ಕೂಡಿಗೆ, ಸೆ. ೨೩: ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಟಿಂಬರ್‌ಗಳನ್ನು ತುಂಬಿಕೊAಡು ಅಪಾಯಕಾರಿ ರೀತಿಯಲ್ಲಿ ಸಾಗಿಸುತ್ತಿದ್ದ ನಾಲ್ಕು ಲಾರಿಗಳನ್ನು ಕುಶಾಲನಗರ ಸಂಚಾರ ಪೊಲೀಸರು ಹಾಸನ ಹೆದ್ದಾರಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕ ಹಾಗೂ ಲಾರಿಯ ಡೋರ್‌ನಿಂದ ಹೊರಗೆ ಚಾಚಿಕೊಂಡ ರೀತಿಯಲ್ಲಿ ಟಿಂಬರ್‌ಗಳನ್ನು ತುಂಬಿಸಿ ಅಸುರಕ್ಷಿತವಾಗಿ ಸಾಗಿಸುತ್ತಿದ್ದುದನ್ನು ಗಮನಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕುಶಾಲನಗರ ಪೊಲೀಸ್ ನಿರೀಕ್ಷಕ ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಲಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಕುಶಾಲನಗರ ಸಂಚಾರ ಠಾಣಾಧಿಕಾರಿ ಗೀತಾ ಅವರು ಸಂಚಾರ ನಿಯಮಾನುಸಾರ ಕ್ರಮ ಕೈಗೊಂಡಿದ್ದಾರೆ.
ಮರ ಸಾಗಾಟದ ಲಾರಿಗಳು ಸುಂಟಿಕೊಪ್ಪದಿAದ ಮರದ ನಾಟಾಗಳನ್ನು ಗಳನ್ನು ಹರಾಜು ಮೂಲಕ ಪಡೆದು, ಬಳಿಕ ಚಿಕ್ಕಮಗಳೂರು ಜಿಲ್ಲೆಗೆ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ.
ಲಾರಿಗಳನ್ನು ತಡೆದು ಪರಿಶೀಲನೆ ನಡೆಸಿದ ಬಳಿಕ ಸಂಚಾರ ಮುಂದಿನ ಕ್ರಮಕ್ಕಾಗಿ ಜಿಲ್ಲಾ ಆರ್‌ಟಿಒ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.