ಶ್ರೀಮಂಗಲ, ಸೆ. ೨೬: ಜನರ ಮನೆಬಾಗಿಲಿಗೆ ಹೋಗಿ ಜನರ ಸಮಸ್ಯೆ ಬಗೆಹರಿಸಬೇಕೆಂಬ ಉದ್ದೇಶದಿಂದ ಪ್ರಜಾಸೇವೆ ಅಭಿಯಾನವನ್ನು ಜಾರಿಗೆ ತರಲಾಗಿದೆ. ಪ್ರತಿ ಮನೆಗೆ ಬರಲು ಸಾಧ್ಯವಿಲ್ಲ. ಆದರೆ ಜನರಿಗೆ ಹತ್ತಿರವಾಗುವಂತಹ ಹೋಬಳಿ ಮಟ್ಟದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನವನ್ನು ಶಿಸ್ತಿನಿಂದ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮನಸೋ ಇಚ್ಛೆ ಬರುವುದು ಹೋಗುವುದು ಮಾಡುವುದಾದರೆ ಸರ್ಕಾರದ ಮಟ್ಟದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ತಿಳಿಸಿದರು.
ಶ್ರೀಮಂಗಲದ ಕೃಷ್ಣ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ರಾಜ್ಯ ಸರ್ಕಾರದ ಪ್ರಜಾ ಸೇವೆ ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ಹೋಬಳಿಗಳಲ್ಲಿ ರಾಜ್ಯದ್ಯಂತ ಪ್ರತಿ ಶನಿವಾರ ಸರ್ಕಾರದ ಈ ಅಭಿಯಾನ ನಡೆಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆದೇಶ ನೀಡಿದ್ದು ಇದರಂತೆ ಮೊದಲು ಮಡಿಕೇರಿಯಲ್ಲಿ ನಡೆದಿದ್ದು ಇದೀಗ ಪೊನ್ನಂಪೇಟೆ ತಾಲೂಕಿನ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಶ್ರೀಮಂಗಲದಲ್ಲಿ ನಡೆಸಲಾಗುತ್ತಿದೆ, ಮುಂದಿನ ಶನಿವಾರ ಅಕ್ಟೋಬರ್ ೩ ಕ್ಕೆ ಬಲ್ಲಮಾವಟಿಯಲ್ಲಿ ಅಭಿಯಾನ ನಡೆಯಲಿದೆ ಎಂದು ವಿವರಿಸಿದರು.
ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಟ್ಟಾಗ ಸಿಗುವ ತೃಪ್ತಿಗಿಂತ ಬೇರೆ ಏನು ಬೇಕು ಎಂದು ಪ್ರಶ್ನಿಸಿದ ಅವರು ಶಿಷ್ಟಾಚಾರವನ್ನು ಅಧಿಕಾರಿಗಳು ಕಾಪಾಡಲೇಬೇಕು ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಅಭಿಯಾನವನ್ನು ಎಲ್ಲಾ ಇಲಾಖೆಯವರು ಗಂಭೀರವಾಗಿ ಪರಿಗಣಿಸಬೇಕು, ಶಿಸ್ತಿನಿಂದ ಭಾಗವಹಿಸಿ ಸಭೆ ಮುಗಿಯುವವರೆಗೆ ಇರಬೇಕು, ಅಹವಾಲುಗಳಿಗೆ ಅಧಿಕಾರಿಗಳೇ ಪರಿಹಾರ ನೀಡಿ ಇತ್ಯರ್ಥ ಪಡಿಸಬೇಕು.ಇದು ಅಭಿಯಾನದ ಪ್ರಕ್ರಿಯೆಯಾಗಿದೆ. ಏನು ಆಗುತ್ತದೆ ಆಗುವುದಿಲ್ಲ ಎಂಬುದನ್ನು ಸ್ಥಳದಲ್ಲಿಯೇ ಅರ್ಜಿದಾರರಿಗೆ ಹೇಳಬೇಕು. ಅಭಿಯಾನಕ್ಕೆ ಬಂದು ಪತ್ರ ಕೊಡುವುದು- ಹೋಗುವುದು ನಂತರ ಯಾರು ಕೇಳುವುದಿಲ್ಲ ಎಂದು ಆಗಬಾರದು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿ ಸೇರಿದ ಬೃಹತ್ ಜನ ಸಮುದಾಯ ಸರ್ಕಾರದ ಮೇಲೆ ಹಾಗೂ ಪ್ರತಿನಿಧಿಗಳ ಮೇಲೆ ಅಧಿಕಾರಿಗಳ ಮೇಲೆ ವಿಶ್ವಾಸ ಇಟ್ಟು ಬಂದಿದ್ದಾರೆ . ಇನ್ನು ಕೆಲವರಿಗೆ ಅಲ್ಲಿಗೆ ಯಾಕೆ ಹೋಗಬೇಕು ಯಾವುದೇ ಪರಿಹಾರ ಆಗೋದಿಲ್ಲ ಎಂಬ ಮನಸ್ಥಿತಿಯ ಜನರು ಇರುತ್ತಾರೆ. ನಿಮ್ಮ ಸಮಸ್ಯೆ ಬಗೆಹರಿಯಲು ನೀವು ನಮ್ಮ ಹತ್ತಿರ ಬರಬೇಕು, ನಾವು ಸಹ ನಿಮ್ಮ ಹತ್ತಿರ ಬರುತ್ತೇವೆ ಒಂದು ರೀತಿ ಸಂಪರ್ಕ ಸೇತುವೆಯಂತೆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಅರ್ಜಿಗಳಿಗೆ ಸ್ಥಳದಲ್ಲಿ ಆಗುವುದಾದರೆ ಪರಿಹಾರ ನೀಡುತ್ತೇವೆ ಸಾಧ್ಯವಾಗದಿದ್ದರೆ ಅವುಗಳ ಪರಿಹಾರಕ್ಕೆ ಸಮಯ ನಿಗದಿಪಡಿಸಲಾಗಿದೆ. ಅದರೊಳಗೆ ಪರಿಹರಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳ ಗೈರು : ಗರಂ ಆದ ಶಾಸಕರು!
