಾರ ಸಂಘ ಚಿಕ್ಕದಾಗಿ ಸ್ಥಾಪಿಸಿ ಸಂಘದ ಏಳಿಗೆಗೆ ಶ್ರಮಿಸುವ ಅಗತ್ಯವಿದೆ ಎಂದು ಅಧ್ಯಕ್ಷರು ತಿಳಿಸಿದರು,

ಈ ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಬಿ.ಬಿ. ನಾಗರಾಜ್, ಸಹ ಕಾರ್ಯದರ್ಶಿ ಹೆಚ್.ಆರ್. ಲೋಕನಾಥ್, ನಿರ್ದೇಶಕರುಗಳಾದ ಹೆಚ್.ಜೆ. ದೇವದಾಸ್, ದಿನೇಶಾಚಾರಿ ಹೆಚ್.ಬಿ., ಕೆ.ಬಿ. ಮೋಹನ್, ಉಷಾ, ಕುಶಾಲನಗರ ತಾಲೂಕು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಹೆಚ್.ಆರ್. ರಾಜಮೂರ್ತಿ ಹಾಗೂ ಸದಸ್ಯರು ಹಾಜರಿದ್ದರು.