ನಾಪೋಕ್ಲು, ಸೆ. ೨೯: ಇಲ್ಲಿನ ಬೇತು ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಶಾಲೆಯ ವಿದ್ಯಾರ್ಥಿಗಳು ೨೦೨೬-೨೭ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
೧೪ ವರ್ಷದ ಒಳಗಿನ ಬಾಲಕಿಯರ ಬ್ಯಾಡ್ಮಿಂಟನ್: ಪೊನ್ನಮ್ಮ ಮತ್ತು ಯಾನ್ವಿ ಬೋಜಮ್ಮ ಜೋಡಿ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ವಿಭಾಗ ಮಟ್ಟದ (ಡಿವಿಷನಲ್) ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ೧೪ ವರ್ಷದ ಒಳಗಿನ ಬಾಲಕರ ಶಟಲ್ ಬ್ಯಾಡ್ಮಿಂಟನ್: ತಮ್ಮಯ್ಯ ಮತ್ತು ಆರವ್ ಅಯ್ಯಪ್ಪ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಲಯ ಮಟ್ಟದ ರಿಲೇ: ರಿಂಶ, ಅಕ್ಷಿತಾ, ಆಯಿಶ ಹಾಗೂ ಶಮ್ನ ತಂಡವು ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದೆ. ೧೬ ವರ್ಷದ ಒಳಗಿನ ಬಾಲಕರ ಎತ್ತರ ಜಿಗಿತ: ರಿಹಾನ್ ಅವರು ವಲಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.