ಜಪಾನ್, ಸೆ. ೨೪: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕೊಡಗಿನವರಾದ ಮಾಚೆಟ್ಟಿರ ಪೂವಮ್ಮ ಅವರು ಮಿಕ್ಸ್÷್ಡ ರಿಲೇ ೪x೪೦೦ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
ವಿಶಾಲ್, ವಿತ್ಯ, ಮನು ಹಾಗೂ ಪೂವಮ್ಮ ಅವರನ್ನು ಒಳಗೊಂಡ ಭಾರತ ತಂಡವು ೩ ನಿಮಿಷ ೧೪ ಸೆಕೆಂಡ್ ೪೬ ಮಿಲಿಸೆಕೆಂಡ್‌ನಲ್ಲಿ ರಿಲೇ ಪೂರೈಸಿ ೨ನೇ ಸ್ಥಾನ ಗಳಿಸಿದೆ. ಈ ಮೂಲಕ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಒಟ್ಟು ಪದಕ ಸಂಖ್ಯೆ ೧೭ಕ್ಕೇರಿದೆ (೧ ಚಿನ್ನ, ೭ ಬೆಳ್ಳಿ, ೯ ಕಂಚು).
ಏಷ್ಯನ್ ಗೇಮ್ಸ್ನಲ್ಲಿ ಪೂವಮ್ಮ ಅವರು ೨೦೧೪ರ ಮಹಿಳೆಯರ ರಿಲೇಯಲ್ಲಿ ಹಾಗೂ ೨೦೧೮ರ ಮಹಿಳೆಯರ ಹಾಗೂ ಮಿಕ್ಸ್÷್ಡ ರಿಲೇಯಲ್ಲಿ ಚಿನ್ನ ಪಡೆದಿದ್ದರು. ೨೦೧೪ರ ೪೦೦ ಮೀಟರ್ ಓಟದಲ್ಲಿ ಕಂಚು ಪದಕ ಪಡೆದಿದ್ದರು. ಇಂದು ಅವರಿಗೆ ಜಪಾನ್‌ನಲ್ಲಿ ದೊರೆತ ಪದಕ ಏಷ್ಯನ್ ಗೇಮ್ಸ್ನಲ್ಲಿನ ೫ನೇ ಪದಕವಾಗಿದೆ.