ವೀರಾಜಪೇಟೆ, ಅ. ೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವೀರಾಜಪೇಟೆ ತಾಲೂಕು ಗೋಣಿಕೊಪ್ಪ ವಲಯದ ವತಿಯಿಂದ ಗೋಣಿಕೊಪ್ಪ ಸಮುದಾಯ ಭವನದಲ್ಲಿ ಸ್ವ-ಉದ್ಯೋಗ ಮಾಹಿತಿ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಹಾಯಕಿ ನವ್ಯ ಪಾಲ್ಗೊಂಡು ಮಾತನಾಡಿ, ನಿರುದ್ಯೋಗ ಎಂಬುದು ಸಮಸ್ಯೆಯಲ್ಲ, ಉದ್ಯೋಗ ಮಾಡುವವರಿಗೆ ನೂರೆಂಟು ಮಾರ್ಗಗಳಿವೆ ಎಂದರು. ಫಾಸ್ಟ್ ಫುಡ್ ತಯಾರಿಕೆ, ಮಹಿಳೆಯರಿಗೆ ಟೈಲರಿಂಗ್, ಅಣಬೆ ಕೃಷಿ, ಜೂಟ್ ಬ್ಯಾಗ್ ತಯಾರಿಕೆ, ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್ ತಯಾರಿಕೆ, ಅಗರಬತ್ತಿ ತಯಾರಿಕೆ ಇನ್ನೂ ಹಲವು ರೀತಿಯ ಸ್ವ-ಉದ್ಯೋಗ ಮಾಡಲು ದಾರಿಗಳಿವೆ ಎಂದು ಮಾಹಿತಿ ನೀಡಿದರು.

ಗೋಣಿಕೊಪ್ಪ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ತರಬೇತಿಗಳನ್ನು ನೀಡುವುದರಿಂದ ನಮಗೆ ತುಂಬಾ ಉಪಯುಕ್ತವಾಗುತ್ತದೆ ಎಂದರು. ಕೃಷಿ ಮೇಲ್ವಿಚಾರಕ ವಸಂತ್, ಉಪಾಧ್ಯಕ್ಷೆ ಪುಷ್ಪ ಮನೋಜ್, ಸೇವಾ ಪ್ರತಿನಿಧಿ ವಿಮಲ, ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.