ವೀರಾಜಪೇಟೆ, ಅ. ೨: ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘ ವೀರಾಜಪೇಟೆ ಆಶ್ರಯದಲ್ಲಿ ೧೯ನೇ ವರ್ಷದ ಅದ್ದೂರಿ ಆಯುಧ ಪೂಜಾ ಸಮಾರಂಭ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ತಾ. ೨೦ ರಂದು ಜರುಗಲಿದೆ.

ವೀರಾಜಪೇಟೆಯ ಪತ್ರಕರ್ತರ ವೇದಿಕೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಜೂಡಿವಾಸ್ ಮಾಹಿತಿ ನೀಡಿದರು.

ಸಂಘದ ವತಿಯಿಂದ ೧೯ನೇ ವರ್ಷದ ಆಯುಧಪೂಜೆ ಸಮಾರಂಭವನ್ನು ಆಚರಿಸಲಾಗುತ್ತಿದ್ದು, ಅಂದು ಬೆಳಿಗ್ಗೆ ೧೦ ಗಂಟೆಗೆ ಸಂಘದ ಕಚೇರಿಯಲ್ಲಿ ಆಯುಧ ಪೂಜೆ, ೧೦.೩೦ ಗಂಟೆಗೆ ಸ್ಥಳೀಯ ಕಲಾ ಪ್ರತಿಭೆಗಳು ಹಾಗೂ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುÀಗಲಿವೆ. ಗುಂಪು ನೃತ್ಯ ಹಾಗೂ ಸ್ಥಳೀಯ ಚಂಡೆ ಮೇಳ ಮುಂತಾದ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ ೧ ಕ್ಕೆ ಸಾರ್ವಜನಿಕರಿಗೆ ಸಂಘದ ವತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಧ್ಯಾಹ್ನ ೩ ಗಂಟೆಗೆ ಬೈಕ್ ಸವಾರರಿಂದ ಸಾಹಸ ಪ್ರದರ್ಶನ ಜರುಗಲಿದೆ. ಸ್ಥಳೀಯ ಪ್ರತಿಭೆಗಳಿಗೂ ಕೂಡ ಈ ಸಂದರ್ಭದಲ್ಲಿ ಅವಕಾಶ ನೀಡಲಾಗುವುದು ಎಂದರು.

ಸಂಜೆ ಸಮಾರೋಪ ಸಮಾರಂಭ ಜರುಗಲಿದ್ದು ಬಹುಮಾನ ವಿತರಣೆ, ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭ ಹಿರಿಯರು, ಪೌರಕಾರ್ಮಿಕರು, ಸಮಾಜ ಸೇವಕರು, ನಿವೃತ್ತ ಬಸ್ ಕಾರ್ಮಿಕರು ಹಾಗೂ ಪ್ರತಿಭಾವಂತ ಬಸ್ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಗುವುದು. ತದನಂತರ ಕ್ಯಾಲಿಕಟ್‌ನ ಸರ್ಗಂ ಸಂಗೀತ ಹಾಗೂ ಮ್ಯಾಜಿಕ್ ಡ್ಯಾನ್ಸ್ ಕಾರ್ಯಕ್ರಮವು ಜರುಗಲಿದೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾ ಪ್ರತಿಭೆಗಳು ಹೆಸರನ್ನು ವೀರಾಜಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಜವಾನ್ ಕೋಲ್ಡ್ ಸ್ಟೋರೇಜ್ ಅಥವಾ ಸಂಘದ ಪದಾಧಿಕಾರಿಗಳಲ್ಲಿ ನೋಂದಾಯಿಸತಕ್ಕದ್ದು. ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದರು. ೯೮೪೪೫೫೮೫೩೫, ೮೭೬೨೨೭೯೩೯೭, ೮೩೧೦೧೮೧೦೯೪.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಖಜಾಂಚಿ ವಿನಂತು ಬಿ.ವಿ., ನಿರ್ದೇಶಕರಾದ ಅಜಯ್ ಕೆ.ಇ. ಉಪಸ್ಥಿತರಿದ್ದರು.