ಜಪಾನ್, ಸೆ. ೨೬: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸ್ಕಾ÷್ವಶ್ ಕ್ರೀಡೆಯಲ್ಲಿ ಮೂಲತಃ ಕೊಡಗಿನವರಾದ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರು ಮಿಕ್ಸ್÷್ಡ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಫಿಲಿಫೈನ್ಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಜೋಶ್ನಾ - ವೇಲಾವನ್ ಜೋಡಿ ೧೧-೩, ೧೧-೫ ಅಂಕಗಳ ಮೂಲಕ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಸೆಮಿಫೈನಲ್‌ನಲ್ಲಿ ಹಾಂಗ್‌ಕಾAಗ್ ವಿರುದ್ಧ ೧೧-೧೦, ೨-೧೧, ೧೧-೧೦ ಅಂಕಗಳ ಮೂಲಕ ೨-೧ ಸೆಟ್‌ಗಳ ಅಂತರದಲ್ಲಿ ಈ ಜೋಡಿ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿ ಪಡೆದುಕೊಂಡಿದೆ.

ಸ್ಕಾ÷್ವ್ವಶ್‌ನಲ್ಲಿ ಸೆಮಿಫೈನಲ್‌ನಲ್ಲಿ ಪರಾಭವಗೊಳ್ಳುವ ೨ ತಂಡಗಳಿಗೂ ಕಂಚು ಪದಕ ನೀಡುವುದರಿಂದ ಜೋಶ್ನಾ ಅವರಿಗೆ ಕಂಚಿನ ಪದಕ ದೊರಕಿದ್ದು, ಇದು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅವರ ೬ನೇ ಪದಕವಾಗಿದೆ.