ಮಡಿಕೇರಿ, ಅ. ೧; ಜಿಲ್ಲೆಯ ವಿವಿಧೆಡೆ ಇಂದು ಮಧ್ಯಾಹ್ನದ ಬಳಿಕ ದಿಢೀರಾಗಿ ಬಿಸಿಲಿನ ವಾತಾವರಣ ಮಾಯವಾಗಿ ಗುಡುಗು, ಸಿಡಿಲು, ಭಾರೀ ಗಾಳಿಯೊಂದಿಗೆ ಬಿರುಸಾಗಿ ಮಳೆ ಸುರಿದಿದೆ. ಮಳೆ-ಗಾಳಿಯ ರಭಸಕ್ಕೆ ಮನೆ, ರಸ್ತೆ ವಾಹನಗಳ ಮೇಲೆ ಮರ, ವಿದ್ಯುತ್ ಕಂಬಗಳು ಬಿದ್ದು ಹಾನಿ ಸಂಭವಿಸಿದೆ.

ಕೂಡಿಗೆ: ಕುಶಾಲನಗರ, ಕೂಡಿಗೆ- ಕೂಡುಮಂಗಳೂರು ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ದಿಢೀರ್ ಬಿರುಗಾಳಿ, ಗುಡುಗು ಸಹಿತ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಸುರಿದ ಭಾರೀ ಮಳೆ ಗಾಳಿಗೆ ಕುಶಾಲನಗರ, ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಯಲ್ಲಿ ಮನೆಗಳ ಮೇಲೆ ಮರಬಿದ್ದು ಹಾನಿಯುಂಟಾಗಿದೆ. ಕೃಷಿಕರು ಬೆಳೆದ ಬಾಳೆ ಗಿಡಗಳು ನೆಲಕಚ್ಚಿವೆ. ಅನೇಕ ಮನೆಗಳ ಹಂಚುಗಳು, ಸಿಮೆಂಟ್ ಶೀಟ್‌ಗಳು ನೆಲಕ್ಕೆ ಉರುಳಿ ಅವಾಂತರ ಸೃಷ್ಟಿಯಾಗಿದೆ. ಕುಶಾಲನಗರ ಹಾರಂಗಿ ರಸ್ತೆ ಬದಿಯ ಕೆಲವು ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬ ಮುರಿತಗೊಂಡಿವೆ.

ಕೂಡ್ಲೂರು, ಚಿಕ್ಕತ್ತೂರು, ದೊಡ್ಡತ್ತೂರು, ಕೂಡಿಗೆ ಕೂಡುಮಂಗಳೂರು ಭಾಗಗಳಲ್ಲಿ ರಸ್ತೆಯ ಬದಿಯ ಮರಗಳು ರಸ್ತೆಗೆ ಉರುಳಿದ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿವೆ. ಕೂಡುಮಂಗಳೂರು ದೊಡ್ಡಮ್ಮ ತಾಯಿ ದೇವಸ್ಥಾನ ಹತ್ತಿರದಲ್ಲಿ ನಿಲ್ಲಿಸಲಾಗಿದ್ದ ಪಿಕ್‌ಅಪ್ ವಾಹನ ಮೇಲೆ ಬೃಹತ್ ಗಾತ್ರದ ಮರಬಿದ್ದ ಪರಿಣಾಮವಾಗಿ ಜಖಂಗೊAಡಿದೆ. ವಾಹನದೊಳಗೆ ಕುಳಿತ್ತಿದ್ದ ಗೊಂದಿಬಸವನಹಳ್ಳಿಯ ಅಜಿತ್ ಎಂಬವರ ತಲೆಗೆ ಪೆಟ್ಟಾಗಿದ್ದು, ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿ; ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ತೆçಗೆ ದಾಖಲಿಸಲಾಗಿದೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಚಂದ್ರಣ್ಣ ಎಂಬುವವರಿಗೆ ಸೇರಿದ ಬಾಳೆಗಿಡಗಳು ನೆಲಕಚ್ಚಿವೆ. ಚಿಕ್ಕತ್ತೂರು, ದೊಡ್ಡತ್ತೂರು ಗ್ರಾಮದ ರಾಜು, ಮುರುಗ, ನಂಜುAಡ ಗೋಪಾಲ, ಕಿರಣ್, ಜೋಸೆಫ್, ಶಂಕರ್ ಸೇರಿದಂತೆ ಅನೇಕರ ಮನೆಗಳಿಗೆ ಹಾನಿಯುಂಟಾಗಿದೆ.

ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುವಾರ ಸಂಜೆ ಗುಡುಗಿನೊಂದಿಗೆ, ಗಾಳಿ ಸಹಿತ ಸುರಿದ ಮಳೆಯಿಂದಾಗಿ ಮರಗಳು ಬಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಗ್ರಾಮಗಳಲ್ಲಿ ಕತ್ತಲು ಆವರಿಸಿದೆ. ದಿಢೀರನೆ ಬಲವಾದ ಗಾಳಿ ಬೀಸಿ ಗುಹ್ಯ ಗ್ರಾಮದ ಹೈಸ್ಕೂಲ್ ಪ್ಯೆಸಾರಿ ನಿವಾಸಿಯೊಬ್ಬರ ಕಾರಿನ ಮೇಲೆ ಮರ ಬಿದ್ದಿದೆ. ಇದಲ್ಲದೆ ಗುಹ್ಯ ಗ್ರಾಮದ ಕಕ್ಕಟ್ಟುಕಾಡು ಭಾಗದಲ್ಲೂ ಕೂಡ ಹಲವಾರು ಮರಗಳು ಧರೆಗೆ ಉರುಳಿವೆ. ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೆಲ್ಲಿ ಹುದಿಕೇರಿ ಸಮೀಪದ ಅತ್ತಿಮಂಗಲ ಬಳಿ ಬೃಹತ್ ಗಾತ್ರ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ಶಾಲೆ, ಕಾಲೇಜುಗಳಿಗೆ ತೆರಳಿದ ಮಕ್ಕಳು ಸಂಜೆ ಮನೆಗೆ ಹಿಂತಿರುಗುವಾಗ ಮಳೆಯಿಂದಾಗಿ ಮನೆಗೆ ತೆರಳಲು ಪರದಾಡಿದ ದೃಶ್ಯವು ಕಂಡುಬAದಿತು . ನೆಲ್ಲಿ ಹುದಿಕೇರಿ ಭಾಗದಲ್ಲೂ ಕೂಡ ರಭಸವಾದ ಗಾಳಿ ಬೀಸಿದ ಹಿನ್ನೆಲೆಯಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದಿದ್ದು ಕಾರ್ಗತ್ತಲ್ಲಿನಲ್ಲಿ ಕಳಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಾಲಾ ಕಾಲೇಜು ಮಕ್ಕಳಿಗೆ ಇದೀಗ ಅರ್ಧವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಮಸ್ಯೆ ಎದುರಾಯಿತು.

ನಾಪೋಕ್ಲು: ನಾಪೋಕ್ಲು, ಮೂರ್ನಾಡು ಸುತ್ತಮುತ್ತ ಗುರುವಾರ ಸಂಜೆ ಬಿರುಸಿನ ಮಳೆಯಾಯಿತು. ಪಟ್ಟಣ ಸೇರಿದಂತೆ ಬೇತು, ಕೊಟ್ಟಮುಡಿ ,ಪಾಲೂರು, ಬೆಟ್ಟಗೇರಿ, ಹೊದ್ದೂರು ಕಡೆಗಳಲ್ಲಿ ಬಿರುಸಿನ ಮಳೆಯಾಯಿತು.

ಗುಡುಗು ಸಹಿತ ಸುರಿದ ಮಳೆಗೆ ರಸ್ತೆಗಳು ಜಲಾವೃತಗೊಂಡವು. ಹಲವೆಡೆ ರಸ್ತೆ ತುಂಬಾ ನೀರು ಹರಿದು ಕೆರೆಯಂತಾಗಿತ್ತು. ಹಲವು ದಿನಗಳಿಂದ ಮಳೆ ಇಲ್ಲದೆ ಮಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಬಿರುಸಿನ ಮಳೆಯಿಂದ ಸಂತಸ ಪಟ್ಟರು.

