ಮಡಿಕೇರಿ, ಸೆ. ೨೩: ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಇತ್ತೀಚೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೧೪ ವರ್ಷದೊಳಗಿನ ಬಾಲಕಿಯರ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯಾವಳಿಯಲ್ಲಿ ಕೂಡಂಡ ನಿಲೀಶಾ ಹಾಗೂ ಮಂಡಿರ ಪಾಯಲ್ ಜೋಡಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತರಬೇತುದಾರರಾಗಿ ಗೋಣಿಕೊಪ್ಪದ ರಘುರಾಜ್ ತರಬೇತಿ ನೀಡುತ್ತಿದ್ದಾರೆ. ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ೭ನೇ ತರಗತಿ ವಿದ್ಯಾರ್ಥಿನಿ ನಿಲೀಶಾ ಹೊದ್ದೂರು ಗ್ರಾಮದ ಕೂಡಂಡ ಗಿರೀಶ್ ಹಾಗೂ ಶೃತಿ ದಂಪತಿ ಪುತ್ರಿ. ನಾಪೋಕ್ಲು ಎಕ್ಸೆಲ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಪಾಯಲ್ ನೆಲಜಿ ಗ್ರಾಮದ ಮಂಡಿರ ಸುಭಾಷ್ ಮತ್ತು ಜಸ್ಮಿ ದಂಪತಿ ಪುತ್ರಿ.