ಪೊನ್ನಂಪೇಟೆ, ಅ. ೧: ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೇರಳಿನಾಡ್ ವತಿಯಿಂದ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ೯ ಸ್ಪರ್ದಿಗಳು ಬಹುಮಾನ ಗಳಿಸಿದರು. ಜೊತೆಗೆ ಮೂವರು ವಿಶೇಷ ಬಹುಮಾನ ಪಡೆದುಕೊಂಡರು. ವೀರಾಜಪೇಟೆ ಸಮೀಪದ ಕುಟ್ಟಂದಿಯ ಕೆ.ಬಿ. ಪ್ರೌಢಶಾಲಾ ಮೈದಾನದಲ್ಲಿ ನಡೆದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಅಪಾರ ಸಂಖ್ಯೆಯ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಸ್ಪರ್ಧೆಯ ೧೨ನೇ ಬೋರ್ ವಿಭಾಗದಲ್ಲಿ ಕಳ್ಳಂಗಡ ನವೀನ್ ಪ್ರಥಮ, ಮಣಿಯಪ್ಪಂಡ ನಾಣಯ್ಯ ದ್ವಿತೀಯ ಮತ್ತು ಪೊನ್ನಿರ ಚೇತನ್ ತೃತೀಯ ಸ್ಥಾನ ಪಡೆದರೆ, ೦.೨೨ ರೈಫಲ್ ವಿಭಾಗದಲ್ಲಿ ಕೇಳೇಟಿರ ಪವಿತ್ ಪ್ರಥಮ, ಬಡುವಂಡ ದೇವಯ್ಯ ದ್ವಿತೀಯ ಮತ್ತು ಸಣ್ಣುವಂಡ ರಕ್ಷ ತೃತೀಯ ಸ್ಥಾನ ಗಳಿಸಿದರು. ಏರ್ ರೈಫಲ್ ವಿಭಾಗದಲ್ಲಿ ಪಟ್ಟಡ ಬೋಪಣ್ಣ ಪ್ರಥಮ, ಚೆಕ್ಕೆರ ತಿಮ್ಮಯ್ಯ ದ್ವಿತೀಯ ಮತ್ತು ಬಡುವಂಡ ದೇವಯ್ಯ ತೃತೀಯ ಬಹುಮಾನ ಗಳಿಸಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನೆಲ್ಲಮಕ್ಕಡ ವಿನೋದ್ ಅತ್ಯುತ್ತಮ ಹಿರಿಯ ಸ್ಪಧೆüðಯಾಗಿ, ಪಟ್ಟಡ ಐರ ಅತ್ಯುತ್ತಮ ಮಹಿಳಾ ಸ್ಪರ್ಧಿಯಾಗಿ ಮತ್ತು ಮುಕ್ಕಾಟಿರ ಸುಬ್ಬಯ್ಯ ಉದಯೋನ್ಮುಖ ಯುವ ಸ್ಪರ್ಧೆಯಾಗಿ ವಿಶೇಷ ಬಹುಮಾನ ಪಡೆದರು.

ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೇರಳಿನಾಡ್ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟ್ಟಂದಿಯ ಕೆ.ಬಿ. ಪ್ರೌಢಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಕಂಜಿತAಡ ಮಂದಣ್ಣ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿದರು. ಕಂಡAಗಾಲ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಚೇಂದ್ರಿಮಾಡ ಪವೀನಾ ನಾಚಪ್ಪ, ಒರಿಯನ್ ಕನ್ಸ್ಟ್ರಕ್ಷನ್ ಮಾಲೀಕರಾದ ಚೆರಿಯಂಡ ಶರತ್ ಗಣಪತಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಜೆ ನಡೆದ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೇರಳಿನಾಡ್ ಸಂಸ್ಥೆಯ ಪ್ರಮುಖರಾದ ಅಪ್ಪಂಡೇರAಡ ದಿನು, ಚಂದೂರ ಸಂದೇಶ್, ಮೇಚಿಯಂಡ ಅಪ್ಪುಟ್ಟ ಉತ್ತಯ್ಯ, ಕುಪ್ಪಂಡ ದಿಲನ್ ಬೋಪಣ್ಣ, ಚಂದೂರ ಬೋಪಣ್ಣ, ಚೆರಿಯಂಡ ದೀಪು, ಆಟ್ರಂಗಡ ಕುಟ್ಟಪ್ಪ, ಚಂದೂರ ಶ್ಯಾಮ್ ಮತ್ತಿತರರು ಸ್ಪರ್ಧೆಯ ಉಸ್ತುವಾರಿ ವಹಿಸಿದ್ದರು.