ವಿಶೇಷ ವರದಿ : ಗುರುದರ್ಶನ್‌ವಿ.ಎಸ್

ಮಡಿಕೇರಿ, ಅ. ೧: ಇಲ್ಲಿಗೆ ಸಮೀಪದ ಅವರೆಗುಂದ ಗ್ರಾಮದಲ್ಲಿ ಪಾರಂಪರಿಕ ಅರಣ್ಯವಾಸಿಗಳ ಕೃಷಿ ಭೂಮಿಯನ್ನು ಗ್ರಾಮದ ಹಲವರು ಒತ್ತುವರಿ ಮಾಡಿಕೊಂಡು ನೈಜ ಫಲಾನುಭವಿಗಳಿಗೆ ವಂಚನೆ ಎಸಗಲಾಗಿದೆ ಎಂದು ಆರೋಪಿಸಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಒಳಪಡುವ ಜೇನುಕುರುಬರ ಮುತ್ತ ಮತ್ತು ಆತನ ಮಗ ಜೆ.ಎಂ. ಶಿವಪ್ಪ ಅಲ್ಲದೇ ಇವರ ಕುಟುಂಬಸ್ಥರೇ ಆದ ಜೆ.ಎಲ್. ರಾಜುರವರ ಪುತ್ರ ಪುಟ್ಟುಸ್ವಾಮಿ ಮತ್ತು ಜೆ.ಆರ್.ಸುಶೀಲ ಎಂಬುವವರಿಗೆ ಸೇರಿದ ಭೂಮಿಯನ್ನು ಕಬಳಿಸುವ ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಪಾರಂಪರಿಕ ಅರಣ್ಯವಾಸಿಗಳಿಗೆ ಜೀವನ ನಿರ್ವಹಣೆಗಾಗಿ ಭೂಮಿಯನ್ನು ಹೊಂದಿಕೊಳ್ಳುವ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯ್ತಿಗೆ ಒಳಪಡುವ ಅವರೆಗುಂದ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕೃಷಿ ಮತ್ತು ಇತರ ವೃತ್ತಿಯಲ್ಲಿ ಸಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರಲ್ಲಿ ಅತಿ ವಿರಳ ಮತ್ತು ವಿಶಿಷ್ಟವಾದ ಸೋಲಿಗ, ಜೇನುಕುರುಬ ಜನಾಂಗದವರೂ ಇತರ ಸಮುದಾಯದೊಂದಿಗೆ ನೆಲೆ ಕಂಡುಕೊAಡಿದ್ದಾರೆ.

ಮುತ್ತನ ತಂದೆ ಹೊನ್ನ ಎಂಬುವವರು ಇಲ್ಲಿಯ ಅವರೆಗುಂದ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಲವು ದಶಕಗಳಿಂದ ವಾಸವಾಗಿದ್ದರು. ಜೇನುಕುರುಬರ ಹೊನ್ನ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಉಪಯುಕ್ತ ವ್ಯಕ್ತಿಯಾಗಿದ್ದು ಆತ ಸ್ಥಳೀಯರಲ್ಲಿಯೂ ಚಿರಪರಿಚಿತನಾಗಿದ್ದ. ಜೆ.ಕೆ. ಹೊನ್ನ ಮತ್ತು ಆತನ ಮಗ ಜೆ.ಕೆ.ಮುತ್ತ ಮೃತಪಟ್ಟ ಬಳಿಕ ಜೀವನೋಪಾಯಕ್ಕಾಗಿ ವಿವಾದಿತ ಭೂಮಿಯ ವಾರಿಸುದಾರರು ಕುಶಾಲನಗರದಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಸಮೀಪದ ನಿವಾಸಿ ಒಬ್ಬರು ಈ ಹಿಂದೆ ಮೃತಪಟ್ಟ ಜೇನು ಕುರುಬರ ಹೊನ್ನ ಮತು ಆತನ ಮಗ ಶಿವಪ್ಪನಿಗೆ ಮತ್ತು ಇತರ ಮೂವರಿಗೆ ಪಾರಂಪರಿಕವಾಗಿ ಹಸ್ತಾಂತರಗೊAಡಿದ್ದ ಸುಮಾರು ೪ ಏಕ್ರೆ ಕೃಷಿ ಜಮೀನನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಏನಿದು ಪ್ರಕರಣ

