(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಸೆ. ೨೬: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಲಾಜಿಕಲ್ ಡಿಸ್ಕೆçಪೆನ್ಸಿ ಹಾಗೂ ನೋ ಮ್ಯಾಪಿಂಗ್ ಅಡಿಯಲ್ಲಿ ಗುರುತಿಸಲಾಗಿರುವ ಕೊಡಗು ಜಿಲ್ಲೆಯ ೫೮,೮೮೩ ಮತದಾರರಿಗೆ ನೋಟೀಸ್ ವಿತರಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ೫೬೭ ಮತಗಟ್ಟೆಗಳಿದ್ದು, ೫೬೨ ಮತಗಟ್ಟೆಗಳ ಮತದಾರರಿಗೆ ಒಟ್ಟು ೫೮,೮೮೩ ನೋಟಿಸ್ಗಳನ್ನು ಜನರೇಟ್ ಮಾಡಲಾಗಿತ್ತು. ಜನರೇಟ್ ಆದ ಎಲ್ಲಾ ೫೮,೮೮೩ ನೋಟಿಸ್ಗಳನ್ನು ವಿತರಣೆ ಮಾಡಲಾಗಿದೆ.ರಾಜ್ಯದಲ್ಲಿ ೧೦೦% ನೋಟಿಸ್ ವಿತರಣೆ ಮಾಡಿದ ೧೧ ಜಿಲ್ಲೆಗಳಲ್ಲಿ ಕೊಡಗು ಕೂಡ ಒಂದಾಗಿದೆ.
ವಿತರಣೆಯಾದ ನೋಟಿಸ್ಗಳ ಪೈಕಿ ಇದುವರೆಗೆ ೪೩,೦೯೬ ಮಂದಿಯ ‘ಹಿಯರಿಂಗ್’ ಪ್ರಕ್ರಿಯೆ ಪೂರ್ಣಗೊಂಡಿದ್ದು, ೧೫,೭೮೭ ಮಂದಿಯ ಹಿಯರಿಂಗ್ ಬಾಕಿ ಇದೆ. ಹಿಯರಿಂಗ್ ಪ್ರಕ್ರಿಯೆಯಲ್ಲಿ ಜಿಲ್ಲೆ ಶೇ.೭೩.೧೯ ರಷ್ಟು ಪ್ರಗತಿ ಸಾಧಿಸಿದೆ.
ಹೊಸ ಮತದಾರರ ನೋಂದಣಿಗೆ ೫,೪೧೬ ಅರ್ಜಿ ಸಲ್ಲಿಕೆ
ಜೂನ್ ೧೬ ರಿಂದ ಸೆಪ್ಟೆಂಬರ್ ೨೪ ರವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೨೪,೦೫೩ ಫಾರ್ಮ್ಗಳು ಸಲ್ಲಿಕೆಯಾಗಿವೆ. ಹೊಸ ಮತದಾರ ನೋಂದಣಿ (ಈಔಖಒ-೬) ೫,೪೧೬, ವಿದೇಶದಲ್ಲಿರುವ ಮತದಾರರ ನೋಂದಣಿ (ಈಔಖಒ-೬ಂ) ೨೨, ಹೆಸರು ತೆಗೆಯಲು (ಈಔಖಒ-೭): ೬೯೬, ತಿದ್ದುಪಡಿ ಮತ್ತು ಸ್ಥಳ ಬದಲಾವಣೆಗೆ (ಈಔಖಒ-೮): ೧೭,೯೧೯ ಮತದಾರರು ಅರ್ಜಿ ಸಲ್ಲಿಸಿದ್ದಾರೆ.