ವೀರಾಜಪೇಟೆ, ಸೆ. ೨೫: ಹಬ್ಬಗಳನ್ನು ಎಲ್ಲರ ಜೊತೆಯಲ್ಲಿ ಸೇರಿ ಆಚರಿಸುವುದರಿಂದ ಸಿಗುವಂತಹ ಸಂತಸವೇ ಬೇರೆ ಎಂದು ವೀರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಕೈಲ್ ಪೊಳ್ದ್ ನಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೈಲ್ ಪೊಳ್ದ್ ಹಬ್ಬವು ತನ್ನದೇ ಆದ ವೈಶಿಷ್ಟ÷್ಯಗಳನ್ನು ಹೊಂದಿದೆ. ಕೃಷಿ ಕ್ಷೇತ್ರಕ್ಕೆ ಪ್ರಾಮುಖ್ಯತೆಯನ್ನು ನೀಡುವ ಹಬ್ಬ ಇದಾಗಿದ್ದು ಜನರು ಎಲ್ಲರೂ ಒಂದೆಡೆ ಸೇರಿ ಸಂಭ್ರಮದಿAದ ಆಚರಿಸುತ್ತಾರೆ. ಇಂದು ನಾವು ನಮ್ಮ ಒಕ್ಕೂಟದ ವತಿಯಿಂದ ಈ ಹಬ್ಬದ ಆಚರಣೆ ಸಂಭ್ರಮದಲ್ಲಿದ್ದು ಸರ್ವ ಸದಸ್ಯರು ಸಹಕಾರವನ್ನು ನೀಡಿರುತ್ತಾರೆ. ಒಕ್ಕೂಟದ ಸದಸ್ಯರೆಲ್ಲರೂ ಸಭೆ ಸಮಾರಂಭಗಳಿಗೆ ಹಾಜರಾಗಬೇಕು. ಹಾಜರಾದಾಗ ಮಾತ್ರ ಮಾಹಿತಿಗಳನ್ನು ತಿಳಿಸಲು ಸುಲಭವಾಗುತ್ತದೆ. ಸದಸ್ಯರು ತಮ್ಮ ಮನೆಯಲ್ಲಿ ದಿನನಿತ್ಯದ ಕರ್ತವ್ಯಗಳನ್ನು ನಿಭಾಯಿಸುವ ರೀತಿಯಲ್ಲಿ ಒಕ್ಕೂಟದ ಕೆಲಸವನ್ನು ಸಹ ನಿಭಾಯಿಸಿದಲ್ಲಿ ಮತ್ತಷ್ಟು ಯಶಸ್ಸು ಕಾಣಬಹುದು ಎಂದು ಹೇಳಿದರು.

ಭೋಜಕ್ಕ ತಂಡದ ನಾಯಕಿ ಮಾಳೇಟಿರ ಸ್ವಾತಿ ಕುಶಾಲಪ್ಪ ಅವರು ಹಬ್ಬದ ಸಂದೇಶವನ್ನು ನೀಡಿ ಶುಭ ಕೋರಿದರು. ವಾಲಗತಾಟ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನವನ್ನು ಐಚಂಡ ವೀಣಾ, ದ್ವಿತೀಯ ಬಹುಮಾನವನ್ನು ಪುಡಿಯಂಡ ಲಲಿತ, ತೃತೀಯ ಬಹುಮಾನವನ್ನು ಕರೋಟಿರ ಶಶಿ ಸುಬ್ರಮಣ್ಯ ಅವರು ಪಡೆದುಕೊಂಡರು.

ಸಂಘದ ಸದಸ್ಯರುಗಳಿಗೆ ಸಾಂಸ್ಕöÈತಿಕ ಹಾಗೂ ಆಟೋಟ ಸ್ಪರ್ಧೆಗಳನ್ನು ಭೋಜಕ್ಕ ತಂಡದವರು ನಡೆಸಿಕೊಟ್ಟರು. ಕಾಲ್ ಚೆಂಡು ಪಂದ್ಯಾಟದಲ್ಲಿ ಕುಂಞÂರ ಚಿತ್ರ ಪ್ರಥಮ, ಪುಗ್ಗೆರ ಭವಾನಿ ದ್ವಿತೀಯ, ಹಾಗೂ ಕುಪ್ಪಚಿರ ಕವಿತಾ ತೃತೀಯ ಬಹುಮಾನವನ್ನು ಪಡೆದುಕೊಂಡರು. ತೆಂಗಿನಕಾಯಿ ಗುರಿ ಸ್ಪರ್ಧೆಯಲ್ಲಿ ಮಾಚೆಟ್ಟಿರ ರುಕ್ಮಿಣಿ ಪ್ರಥಮ, ಅಲ್ಲಪಂಡ ತಾರ ದ್ವಿತೀಯ ಬಹುಮಾನವನ್ನು ಪಡೆದುಕೊಂಡರು.

ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಕುಂಞÂರ ಚಿತ್ರ ಚರ್ಮಣ ವರದಿ ಮಂಡಿಸಿದರು. ತಾತಂಡ ಯಶು ಕಬೀರ್ ಲೆಕ್ಕ ಪತ್ರವನ್ನು ಮಂಡಿಸಿದರು. ಮಂಡೇಪAಡ ಶರೀನ್ ಹಾಗೂ ಕರ್ನಂಡ ಪ್ರಮೀಳಾ ಪ್ರಾರ್ಥಿಸಿ, ಐನಂಡ ಜಮುನಾ ಸ್ವಾಗತಿಸಿ, ಕರೋಟಿರ ಶಶಿ ಸುಬ್ರಮಣ್ಯ ನಿರೂಪಿಸಿ, ಕರ್ನಂಡ ಪ್ರಮೀಳಾ ಜಯ ವಂದಿಸಿದರು. ತದನಂತರ ಸದಸ್ಯರುಗಳು ತಾವು ತಯಾರಿಸಿದ ವಿವಿಧ ವಸ್ತುಗಳ ಮಳಿಗೆಯನ್ನು ಇಟ್ಟರು. ಈ ಸಂದರ್ಭದಲ್ಲಿ ವೀರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.