ಭಾರತ ಸರ್ಕಾರದ ಅಧಿನಿಯಮ ೨೦೦೬ ಮತ್ತು ನಿಯಮಗಳ ೨೦೦೮ ಹಾಗೂ ನಿಯಮಗಳ ತಿದ್ದುಪಡಿ ೨೦೧೨ರ ಪ್ರಕಾರ ಪರಿಶಿಷ್ಟ ಪಂಗಡ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳು ದಿನಾಂಕ ೧೩.೧೨.೨೦೦೫ಕ್ಕೆ ಮುಂಚಿತವಾಗಿ ಅರಣ್ಯದಲ್ಲಿ ವಾಸ ಅಥವ ಜೀವನೋಪಾಯಕ್ಕಾಗಿ ಅರಣ್ಯ ಹಕ್ಕುಗಳ ಮಾನ್ಯತೆ ಪಡೆಯಲು ಅರ್ಹರಾಗಿರುತ್ತಾರೆ. ಹೀಗೆ ಅರ್ಹರೆಂದು ಪರಿಗಣಿಸಲ್ಪಟ್ಟ ಬುಡಕಟ್ಟು ಜನಾಂಗಕ್ಕೆ ಜಲಚರ ಉತ್ಪನ್ನಗಳು, ಜಾನುವಾರುಗಳನ್ನು ಮೇಯಿಸುವ ಹಾಗೂ ಸಾಂಪ್ರದಾಯಿಕ ಸಂಪನ್ಮೂಲಗಳನ್ನು ಹೊಂದಿಕೊಳ್ಳುವ ಹಕ್ಕು ಇರುತದೆ. ಪಾರಂಪರಿಕವಾಗಿ ಬಳೆಕೆಯಲ್ಲಿರುವ ತಮ್ಮ ಕೃಷಿ ಭೂಮಿಯನ್ನು ಸಂರಕ್ಷಿಸಿಕೊAಡು ಬರುವ ಹಕ್ಕನ್ನು ಈ ಕಾಯ್ದೆಗಳು ಎತ್ತಿಹಿಡಿಯುತದೆ.

ಅರಣ್ಯ ಹಕ್ಕು ಸಮಿತಿಯಲ್ಲಿ ಜೇನು ಕುರುಬರ ಪಾತ್ರ ಅತ್ಯಂತ ಪ್ರಮುಖ ಮತ್ತು ನಿರ್ಣಾಯಕವಾಗಿದ್ದಾಗಿದೆ.

ಅರಣ್ಯ ಹಕ್ಕು ಸಮಿತಿಯಲ್ಲಿ ಇವರಿಗೆ ಕಡ್ಡಾಯ ಸದಸ್ಯತ್ವದ ಪ್ರಾತಿನಿತ್ಯವನ್ನು ನೀಡಲಾಗಿದೆ. ಕಾಡಿನ ಜ್ಞಾನ, ಐತಿಹಾಸಿಕ ಸಾಕ್ಷ್ಯಗಳು, ಅರಣ್ಯ ಜೀವನದ ವೈವಿಧ್ಯತೆಯ ಮತ್ತು ಪ್ರಕೃತಿ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಆರಾಧÀನೆಯ ಸೇರಿದಂತೆ ಸಾಂಪ್ರದಾಯಿಕ ಪದ್ದತಿಗಳ ಪೋಷಣೆಯ ಮುಖಾಂತರ ವನ್ಯ ಪ್ರಾಣಿಗಳ ಮತ್ತು ಅರಣ್ಯ ಸಂಪತ್ತಿನ ಸಂರಕ್ಷಣೆಯ ಹೊನೆಗಾರಿಕೆಗಾಗಿ ಸರ್ಕಾರವೂ ಕೂಡ ಇವರನ್ನೇ ಆಶ್ರಯ ಪಡೆಯಬೇಕಿದೆ.