ವೀರಾಜಪೇಟೆ: ವೀರಾಜಪೇಟೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಂಜೆ ವೇಳೆ ದಿಢೀರ್ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಭಾರೀ ಮಳೆಯಾಗಿದೆ. ಈ ವೇಳೆ ಜೋರಾಗಿ ಬೀಸಿದ ಗಾಳಿಗೆ ಗ್ರಾಮಾಂತರ ಪ್ರದೇಶವಾದ ಅರಮೇರಿ ವಿಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು ಸಾರ್ವಜನಿಕ ಸಂಚಾರಕ್ಕೆ ಅಡಚಣೆಯುಂಟಾಯಿತು.

ವೀರಾಜಪೇಟೆಯಿAದ ಮಡಿಕೇರಿಗೆ ತೆರಳುವ ಮುಖ್ಯ ರಸ್ತೆಯಾದ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ಭಾಗದ ಪೆಟ್ರೋಲ್ ಬಂಕ್ ಬಳಿ ಈ ಘಟನೆ ಸಂಭವಿಸಿದೆ. ರಸ್ತೆಗೆ ಮರ ಬಿದ್ದು ವಾಹನ ಸಂಚಾರ ಸ್ತಬ್ಧಗೊಂಡ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾದರು.

ವಲಯ ಅರಣ್ಯ ಅಧಿಕಾರಿ ಶಿವರಾಮ್ ಕೆ. ಹಾಗೂ ಉಪವಲಯ ಅರಣ್ಯ ಅಧಿಕಾರಿ ರಾಘವ ಅವರ ನೇತೃತ್ವದಲ್ಲಿ, ಇಲಾಖೆಯ ಸಿಬ್ಬಂದಿಗಳಾದ ಅನಿಲ್, ಮಹೇಶ್, ಸುರೇಶ್ ಮತ್ತು ಹರೀಶ್ ಅವರುಗಳು ಸ್ಥಳಕ್ಕೆ ಧಾವಿಸಿ ತ್ವರಿತ ಕಾರ್ಯಾಚರಣೆ ನಡೆಸಿದರು.

ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಕಡಿದು ಸಂಪೂರ್ಣವಾಗಿ ತೆರವುಗೊಳಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅರಣ್ಯ ಸಿಬ್ಬಂದಿಗಳ ಈ ಸಮಯೋÃಚಿತ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗುಡ್ಡೆಹೊಸೂರು: ಇಲ್ಲಿನ ನಿವಾಸಿ ಪಂಜಿಪಳ್ಳ ಯತೀಶ್ ಅವರ ಕಾರ್ ಶೆಡ್ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಯತೀಶ್ ಅವರ ಜಮೀನಿನಲ್ಲಿದ್ದ ಮೂರು ವಿದ್ಯುತ್ ಕಂಬಗಳು ನೆಲಕುರುಳಿವೆ. ಗುಡ್ಡೆಹೊಸೂರು, ಬಳ್ಳೂರು, ಬೆಟ್ಟಗೇರಿ ಗ್ರಾಮಗಳಲ್ಲಿ ಹಲವು ಮರಗಳು ನೆಲಕುರುಳಿವೆ. ಜಮೀನಿನಲಿದ್ದ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಈ ಅನಾಹುತ ಸಂಭವಿಸಿದೆ.

ಕಡAಗ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಸಿಲ್ವರ್ ಮರಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಗುರುವಾರ ಸಂಜೆ ಸುರಿದ ಮಳೆ ಮತ್ತು ಸಿಡಿಲಿನಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯ ನಿವಾಸಿ ಐತಿಚಂಡ ಪ್ರಕಾಶ್ ‘ಶಕ್ತಿ’ಗೆ ತಿಳಿಸಿದ್ದಾರೆ.