(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಸೆ. ೩೦: ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗಳು ಅಕ್ಟೋಬರ್ ೨೦ರೊಳಗೆ ಕಡ್ಡಾಯವಾಗಿ ಇಕೈವೈಸಿ ಮಾಡಬೇಕಿದ್ದು, ಆದರೆ ಸರ್ವರ್ ಸಮಸ್ಯೆಯಿಂದ ಪರದಾಡುವಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಪ್ರತಿನಿತ್ಯ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳ ಮುಂದೆ ಇಕೆವೈಸಿ ಮಾಡಲು ಜನರು ಗಂಟೆಗಟ್ಟಲೇ ನಿಲ್ಲುವಂತಾಗಿದೆ. ಇಕೆವೈಸಿ ಮಾಡಲು ಕೂಲಿಬಿಟ್ಟು ನ್ಯಾಯಬೆಲೆ ಅಂಗಡಿಗೆ ತೆರಳಿದರೆ ನೆಟ್ವರ್ಕ್, ಸರ್ವರ್ ಸಮಸ್ಯೆಯಿಂದಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು, ಮೈಸೂರು ಕೇರಳ ಇನ್ನಿತರ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಯುವಕರು, ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಪಡಿತರ ಚೀಟಿ ಇಕೆವೈಸಿ ಮಾಡಿಸಲು ತಮ್ಮೂರಿಗೆ ಬಂದಿದ್ದಾರೆ.

ಇಕೆವೈಸಿ ಆಗದಿದ್ದರೆ ಪಡಿತರ ಚೀಟಿ ರದ್ದುಗೊಳ್ಳುವ ಆತಂಕದಿAದ ಕೆಲಸ ಹಾಗೂ ಕಾಲೇಜುಗಳಿಗೆ ರಜೆ ಹಾಕಿ ಬಂದರೂ ಕೂಡ, ಸರ್ವರ್ ಸಮಸ್ಯೆಯಿಂದಾಗಿ ಇಕೆವೈಸಿ ಆಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮತ್ತೊಂದೆಡೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ಬೆಳಿಗ್ಗೆ ೭.೩೦ ಗಂಟೆಯಿAದ ೮ ಗಂಟೆಯವರೆಗೆ ಇಕೈವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳ ಮುಂದೆ ನಿಲ್ಲುವಂತಹ ದೃಶ್ಯ ಕಂಡುಬAದಿದೆ.

ಗ್ರಾಮೀಣ ಭಾಗದಲ್ಲಿ ನರಕಯಾತನೆ

ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ವೇಗ ಕಡಿಮೆ ಇರುವುದು, ದಿನವಿಡೀ ಸರ್ವರ್ ಡೌನ್ ಆಗುವುದು, ಬೆರಳಚ್ಚು ಹೊಂದಾಣಿಕೆಯಾಗದಿರುವುದು ಸಮಸ್ಯೆಗೆ ಕಾರಣವಾಗಿದೆ. ಬೆಳಗ್ಗೆ ೬ ಗಂಟೆಯಿAದಲೇ ನಿಲ್ಲುವ ಕೂಲಿ ಕಾರ್ಮಿಕ ವರ್ಗದ ಮಂದಿ ೩-೪ ದಿನ ಕೆಲಸಕ್ಕೆ ಹೋಗದೆ ನ್ಯಾಯಬೆಲೆ ಅಂಗಡಿ ಮುಂದೆ ಕಾಯಬೇಕಾದ ಪರಿಸ್ಥಿತಿ ಇದೆ. ಮಕ್ಕಳನ್ನು ಶಾಲೆ ಬಿಟ್ಟು ಕರೆತರುವುದು, ವೃದ್ಧರನ್ನು ಹೊತ್ತು ತರುವುದು ಮತ್ತೊಂದು ಸವಾಲಾಗಿದೆ.

೧,೦೭,೫೬೦ ಮಂದಿಯ ಇಕೆವೈಸಿ ಬಾಕಿ

ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಪಡಿತರ ಚೀಟಿಗೆ ಇಕೆವೈಸಿ ಆಗದ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿ ೧,೯೯,೮೦೧ ಸದಸ್ಯರ ಇಏಙಅ ಮಾಡಬೇಕಿದ್ದು, ಈವರೆಗೆ ೧,೦೧,೮೩೮ ಮಾತ್ರ ಆಗಿದೆ. ಇನ್ನೂ ೯೭,೯೬೩ ಬಾಕಿ ಇದೆ.

ಸೋಮವಾರಪೇಟೆ ತಾಲೂಕಿನಲ್ಲಿ ೪೪,೪೦೮ ರಲ್ಲಿ ೨೫,೧೪೧ ಪೂರ್ಣಗೊಂಡಿದ್ದು, ಇನ್ನೂ ೧೯,೨೬೭ ಮಂದಿ ಇಕೆವೈಸಿ ಮಾಡಬೇಕಿದೆ.

ಕುಶಾಲನಗರ ತಾಲೂಕಿನಲ್ಲಿ ೪೧,೯೯೮ ರಲ್ಲಿ ೨೩,೮೩೭ ಪೂರ್ಣಗೊಂಡಿದೆ. ೧೮,೧೬೧ ಮಂದಿ ಫಲಾನುಭವಿಗಳ ಇಕೆವೈಸಿ ಮಾಡಲು ಬಾಕಿ ಇದೆ.

ಮಡಿಕೇರಿ ತಾಲೂಕಿನಲ್ಲಿ ೪೬,೪೦೫ ಮಂದಿ ಫಲಾನುಭವಿಗಳ ಇಕೆವೈಸಿ ಮಾಡಬೇಕಿದ್ದು, ಇದರಲ್ಲಿ ೨೩,೧೬೫ ಪೂರ್ಣಗೊಂಡಿದ್ದು, ೨೩,೧೬೫ ಬಾಕಿ ಉಳಿದಿದೆ.

ವೀರಾಜಪೇಟೆ ತಾಲೂಕಿನಲ್ಲಿ ೩೭,೯೩೦ರಲ್ಲಿ, ೧೭,೯೮೬ ಪೂರ್ಣಗೊಂಡಿದ್ದು, ೧೯,೯೪೪ ಬಾಕಿ ಉಳದಿದೆ..ಪೊನ್ನಂಪೇಟೆ ತಾಲೂಕಿನಲ್ಲಿ ೨೯,೦೬೦ ರಲ್ಲಿ ಕೇವಲ ೧೧,೬೩೪ ಪೂರ್ಣಗೊಂಡಿದ್ದು, ೧೭,೪೨೬ ಬಾಕಿ ಇದೆ.