ವಿವಾದಿತ ಭೂಮಿಯ ನೈಜ ವಾರಿಸುದಾರ ಜೇನುಕುರುಬರ ಹೊನ್ನ ಜನಪದ ಕಲಾವಿದನಾಗಿದ್ದು ಆತನ ಕೋಲಾಟ ಮತ್ತು ಬುಡಕಟ್ಟು ಪ್ರಪಂಚದ ಅಪಾರ ಜ್ಞಾನವನ್ನು ಪರಿಗಣಿಸಿ ಕರ್ನಾಟಕ ಜಾನಪದ ಅಕಾಡಮಿ ೧೯೯೨ರಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆದರೆ ಜೇನುಕುರುಬರ ಹೊನ್ನ ಮತ್ತು ಜೆ.ಕೆ. ಮುತ್ತ ಮೃತಪಟ್ಟ ಬಳಿಕ ಅವರ ಮಕ್ಕಳಾದ ಶಿವಪ್ಪ ಜೆ.ಎಲ್,ರಾಜುರವರ ಪತ್ನಿ ಜೆ.ಆರ್.ಸರೋಜ, ಮಕ್ಕಳಾದ ಜೆ.ಆರ್.ಪುಟ್ಟುಸ್ವಾಮಿ (ಮನು) ಮತ್ತು ಜೆ.ಆರ್.ಸುಶೀಲ ಜೆ.ಕೆ. ಮುತ್ತ ಕುಟುಂಬಸ್ಥರ ಪರವಾಗಿದ್ದ ಜಮೀನನ್ನು ಕೆಲವು ಮಂದಿ ಭೂ ಕಬಳಿಕೆಯ ಹುನ್ನಾರವನ್ನು ಮತ್ತು ವಾರಿಸುದಾರರ ಆರ್ಥಿಕ ಸಂಕಷ್ಟವನ್ನು ಬಂಡವಾಳವಾಗಿ ಕಾಣತೊಡಗಿದ್ದರು .

