ಮಡಿಕೇರಿ, ಸೆ. ೨೪: ಮಡಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಮಡಿಕೇರಿಯ ಭಾಲಭವನದಲ್ಲಿ ಸಂಘದ ಅಧ್ಯಕ್ಷ ಮುದ್ದಂಡ ಡಿ. ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬ್ಯಾಂಕ್ ಈ ಸಾಲಿನಲ್ಲಿ ರೂ. ೧೩.೯೬ ಲಕ್ಷ ಲಾಭ ಗಳಿಸಿರುವ ಮಾಹಿತಿ ನೀಡಲಾಯಿತು. ಅಧ್ಯಕ್ಷ ಎಂ.ಡಿ. ಬೋಪಣ್ಣ ಮಾತನಾಡಿ, ಸಂಘವು ಈಗ ಲಾಭದ ಹಂತಕ್ಕೆ ಬಂದಿರುತ್ತದೆ ಹಾಗೂ ನೂತನ ಕಟ್ಟಡ ಕಟ್ಟುವ ಕೆಲಸವನ್ನು ಪ್ರಾರಂಭ ಮಾಡಿದ್ದೇವೆ. ಇನ್ನು ಎರಡು ವರ್ಷದಲ್ಲಿ ಕಟ್ಟಡದ ಕೆಲಸ ಮುಗಿಯುತ್ತದೆ. ಎಲ್ಲರು ಧನ ಸಹಾಯ ಮಾಡುವುದರ ಮೂಲಕ ಪ್ರೋತ್ಸಾಹ ನೀಡಬೇಕು ಎಂದರು.
ಆಡಳಿತ ಮಂಡಳಿ ಸದಸ್ಯರುಗಳಾದ ಅಯಲಪಂಡ ಪಿ. ಕಾರ್ಯಪ್ಪ, ಕನ್ನಿಕಂಡ ಎಂ. ಪೆಮ್ಮಯ್ಯ, ಯಾಲದಾಳು ಆರ್. ಪೂಣಚ್ಚ, ಕುಕ್ಕೇರ ಟಿ. ಲಕ್ಷö್ಮಣ, ಬಿ.ಕೆ. ಈರಪ್ಪ, ಕೊಕ್ಕಲೆರ ಕೆ. ಅಯ್ಯಪ್ಪ, ದೇವಜನ ಎಂ. ಭವಾನಿ, ಕೆ.ಸ್. ಸುರೇಶ್ ಕುಮಾರ್, ಪಿ. ಗುರುವ, ಪುದಿಯತಂಡ ಜಿ. ಸೋಮಯ್ಯ, ಎಸ್.ಡಿ. ಶಶಿಕುಮಾರ್, ಸಹಕಾರ ಸಂಘಗಳ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮೇಲ್ವಿಚಾರಕರು ಹಾಜರಿದ್ದರು.
ಕೆ.ಎಂ. ಪೆಮ್ಮಯ್ಯ ಸ್ವಾಗತಿಸಿದರು. ಪಿ.ಜೆ. ಸೋಮಯ್ಯ ವಂದಿಸಿದರು.