ಮಡಿಕೇರಿ, ಸೆ. ೨೪: ದೇವಣಗೇರಿ ಬಿ.ಸಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಮುಕ್ಕಾಟಿರ ಐ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲಿಬೆಟ್ಟ ಚೆಷೈರ್ ಹೋಂನ ಅಧ್ಯಕ್ಷರಾದ ಗೀತಾ ಚಂಗಪ್ಪ ಭಾಗವಹಿಸಿದ್ದರು. ಅವರು ವಿಶೇಷಚೇತನ ವಿದ್ಯಾರ್ಥಿಗಳಿಗೆ ತಾವು ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ವೀಡಿಯೋ ಮುಖಾಂತರ ವಿವರಣೆ ನೀಡಿದರು.
ಚೆಷೈರ್ ಹೋಂನ ಕಾರ್ಯದರ್ಶಿ ಆಶಾ ಸುಬ್ಬಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದರ ಮೂಲಕ ಪ್ರೋತ್ಸಾಹ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ದತ್ತಿನಿಧಿಯ ಮೊಬಲಗನ್ನು ವಿತರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಕ್ಕಾಟಿರ ಐ ನಾಣಯ್ಯ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳಬೇಕು. ೧೦ನೇ ತರಗತಿಯ ನಂತರ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುವಂತೆ ಕರೆ ನೀಡಿದರು. ವಿದ್ಯಾರ್ಥಿಗಳು ವೇದಿಕೆಯಲ್ಲಿ ಬಂದು ಮಾತನಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ತಪ್ಪಾದರು ಪರವಾಗಿಲ್ಲ ಮುಂದೆ ಸರಿಪಡಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಕೂಡ ವೇದಿಕೆಯಲ್ಲಿ ಬಂದು ಮಾತನಾಡುವಂತೆ ಕರೆ ನೀಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮ್ಮ ಅಂಕ ಪಡೆದು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಾಕ್ಷರಾದ ಚೇಂದAಡ ಜಿ ಪೊನ್ನಪ್ಪ, ಖಜಾಂಚಿ ಅಲ್ಲಪಂಡ ಎ ಉತ್ತಪ್ಪ, ಕಾರ್ಯನಿರ್ವಾಹಕರಾದ ಕರ್ನಂಡ. ಎನ್ ಬೊಳ್ಳಮ್ಮ, ಆಡಳಿತಾಧಿಕಾರಿ ಪಿ.ಎ ಲಕ್ಷಿö್ಮÃನಾರಾಯಣ, ಸದಸ್ಯರುಗಳಾದ ಬೀನಂಡ ಎಸ್ ಪೂಣಚ್ಚ, ಮೂಕೋಂಡ ಸಿ. ನಂಜಪ್ಪ, ವಕ್ಕಲಿಗರ ಭಾರತಿ, ಮುಖ್ಯ ಶಿಕ್ಷಕರಾದ ಹೆಚ್.ಡಿ ಲೋಕೇಶ, ಸ.ಮಾ.ಪ್ರಾ. ಶಾಲಾ ಮುಖ್ಯ ಶಿಕ್ಷಕರಾದ ಸುಧಾ, ಸಿಬ್ಬಂದಿ ವರ್ಗ ಹಾಜರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸ್ವಾಗತವನ್ನು ಶಾಲಾ ಮುಖ್ಯಶಿಕ್ಷಕರಾದ ಹೆಚ್.ಡಿ ಲೋಕೇಶ ನೆರೆವೇರಿಸಿದರು. ನಿರೂಪಣೆಯನ್ನು ಶಿಕ್ಷಕಿ ವೈ.ಪ್ರಮೀಳಾ ಕುಮಾರಿ ನೆರವೇರಿಸಿದರು. ಶಿಕ್ಷಕಿ ವಿ.ಆರ್ ಸಂದೀಪ ವಂದಿಸಿದರು.