ಮಡಿಕೇರಿ, ಅ. ೨: ಪಾಡಿ ಶ್ರೀ ಇಗ್ಗುತಪ್ಪ ಭಕ್ತಜನ ಸಂಘದ ವಾರ್ಷಿಕ ಮಹಾಸಭೆ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿರುವ ಸಭಾಂಗಣದಲ್ಲಿ ತಾ. ೬ ರಂದು ಬೆ. ೧೦.೩೦ ಗಂಟೆಗೆ ಸಂಘದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಭಕ್ತರು ಮಹಾಸಭೆಗೆ ಆಗಮಿಸಿ, ಸಲಹೆ-ಸೂಚನೆಗಳನ್ನು ನೀಡಿ, ಸದರಿ ದೇವತಾ ಕಾರ್ಯದಲ್ಲಿ ಭಾಗಿಯಾಗುವಂತೆ ಆಡಳಿತ ಮಂಡಳಿ ಕೋರಿದೆ.