ಜಿಲ್ಲೆಯಲ್ಲಿ ಅತ್ಯಂತ ಸೂಕ್ಷö್ಮತೆ ಹಾಗೂ ಹೆಚ್ಚು ಸಮಸ್ಯೆಗಳು ಎದುರಾಗುತ್ತಿರುವ ಅರಣ್ಯ ಇಲಾಖೆಯ ಎಸಿಎಫ್, ಡಿಎಫ್ಓ ಮಟ್ಟದ ಅಧಿಕಾರಿಗಳು ಸಭೆಗೆ ಹಾಜರಾಗದಿದ್ದಕ್ಕೆ ಶಾಸಕರು ಗರಂ ಆದರು. ಗೈರು ಆದ ಅಧಿಕಾರಿಗಳ ಮೇಲೆ ಕಿಡಿಕಾರಿದ ಅವರು ಈ ತರ ಮಾಡಿಯೇ ಜನರ ವಿಶ್ವಾಸವನ್ನು ಅರಣ್ಯ ಇಲಾಖೆ ಕಳೆದುಕೊಂಡಿದ್ದು, ಇದನ್ನು ಅರ್ಥಮಾಡಿಕೊಳ್ಳಬೇಕು. ಅಧಿಕಾರ ವ್ಯಾಪ್ತಿಯಲ್ಲಿ ಜನರ ವಿಶ್ವಾಸಗಳಿಸಿ ಕೆಲಸ ಮಾಡಿದರೆ ಮಾತ್ರ ಜನ ಒಪ್ಪುತ್ತಾರೆ. ಪದೇಪದೇ ಹೇಳುವ ಅಗತ್ಯವಿಲ್ಲ ಇದನ್ನು ಯಾರು ಗಮನಕ್ಕೆ ತರಬೇಕು ತಂದು ಕ್ರಮ ಜರುಗಿಸಲು ಉಪವಿಭಾಗಾಧಿಕಾರಿ ನಿತಿನ್ ಚಿಕ್ಕಿ ಅವರಿಗೆ ಸೂಚಿಸಿದರು. ಇಲ್ಲ ಅಂದರೆ ಉಸ್ತುವಾರಿ ಸಚಿವರಿಗೆ ನಾನೇ ಕ್ರಮ ಜರುಗಿಸಲು ತಿಳಿಸುತ್ತೇನೆ ಎಂದರು. ಅಧಿಕಾರಿಗಳಿಲ್ಲದೆ ಜನರ ಸಮಸ್ಯೆ ಹೇಗೆ ಪರಿಹರಿಸಬೇಕು ನಾನೊಬ್ಬನೇ ಪರಿಹರಿಸಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದ ಅವರು ಆಕ್ರೋಶ ವ್ಯಕ್ತಪಡಿಸಿದರು. ಅಭಿಯಾನಕ್ಕೆ ೧೩೫ ಅರ್ಜಿಗಳು ಬಂದಿದ್ದನ್ನು ಟೋಕನ್ ಮೂಲಕ ಜೇಷ್ಠತೆಯ ಆಧಾರದಲ್ಲಿ ಪ್ರತಿಯೊಬ್ಬರ ಅರ್ಜಿಗಳನ್ನು ಸ್ಥಳದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಉಪ ವಿಭಾಗಾಧಿಕಾರಿ ನಿತಿನ್ ಚಿಕ್ಕಿ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಸಂಜನಾ, ವಿರಾಜಪೇಟೆ ತಾಲೂಕು ತಹಸಿಲ್ದಾರ್ ಪ್ರವೀಣ್ ಕುಮಾರ್, ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ರಾಜೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸುಮಂಗಲ ಹಿರೇಮನಿ ವೇದಿಕೆಯಲ್ಲಿ ಹಾಜರಿದ್ದರು. ಇದಲ್ಲದೆ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಬಾಳೆಲೆ ಪ್ರತಿಭಾ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ನಾಯ್ಡು ಕಾರ್ಯಕ್ರಮ ನಿರ್ವಹಿಸಿದರು.
-ಹರೀಶ್ ಮಾದಪ್ಪ