ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಸೆ. ೨೩: ಕಸ್ತೂರಿರಂಗನ್ ವರದಿಯ ಅನುಷ್ಠಾನಕ್ಕಾಗಿ ಹೊರಡಿಸಲಾದ ೭ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ನಿನ್ನೆ ರಾಜ್ಯ ಸರ್ಕಾರವು ನಿರ್ಣಯ ಕೈಗೊಂಡಿದ್ದರೂ, ಇದೀಗ ಅರಣ್ಯ ಪ್ರದೇಶಗಳು ಹಾಗೂ ಅವುಗಳ ಸುತ್ತಮುತ್ತಲಿನ ಅರಣ್ಯ ಭೂಮಿ, ಬಫರ್ ವಲಯಗಳು ಮತ್ತು ಪರಿಸರ ಸೂಕ್ಷ್ಮ ವಲಯಗಳ (ಇSಂ) ಬಗ್ಗೆ ವಿವರವಾದ ಸಮೀಕ್ಷೆ ನಡೆಸುವುದಾಗಿ ಘೋಷಿಸಿದೆ. ಆದರೆ ಈ ಸಮೀಕ್ಷೆಯ ಕಾರಣದಿಂದ ಮಲೆನಾಡು ಭಾಗದ ನಾಲ್ಕು ಜಿಲ್ಲೆಗಳ ಕಾಫಿ ತೋಟಗಳ ಮಾಲೀಕರು ಆತಂಕಗೊAಡಿದ್ದಾರೆ. ಏಕೆಂದರೆ ಸುಮಾರು ಶೇ. ೩೦ರಷ್ಟು ಕಾಫಿ ತೋಟಗಳು ಅರಣ್ಯ ಮತ್ತು ಕಂದಾಯ ಇಲಾಖೆಯ ಒತ್ತುವರಿ ಮಾಡಲಾದ ಭೂಮಿಯಲ್ಲಿರುವುದರಿಂದ ಈ ಬೆಳವಣಿಗೆಯು ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿನ ಕಾಫಿ ತೋಟಗಳು ಅರಣ್ಯ ಭೂಮಿಗೆ ಹೊಂದಿಕೊAಡಿವೆ ಎಂದು ಕಾಫಿ ಮಂಡಳಿಯ ಮೂಲಗಳು ತಿಳಿಸಿವೆ. “ಹಿಂದೆ ಕಾಫಿ ಕೃಷಿಗೆ ಬಳಸಲಾಗುತ್ತಿದ್ದ ಭೂಮಿಯು ಅರಣ್ಯ ಮತ್ತು ಕಂದಾಯ ಭೂಮಿಯ ಭಾಗವಾಗಿದ್ದರೂ, ಅದು ಸಮಸ್ಯೆಯಾಗಿರಲಿಲ್ಲ. ಆದರೆ ಈಗ ಮಾನವ-ಪ್ರಾಣಿ ಸಂಘರ್ಷ ಹೆಚ್ಚುತ್ತಿರುವುದು ಹಾಗೂ ಪರಿಸರ ಸೂಕ್ಷ್ಮ ವಲಯ (ಇSಂ) ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳ ಘೋಷಣೆಯಿಂದಾಗಿ, ಕಾಫಿ ತೋಟದ ಪ್ರದೇಶವು ಕಳವಳಕಾರಿ ವಿಷಯವಾಗುತ್ತಿದೆ,” ಎಂದು ಮೂಲವೊಂದು ತಿಳಿಸಿದೆ.

“ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಇಂತಹ ಸಮಸ್ಯೆ ಇರುವ ಪ್ರದೇಶಗಳು ಹೆಚ್ಚಾಗಿವೆ. ಇಲ್ಲಿನ ಒತ್ತುವರಿಗಳು ಇನ್ನೂ ಕಾನೂನುಬದ್ಧಗೊಂಡಿಲ್ಲ. ಒಂದು ವೇಳೆ ಈ ಭೂಮಿಯನ್ನು ವಶಪಡಿಸಿಕೊಂಡರೆ, ರಾಜ್ಯದಲ್ಲಿ ಕಾಫಿ ತೋಟದ ವಿಸ್ತೀರ್ಣ ಕಡಿಮೆಯಾಗುತ್ತದೆ ಮತ್ತು ಇದು ಕಾಫಿ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೆ, ಇSಂ ಕುರಿತ ಕಸ್ತೂರಿರಂಗನ್ ವರದಿಯ ಅಧಿಸೂಚನೆಯನ್ನು ಜಾರಿಗೆ ತಂದರೆ, ಶೇ. ೩೦-೩೫ರಷ್ಟು ಕಾಫಿ ಬೆಳೆಯುವ ಪ್ರದೇಶವು ಸಂರಕ್ಷಿತ ವಲಯಗಳ ವ್ಯಾಪ್ತಿಗೆ ಬರುವುದರಿಂದ ಅದನ್ನು ಕಳೆದುಕೊಳ್ಳಬೇಕಾಗುತ್ತದೆ,” ಎಂದು ಮೂಲವು ಹೇಳಿದೆ.

ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಫಿ ಮಂಡಳಿಯು ವಿವರವಾದ ಭೂ ಸಮೀಕ್ಷೆಯನ್ನು ಕೈಗೊಳ್ಳುತ್ತಿರುವುದರಿಂದ ಈ ಆತಂಕ ಮತ್ತಷ್ಟು ಹೆಚ್ಚಿದೆ. ಈ ಸಮೀಕ್ಷೆಯ ಮೂಲಕ, ರಾಜ್ಯದ ಕೆಲವು ಭಾಗಗಳಲ್ಲಿ ಕಂಡುಬAದಿರುವ ಬರಗಾಲ ಮತ್ತು ಮಳೆಯು ಮುಂದಿನ ಆರ್ಥಿಕ ವರ್ಷದ ಕಾಫಿ ಉತ್ಪಾದನೆಯ ಮೇಲೆ ಬೀರಬಹುದಾದ ಪರಿಣಾಮವನ್ನೂ ಕಾಫಿ ಮಂಡಳಿಯು ಅಂದಾಜಿಸುತ್ತಿದೆ. ಕಾಫಿ ಮಂಡಳಿಯ ಅಧಿಕಾರಿಗಳ ಪ್ರಕಾರ, ೨೦೨೫-೨೬ರ ಆರ್ಥಿಕ ವರ್ಷದಲ್ಲಿ ೩.೬೨ ಲಕ್ಷ ಟನ್ ಕಾಫಿ ಉತ್ಪಾದನೆಯಾಗಿದೆ. ಹೂಬಿಡುವ ಅವಧಿಯನ್ನು ಗಮನಿಸಿದಾಗ, ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಮಂಡಳಿಯು ಉತ್ಪಾದನೆಯು ೩.೮೦ ರಿಂದ ೪ ಲಕ್ಷ ಟನ್ ಇರಬಹುದು ಎಂದು ಅಂದಾಜಿಸಿತ್ತು. ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಂಡಳಿಯ ಹಿರಿಯ ಸದಸ್ಯರೊಬ್ಬರು ಮಾತನಾಡಿ “ಕರ್ನಾಟಕದಲ್ಲಿ ಪ್ರಸ್ತುತ ಸುಮಾರು ೨.೪೬ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ಇಲ್ಲಿ ಬೆಳೆ ವಿಸ್ತರಣೆಗೆ ಸೀಮಿತ ಅವಕಾಶವಿದೆ. ಈಶಾನ್ಯ ಭಾರತ ಮತ್ತು ಆಂಧ್ರಪ್ರದೇಶದ ಪ್ರದೇಶಗಳಲ್ಲದೆ, ಶಿವಮೊಗ್ಗ ಮತ್ತು ಸಾಗರದಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳನ್ನು ಕಾಫಿ ಕೃಷಿಗೆ ಬಳಸಿಕೊಳ್ಳುವ ಬಗ್ಗೆಯೂ ಮಂಡಳಿ ಪರಿಶೀಲಿಸುತ್ತಿದೆ. ಆದರೆ, ಭೂಮಿಯನ್ನು ವಶಪಡಿಸಿಕೊಂಡರೆ ಅಥವಾ ಸಂರಕ್ಷಿತ ಪ್ರದೇಶಗಳೆಂದು ಘೋಷಿಸಿದರೆ, ನೆರಳಿನಲ್ಲಿ ಬೆಳೆಯುವ ಕಾಫಿಗೆ ಸೂಕ್ತವಾದ ರಾಜ್ಯದ ಕಾಫಿ ತೋಟಗಳು ನಾಶವಾಗಲಿವೆ. ಭಾರತದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕವು ಶೇಕಡಾ ೭೦ರಷ್ಟು ಪಾಲನ್ನು ಹೊಂದಿದೆ ಮತ್ತು ೨೦೪೭ರ ವೇಳೆಗೆ ರಾಜ್ಯದಲ್ಲಿ ಕಾಫಿ ಉತ್ಪಾದನೆಯನ್ನು ೭ ಲಕ್ಷ ಟನ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ, ಭೂಮಿಯ ಲಭ್ಯತೆಯ ಕೊರತೆ, ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷ ಮತ್ತು ಬಫರ್ ವಲಯದ ನಿಯಮಗಳಂತಹ ಕಾರಣಗಳಿಂದಾಗಿ ಈ ಗುರಿಯನ್ನು ತಲುಪುವುದು ಕಷ್ಟಸಾಧ್ಯವೆಂದು ತೋರುತ್ತದೆ ಎಂದು ಅವರು ಹೇಳಿದರು.