ಬೆAಗಳೂರು, ಸೆ. ೨೪: ಕೊಡಗು ಗೌಡ ಸಮಾಜ ಬೆಂಗಳೂರು ವತಿಯಿಂದ ಅ. ೪ ರಂದು ಬೆಂಗಳೂರಿನÀ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ಆಯೋಜಿಸಿರುವ ಕೈಲ್ ಮುಹೂರ್ತ ಜಂಬರ-೨೦೨೬ ಕಾರ್ಯಕ್ರಮ ಸಂಬAಧ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯ ದರ್ಶಿ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು.

ಕೊಡಗು ಗೌಡ ಸಮಾಜದ ಪದಾಧಿಕಾರಿಗಳು ವಿಧಾನಸೌಧದಲ್ಲಿ ಶಾಸಕ ಪೊನ್ನಣ್ಣ ಅವರನ್ನು ಭೇಟಿ ಮಾಡಿ, ಕೈಲ್ ಮುಹೂರ್ತ ಜಂಬರ-೨೦೨೬ರ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಈ ಸಂದರ್ಭ ಅಧ್ಯಕ್ಷ ನಿ. ವಿಂಗ್ ಕಮಾಂಡರ್ ಅಯ್ಯೇಟೀರ ಮನೋಜ್ ಕುಮಾರ್, ಉಪಾಧ್ಯಕ್ಷ ಕುದುಪಜೆ ಮೋಹನ್, ಗೌರವ ಕಾರ್ಯದರ್ಶಿ ಬೇಕಲ್ ಬಿಪಿನ್, ಜಂಟಿ ಕಾರ್ಯದರ್ಶಿ ಗೋವಿಂದಮ್ಮನ ಪ್ರವೀಣ್ ಕುಮಾರ್, ಸದಸ್ಯ ಕೆ.ಆರ್. ದಿನೇಶ್ ಹಾಗೂ ಕಾನೂನು ಸಲಹೆಗಾರ ನಿಡ್ಯಮಲೆ ಪ್ರಕಾಶ್ ಉಪಸ್ಥಿತರಿದ್ದರು.