ಇದೇ ಸಮಯಸಾಧಿಸಿ ಮೂಢನಂಬಿಕೆಗಳ ನೆಪ ಹೇಳಿ ಮನೆಯಲ್ಲಿ ಮೃತರ ಪ್ರೇತಾತ್ಮಗಳ ಸಂಚಾರವಿದ್ದು ಮನೆಯಿಂದ ಸ್ವಲ್ಪಕಾಲ ದೂರ ಉಳಿದುಕೊಳ್ಳುವಂತೆ ಜೆ.ಕೆ ಕುಟುಂಬಸ್ಥರನ್ನು ಪ್ರೇರೇಪಿಸಲಾಯಿತು ಎನ್ನಲಾಗಿದೆ. ಇಂತಹ ಮೂಢನಂಬಿಕೆಗಳಿಗೆ ಮಾರುಹೋದ ಹೊನ್ನನವರ ಮಕ್ಕಳು ತಮಗೆ ಆಪ್ತರಾಗಿದ್ದ ವ್ಯಕ್ತಿಯ ಸಲಹೆಯಂತೆ ಅಲ್ಪ ಮೊತ್ತದ ಹಣ ಪಡೆದು ಪ್ರೇತಾತ್ಮಗಳು ಸಂಪ್ರೀತರಾಗಿ ಸರಿಯುವಷ್ಟು ಕಾಲ ದೂರ ಉಳಿಯಲು ತೀರ್ಮಾನಿಸಿದ್ದರು ಮತ್ತು ಆಪ್ತನ ಸಲಹೆಗೆ ಈ ಕುಟುಂಬ ಮರುಳಾಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮೌಕಿಕ ಒಪ್ಪಂದದ ಮೇರೆಗೆ ತಮ್ಮ ತೋಟವನ್ನು ನೋಡಿಕೊಂಡು ಲಭಿಸುವ ಲಾಭಾಂಶವನ್ನು ಕೊಡುವುದಾಗಿಯೂ ಜೇನುಕುರುಬರ ಮುತ್ತ ಶಿವಪ್ಪ ಮತ್ತು ಇತರರಿಗೆ ಸೇರಿದ ಭೂಮಿಯನ್ನು ಸಂರಕ್ಷಿಸುವುದಾಗಿಯ, ತೋಟದ ಒಳಗಡೆ ದನಕರುಗಳು ಬಾರದಂತೆ ಹಾಗೂ ಕಾಫಿ ಗಿಡಗಳನ್ನು ಪಾಲಿಸುವುದಾಗಿಯೂ ಸಹಾಯ ಮತ್ತು ಸಹಕಾರದ ಸೋಗಿನಲ್ಲಿ ಮಾತನಾಡಿದ ಆಪ್ತ, ಮುತ್ತ ಮೃತಪಟ್ಟ ನಂತರ ಮುತ್ತನ ಮಕ್ಕಳಿಗೆ ಭೂಮಿಯನ್ನು ಹಿಂತಿರುಗಿಸಲು ನಿರಾಕರಿಸಿದ್ದಾನೆ ಎಂದು ಮುತ್ತನ ಮಕ್ಕಳು ಆರೋಪಿಸಿದ್ದಾರೆ. ಮುತ್ತ ಮೃತಪಟ್ಟ ಬಳಿಕ ಭೂಮಿಯನ್ನು ಬಳಸುತಿದ್ದ ವ್ಯಕ್ತಿ ನೈಜ ವಾರಿಸುದಾರರನ್ನು ಧಿಕ್ಕರಿಸಿ ಸುತ್ತಲೂ ಬೇಲಿ ಹಾಕಿ ಕಬ್ಬಿಣದ ಗೇಟನ್ನು ಅಳವಡಿಸಿದ್ದಾರೆ. ಇದೇ ಪರಿಸರದಲ್ಲಿ ಇದ್ದ ಮೃತ ಮುತ್ತ ವಾಸಿಸುತಿದ್ದ ಮನೆಯನ್ನೂ ಅನುಮತಿಯಿಲ್ಲದೆ ಕೆಡವಲಾಗಿದೆ. ಇದನ್ನು ಪ್ರಶ್ನಿಸಿದ ನೈಜ ವಾರಿಸುದಾರರಲ್ಲಿ ಒಬ್ಬರಾದ ಶಿವಪ್ಪ ಎಂಬುವವರಿಗೆ ಪ್ರಾಣ ಬೆದರಿಕೆ ಒಡ್ಡಿರುವುದಾಗಿಯೂ ಗ್ರಾಮಸ್ಥರೂ ಮತ್ತು ಅರಣ್ಯ ಬುಡಕಟ್ಟು ಸಮಿತಿಯ ಮುಖಂಡರಾದ ಎಂ.ಸಿ.ವಾಸು ತಿಳಿಸಿದ್ದಾರೆ. ಆ ವ್ಯಕ್ತಿ ನಕಲಿ ದಾಖಲೆಗಳನ್ನು ಹಾಗೂ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯ್ತಿಗೆ ನೀಡಿ ಈಗಾಗಲೇ ಕೊರೆದಿರುವ ಕೊಳವೆಬಾವಿಗೆ ಮೋಟರ್‌ಅಳವಡಿಸಲು ನಿರಪೇಕ್ಷಣಾ ಪತ್ರ ನೀಡಬೇಕೆಂದು ತಮ್ಮ ಹೆಸರಿನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದಾರೆ . ಆದರೆ ಬುಡಕಟ್ಟು ಕೃಷಿಕರ ಸಂಘದ ಆಕ್ಷೇಪಣೆಯ ಮೇರೆಗೆ ಎಚ್ಚೆತ್ತುಕೊಂಡ ಚೆಸ್ಕಾಂ ಇಲಾಖೆ ಮೂಲ ದಾಖಲೆಗಳನ್ನು ಒದಗಿಸುವಂತೆ ಆದೇಶಿಸಿದ್ದಾರೆ.

ಆಪ್ತನ ಮಾತಿಗೆ ಮಾರುಹೋದ ಪರಿಶಿಷ್ಟ ಜನಾಂಗದ ಈ ಕುಟುಂಬ ಇದೀಗ ನಿರಾಸೆಯಿಂದ ಅರಣ್ಯ ಹಕ್ಕು ಸಮಿತಿಯನ್ನು ಸಂಪರ್ಕಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೇಳಿಕೊಂಡಿದೆ.