ಮಡಿಕೇರಿ, ಸೆ. ೨೩: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಕೊಡಗು ಜಾನಪದ ಪರಿಷತ್ ಸಹಯೋಗದಲ್ಲಿ ೫ನೇ ವರ್ಷದ ಜಾನಪದ ದಸರಾವನ್ನು ಅಕ್ಟೋಬರ್ ೧೮ ರಂದು ಆಯೋಜಿಸಲಾಗಿದೆ ಎಂದು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮತ್ತು ಜಾನಪದ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ಅ. ೧೮ ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಾನಪದ ಕಲಾ ಪ್ರದ±ðನಗಳು ಆಯೋಜಿಸಲ್ಪಟ್ಟಿವೆ. ಇದೇ ಸಂದರ್ಭ ವೇದಿಕೆ ಮುಂಬದಿ ಜಾನಪದ ವಸ್ತು ಪ್ರದರ್ಶನ, ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಜಾನಪದ ಕಲಾಜಾಥಾ ಕೂಡ ಜರುಗಲಿದೆ. ಜಾನಪದ ದಸರಾ ಸಂದರ್ಭ ಕೊಡಗಿನ ಜಾನಪದ ಕಲಾವಿದರಿಗೆ ವೈವಿಧ್ಯಮಯ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಡಗಿನ ಜಾನಪದ ಕಲಾತಂಡಗಳು, ಕಲಾವಿದರು ಜಾನಪದ ದಸರಾ ಸಂದರ್ಭ ನೀಡಲು ಇಚ್ಚಿಸುವ ಪ್ರದರ್ಶನದ ಬಗ್ಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಆಸಕ್ತ ಕಲಾವಿದರು, ಕಲಾತಂಡಗಳು ಅಕ್ಟೋಬರ್ ೬ ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಲು ಎಸ್.ಐ. ಮುನೀರ್ ಅಹ್ಮದ್ ಪ್ರಧಾನ ಕಾರ್ಯದರ್ಶಿ, ಜಾನಪದ ಪರಿಷತ್, ೯೮೮೬೧೮೧೬೧೩, ಎಸ್.ಎಸ್. ಸಂಪತ್ ಕುಮಾರ್, ಖಜಾಂಚಿ ಜಾನಪದ ಪರಿಷತ್ - -೯೪೪೮೬೧೪೯೯೯ ಇವರನ್ನು ಸಂಪರ್ಕಿಸಬಹುದಾಗಿದೆ.