ಮಡಿಕೇರಿ, ಸೆ. ೨೨: ಮಡಿಕೇರಿ ಪ್ರಧಾನ ಅಂಚೆ ಕಚೇರಿಯಲ್ಲಿ ತಾ. ೨೩ ರಿಂದ ತಾ. ೨೫ ರವರೆಗೆ ಮೂರು ದಿನಗಳ ಕಾಲ ಆಧಾರ್ ನೋಂದಣಿ ಮತ್ತು ತಿದ್ದುಪಡಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.

ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡು, ತಮ್ಮ ಆಧಾರ್ ನೋಂದಣಿ ಹಾಗೂ ಆಧಾರ್ ವಿವರಗಳ ತಿದ್ದುಪಡಿಯನ್ನು ಮಾಡಿಸಿಕೊಳ್ಳುವಂತೆ ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.